ಈ ಜಿಲ್ಲೆ ಬೆಂಗಳೂರಿನದ್ದೇ, ಬೆಂಗಳೂರಿಗೆ ಸೇರುತ್ತೆ: ಡಿಕೆಸು

KannadaprabhaNewsNetwork | Published : Nov 1, 2023 1:00 AM

ಸಾರಾಂಶ

ಹಾರೋಹಳ್ಳಿ: ರಾಮನಗರ ಜಿಲ್ಲೆಯು ಬೆಂಗಳೂರಿನಿಂದಲೇ ಬೇರ್ಪಟ್ಟಿದೆ. ಇದೀಗ ಜನರ ಹಿತದೃಷ್ಟಿಯಿಂದ ಬೆಂಗಳೂರಿಗೇ ಸೇರಲಿದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು.
ಹಾರೋಹಳ್ಳಿ: ರಾಮನಗರ ಜಿಲ್ಲೆಯು ಬೆಂಗಳೂರಿನಿಂದಲೇ ಬೇರ್ಪಟ್ಟಿದೆ. ಇದೀಗ ಜನರ ಹಿತದೃಷ್ಟಿಯಿಂದ ಬೆಂಗಳೂರಿಗೇ ಸೇರಲಿದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು. ತಾಲೂಕಿನ ದೊಡ್ದ ಮುದವಾಡಿ, ಕೊಟ್ಟಗಾಳು, ಕೊಳ್ಳಿಗನಹಳ್ಳಿ, ಚೀಲೂರು ಗ್ರಾಪಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿಗೆ ಸೇರಿತ್ತು. ಮುಂದೆಯೂ ಬೆಂಗಳೂರಿಗೆ ಸೇರುತ್ತದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಕೇಂದ್ರ ಇದೀಗ ಹೇಗಿದೆಯೋ ಹಾಗೇ ಇರಲಿದೆ. ಹೆಸರು ಮಾತ್ರ ಬದಲಾವಣೆಯಾಗಲಿದೆ. ಕೆಲವರು ಅದನ್ನು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಕೆಲವರು ಬರೀ ಬಿಲ್ಡಿಂಗ್‌ ಗಳಿಗೆ ಬಣ್ಣ ಹೊಡೆಸಿದರೆ ಸಾಕು ಎನ್ನುತ್ತಾರೆ. ಆದರೆ, ಜನರು ಸಾವಿರಾರು ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ಜನರು ಇ-ಖಾತೆಗಳನ್ನು ಮಾಡಿಸಲು ಅಲೆದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಇ-ಖಾತೆ ಮಾಡಿಕೊಡಲಿದ್ದಾರೆ. ಕೆಲವರಿಗೆ ಇ ಖಾತೆ ಬಗ್ಗೆಯೇ ತಿಳಿದಿಲ್ಲ. ಸುಮ್ಮನೇ ಮಾಧ್ಯಮಗಳಲ್ಲಿ ಕುಳಿತು ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇನ್ನು ಗ್ಯಾರಂಟಿ ಯೋಜನೆಗಳಿಂದಾಗಿ ಜೆಡಿಎಸ್ ಮತ್ತು ಬಿಜೆಪಿಯವರಿಗೆ ಹೊಟ್ಟೆಯಲ್ಲಿ ಹುಳು ಬಿಟ್ಟಂತಾಗಿದೆ. ಅವರೆಲ್ಲರೂ ಏನು ಬೇಕಾದರೂ ಮಾತನಾಡಿಕೊಳ್ಳಲಿ. ಜನರ ಎಲ್ಲ ಸಮಸ್ಯೆಗಳನ್ನು ಗಮನಹರಿಸಲಾಗುವುದು. 5 ಗ್ಯಾರಂಟಿಗಳನ್ನು ಯಾವುದೇ ಜಾತಿ, ಪಕ್ಷೇಗಳಿಗೆ ವಿಂಗಡಣೆ ಮಾಡಿ ಕೊಡುತ್ತಿಲ್ಲ. ಎಲ್ಲರಿಗೂ ನೀಡುತ್ತಿದ್ದೇವೆ. ಅರ್ಹ ಫಲನುಭವಿಗಳಿಗೆ 4 ಗ್ಯಾರಂಟಿಗಳು ತಲುಪಿವೆ. ನಮ್ಮ ಜಿಲ್ಲೆಗೆ ಪ್ರತಿ ತಿಂಗಳು 50 ಕೋಟಿ ಹಣ ಬರುತ್ತಿದೆ. 2.21 ಲಕ್ಷ ಮಂದಿಗೆ ಯೋಜನೆ ತಲುಪುತ್ತಿದೆ. ಕಾರಣಾಂತರಗಳಿಂದ ಕೆಲವರಿಗೆ ಬಂದಿಲ್ಲ ಅಷ್ಟೇ. ಕೆಲವರು ಮೋದಿ ದುಡ್ಡು ಕೊಡುತ್ತಾರೆ ಎಂದು ಅಕೌಂಟ್ ಮಾಡಿಸಿದ್ದಾರೆ. ಇದುವರೆಗೂ 1 ರುಪಾಯಿ ಹಣ ಬಂದಿಲ್ಲ ಎಂದು ಸುರೇಶ್‌ ಲೇವಡಿ ಮಾಡಿದರು. ಶಾಸಕ ಇಕ್ಬಾಲ್ ಹುಸೇನ್ , ಮಾಜಿ ಶಾಸಕ ಕೆ.ರಾಜು ಮತ್ತಿತರರು ಹಾಜರಿದ್ದರು. 31ಕೆಆರ್ ಎಂಎನ್‌ 12.ಜೆಪಿಜಿ ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.

Share this article