ಹಾವೇರಿ: ಬೇಸಿಗೆ ರಜೆ ಮುಗಿಯುತ್ತ ಬಂದಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಜೂ. 1ರಿಂದ ಆರಂಭವಾಗಲಿದೆ. ಅದಕ್ಕಾಗಿ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ವಿಶೇಷವಾಗಿ ಈ ಬಾರಿ ಶೈಕ್ಷಣಿಕ ವರ್ಷ ಆರಂಭದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ಸಿಗಲಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಸಮಸ್ಯೆಯಿಂದ ಈ ಬಾರಿ ಕೊರುಗುವುದು ಬೇಕಿಲ್ಲ. ಜಿಲ್ಲೆಯ ಬೇಡಿಕೆಯಂತೆ ಈಗಾಗಲೇ ಭಾಗಶಃ ಪಠ್ಯಪುಸ್ತಕಗಳನ್ನು ಶಿಕ್ಷಣ ಇಲಾಖೆ ಪೂರೈಸಿದ್ದು, ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳ ಕೈಗೆ ಪುಸ್ತಕಗಳು ತಲುಪಲಿವೆ. ಜಿಲ್ಲೆಯ 8 ತಾಲೂಕುಗಳಲ್ಲಿ 1118 ಪ್ರಾಥಮಿಕ ಶಾಲೆ ಹಾಗೂ 165 ಪ್ರೌಢಶಾಲೆ ಸೇರಿ ಒಟ್ಟು 1283 ಶಾಲೆಗಳಿದ್ದು, ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವ ಕೆಲಸ ನಡೆದಿದೆ.
ಶೇ. 72.82ರಷ್ಟು ಪಠ್ಯಪುಸ್ತಕ ಪೂರೈಕೆ: ಬೇಸಿಗೆ ರಜೆ ಪೂರ್ಣಗೊಳಿಸಿ ಶಾಲೆಗಳ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಶಿಕ್ಷಣ ಇಲಾಖೆಯಿಂದ ಶಾಲಾ ಆರಂಭಕ್ಕೆ ಅಗತ್ಯವಾಗಿರುವ ಪಠ್ಯಪುಸ್ತಕ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳುವ ಮೂಲಕ ಶೈಕ್ಷಣಿಕ ವರ್ಷ ಆರಂಭಕ್ಕೆ ಇಲಾಖೆ ಅಗತ್ಯ ತಯಾರಿ ನಡೆಸಿದೆ. ಜಿಲ್ಲಾದ್ಯಂತ ಇರುವ 1-10ನೇ ತರಗತಿ ವರೆಗೆ ವಿಷಯವಾರು, ಮಾಧ್ಯಮವಾರು ಸೇರಿ ಒಟ್ಟು 21,49,267 ಪುಸ್ತಕಗಳ ಬೇಡಿಕೆಯ ಪೈಕಿ ಈಗಾಗಲೇ 15,65,099 ಪಠ್ಯಪುಸ್ತಕಗಳು ಪೂರೈಕೆಯಾಗಿವೆ. 13,53,757 ಪುಸ್ತಕಗಳನ್ನು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಈ ವರೆಗೆ ಶೇ. 72.82ರಷ್ಟು ಪುಸ್ತಕಗಳು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದು ಶಾಲೆಗಳಿಗೆ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಶಾಲೆ ಆರಂಭದ ದಿನವೇ ಪುಸ್ತಕ ವಿತರಣೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಆರಂಭಕ್ಕೂ ಮುನ್ನ ಮಕ್ಕಳ ಕೈಗೆ ಪಠ್ಯಪುಸ್ತಕಗಳನ್ನು ಒದಗಿಸಲು ಇಲಾಖೆ ಕೈಗೊಡಿರುವ ಕ್ರಮ ಶಿಕ್ಷಣಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಬೇಕಾದ ಪಠ್ಯಪುಸ್ತಕಗಳನ್ನು ಇಲಾಖೆ ಈಗಾಗಲೇ ಪೂರೈಸುತ್ತಿದ್ದು, ಶೇ. 72.82ರಷ್ಟು ಪುಸ್ತಕಗಳು ಬಂದಿವೆ. ಇನ್ನೂ ಎರಡ್ಮೂರು ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳು ಪೂರೈಕೆಯಾಗಲಿದ್ದು, ಮೇ 29ರೊಳಗೆ ಎಲ್ಲ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಉಚಿತ ಹಾಗೂ ಮಾರಾಟ ಪುಸ್ತಕಗಳು ಬಂದಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ.
ನಿಗಾ ವಹಿಸಲಾಗಿದೆ: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಪೂರೈಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಶೇ. 72.82ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿದ್ದು, ಉಳಿದ ಪಠ್ಯಪುಸಕ್ತಗಳು ಎರಡ್ಮೂರು ದಿನಗಳಲ್ಲಿ ಪೂರೈಕೆಯಾಗಲಿದೆ. ವಿದ್ಯಾರ್ಥಿಗಳಿಗೆ ಶಾಲಾ ಆರಂಭದ ಮೊದಲ ದಿನವೇ ಪಠ್ಯಪುಸ್ತಕ ವಿತರಣೆಗೆ ಸಿದ್ಧತೆ ನಡೆಸಿದ್ದು, ಯಾವುದೇ ತೊಂದರೆ ಆಗದಂತೆ ಎಲ್ಲ ತಾಲೂಕುಗಳಲ್ಲಿ ನಿಗಾ ವಹಿಸಲಾಗಿದೆ ಎಂದು ಹಾವೇರಿ ಡಿಡಿಪಿಐ ಮೋಹನ್ ದಂಡಿನ್ ಹೇಳಿದರು.
ಪಠ್ಯಪುಸ್ತಕ ಪೂರೈಕೆ ಕುರಿತು ತಾಲೂಕುವಾರು ಮಾಹಿತಿ...
ಬ್ಯಾಡಗಿ199702147682
ಹಿರೇಕೆರೂರು280503204709ರಾಣಿಬೆನ್ನೂರು384635287163
ಶಿಗ್ಗಾಂವಿ287823206936