ಈ ಬಾರಿಯೂ ವಿಜೃಂಭಣೆಯ ತುಮಕೂರು ದಸರಾ

KannadaprabhaNewsNetwork |  
Published : Aug 17, 2025, 01:33 AM IST
ಕ್ಯಾಪ್ಶನ್.... ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭವಿ ಸಭೆಯಲ್ಲಿ ಡಾ. ಜಿ. ಪರಮೇಶ್ವರ್ ಮಾತನಾಡಿದರು. | Kannada Prabha

ಸಾರಾಂಶ

ಪ್ರಸಕ್ತ ಸಾಲಿನಲ್ಲಿ 11 ದಿನಗಳ ತುಮಕೂರು ದಸರಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಹಲವು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರಸಕ್ತ ಸಾಲಿನಲ್ಲಿ 11 ದಿನಗಳ ತುಮಕೂರು ದಸರಾ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಹಲವು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ತುಮಕೂರು ದಸರಾ -2025 ರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ 9 ದಿನಗಳ ಕಾಲ ನಡೆದಿದ್ದ ತುಮಕೂರು ದಸರಾ ಈ ಬಾರಿ ಪಂಚಾಂಗದ ಪ್ರಕಾರ 11 ದಿನಗಳ ಕಾಲ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದು ಈ ಬಾರಿಯ ತುಮಕೂರು ದಸರಾ ಕಳೆದ ಬಾರಿಗಿಂತಲೂ ಹಲವು ವಿಶೇಷತೆಗಳಿಂದ ಕೂಡಿರಲಿದೆ ಎಂದು ಅವರು ತಿಳಿಸಿದರು.ದಸರಾ ಆಚರಣೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಡಳಿತ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿದೆ ಎಂದ ಅವರು, ಸೆ.8 ರಂದು ತುಮಕೂರು ದಸರಾ-2025 ರ ಲಾಂಛನ ಬಿಡುಗಡೆ ಮಾಡಲಾಗುವುದು ಹಾಗೂ ಸೆ.22 ರಿಂದ ಅಕ್ಟೋಬರ್2 ರವರೆಗೆ ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಹಾಗೂ ದಸರಾ ಮಹೋತ್ಸವ ನಡೆಯಲಿದೆಎಂದರು.ಕಳೆದ ಬಾರಿಯಂತೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನವರಾತ್ರಿಯ ಪೂಜಾ ಕೈಂಕರ್ಯದಗಳು ನಡೆಯಲಿದ್ದು, ನವದುರ್ಗೆಯವರಿಗೆ ದಿನವೂ ವಿಶೇಷ ಅಲಂಕಾರ, ಪೂಜಾ ವಿಧಿ ವಿಧಾನ, ಹೋಮ, ಹವನಗಳು ನಡೆಯಲಿವೆ. ಹಾಗೂ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಾಕ್ರಮಗಳು ಜರುಗಲಿವೆ.ಸೆಪ್ಟೆಂಬರ್ 22 ರಂದು ಮೊದಲ ದಿನವೇ ಗಾಜಿನಮನೆಯಲ್ಲಿ ಫಲಪುಷ್ಟ ಪ್ರದರ್ಶನ, ನಗರಾದ್ಯಂತ ವಿಶೇಷ ವಿದ್ಯುತ್ ದೀಪಾಲಂಕಾರ ಉದ್ಘಾಟನೆ ಹಾಗೂ ದಸರಾ ವಿಶೇಷವಾಗಿ ಸಾರ್ವಜನಿಕರಿಗೆ ನಗರ ವೀಕ್ಷಣೆಗಾಗಿ ಉಚಿತ ಅಂಬಾರಿ ವಿಶೇಷ ಬಸ್ ಗೆ ಚಾಲನೆ ನೀಡಲಾಗುವುದು ಎಂದರು.ಇದಲ್ಲದೆ ಮಹಿಳಾ ಮತ್ತು ಮಕ್ಕಳ ದಸರಾ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಯುವ ದಸರಾ, ಕವಿಗೋಷ್ಠಿ, ವಿಶೇಷ ಕಾರ್ ಷೋ, ವಿಂಟೇಜ್ ಬೈಕ್ ಷೋ ಇತ್ಯಾದಿ ಕಾರ್ಯಕ್ರಮಗಳು ದಿನವೂ ಸಾರ್ವಜನಿಕರ ವೀಕ್ಷಣೆಗೆ ಹಾಗೂ ಮನರಂಜನೆಗಾಗಿ ಏರ್ಪಡಿಸಲಾಗುತ್ತಿದೆ ಎಂದರು.ಪಂಜಿನಕವಾಯತು ಹಾಗೂ ದ್ರೋಣ್ ಪ್ರದರ್ಶನವನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಿಶೇಷವಾಗಿ ಏರ್ಪಡಿಸಲಾಗುತ್ತಿದ್ದು ಚೆನ್ನೈನಿಂದ ಆಗಮಿಸಿರುವ ಪರಿಣಿತರು ನಮ್ಮ ಪೊಲೀಸ್ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಕೊನೆಯ ಮೂರು ದಿನಗಳು ಈ ಬಾರಿ ವಿಶೇಷ ಮನರಂಜನಾ ಕಾರ್ಯಾಕ್ರಮವನ್ನು ಆಯೋಜಿಸುತ್ತಿದ್ದು ಇದಕ್ಕಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು, ನಟರನ್ನು ಸಂಪರ್ಕಿಸಲಾಗಿದೆ ಎಂದರು.ಕೊನೆಯ ದಿನವಾದ ಅ.2 ರಂದು ಜಂಬೂ ಸವಾರಿ ಮೆರವಣಿಗೆ ಕೂಡ ಮೈಸೂರು ದಸರಾ ಮಾದರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು ನಾಡಿನ ಹೆಸರಾಂತ ಜಾನಪದ ಕಲಾ ತಂಡಗಳು, ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂಸಿಇಒ ಪ್ರಭು ಜಿ. ಎಸ್ಪಿ ಅಶೋಕ್ ಕೆ.ವಿ. ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಆಶ್ವಿಜ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌