ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಐತಿಹಾಸಿಕ ತೊಣ್ಣೂರುಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಕ್ರವಾರ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದರು.ನಂತರ ಮಾತನಾಡಿದ ಶಾಸಕರು, ಶಾಸಕನಾದ ಬಳಿಕ ಎರಡನೇ ಬಾರಿಗೆ ಐತಿಹಾಸಿಕ ಕೆರೆತೊಣ್ಣೂರಿಗೆ ಬಾಗಿನ ಅರ್ಪಿಸಿದ್ದೇನೆ. ಕೆರೆಯೂ ಭಾಗದ ಜನಜಾನುವಾರುಗಳ ಕುಡಿಯುವ ನೀರಿನ ಜತೆಗೆ ನೂರಾರು ಎಕರೆ ಪ್ರದೇಶದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಮೂಲಕ ರೈತರ ಬದುಕಿಗೆ ನೆರವಾಗಿದೆ ಎಂದರು.
ಕೆರೆತೊಣ್ಣೂರು ಹಾಗೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆ ಮೂಲಕ ಕೆರೆತೊಣ್ಣೂರು ಹಾಗೂ ಮೇಲುಕೋಟೆ ಕ್ಷೇತ್ರವನ್ನು ಅಭಿವೃದ್ಧಿಗೆ ಕ್ರಮ ವಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.ಹೇಮಾವತಿ ನಾಲೆ ಅಚ್ಚುಕಟ್ಟು ವ್ಯಾಪ್ತಿಯ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ₹35 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕೆಲಸವನ್ನು ಆರಂಭಿಸಲಾಗುವುದು. ಇದಕ್ಕೂ ಮೊದಲು 32 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದರು.
ಇದೇ ವೇಳೆ ಕೆರೆತೊಣ್ಣೂರು ಅಚ್ಚುಕಟ್ಟು ಸಮಪರ್ಕವಾಗಿ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ರೈತರು ತರಾಟೆ ತೆಗೆದುಕೊಂಡರು. ಈ ವೇಳೆ ಹೇಮಾವತಿ ನೀರಾವರಿ ಇಲಾಖೆ ಎಂಜಿನಿಯರ್‌ಗಳಾದ ಗಂಗಾಧರ್, ಶ್ರೀನಾಥ್, ರಾಘವೇಂದ್ರ, ಪುಟ್ಟಮಾಯಿಗೌಡ, ಪುನೀತ್, ಆನಂದ್, ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರಾದ ಭಾರತಿ, ಶಶಿಕಲಾ, ಕೆಂಪೇಗೌಡ, ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಎಸ್.ಹಾಳಯ್ಯ, ಮಾಜಿ ನಿರ್ದೇಶಕ ಕೆ.ಎಸ್.ದಯಾನಂದ್, ರೈತ ಮುಖಂಡರಾದ ಕೋಟಿಶಂಕರ್ ಚಿಕ್ಕಾಡೆ ಹರೀಶ್, ವಿಜಿಕುಮಾರ್, ಅಮೃತಿ ರಾಜಶೇಖರ್, ಯಜಮಾನರಾದ ರವಿ, ಬೆಟ್ಟೇಗೌಡ ಸೇರಿದಂತೆ ಕೆರೆತೊಣ್ಣೂರು, ಲಕ್ಷ್ಮೀಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಯಜಮಾನರು ಹಾಜರಿದ್ದರು.