ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 24 ತಾಸಲ್ಲಿ 11 ಸಾವು - ವೈದ್ಯರ ಕೊರತೆ ಆರೋಪ

KannadaprabhaNewsNetwork |  
Published : Jun 18, 2026, 03:00 AM ISTUpdated : Jun 18, 2026, 04:13 AM IST
Jayadeva

ಸಾರಾಂಶ

- ವೈದ್ಯರ ಕೊರತೆ ತೀವ್ರವಾಗೇನು ಇಲ್ಲ, ಅಗತ್ಯ ಸಿಬ್ಬಂದಿ ಇದ್ದಾರೆ, ಸಮರ್ಪಣಾ ಮನೋಭಾವಕ್ಕೆ ಹೆಸರಾದ ವೈದ್ಯರು ಆಸ್ಪತ್ರೆ ವಿಸ್ತರಣೆ ಬಳಿಕ ಮತ್ತಷ್ಟು ವೈದ್ಯರ ನೇಮಕಕ್ಕೆ ಸರ್ಕಾರ ಒಪ್ಪಿದೆ

  ಮೈಸೂರು : ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಕೊರತೆಯೇ ಕಾರಣ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ 8 ಮಂದಿ ಸಾವಿಗೀಡಾಗಿದ್ದಾರೆ

ಕಳೆದ ಎರಡು ದಿನಗಳಲ್ಲಿ ಸೋಮವಾರ 4, ಮಂಗಳವಾರ 8 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ 11 ಮಂದಿ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ನಿನ್ನೆ ಇಡೀ ದಿನ ಒಬ್ಬರ ಹಿಂದೆ ಒಬ್ಬರಂತೆ 8 ಮಂದಿ ಸಾವಿಗೀಡಾಗಿದ್ದನ್ನು ಗಮನಿಸಿದ ರೋಗಿಗಳ ಸಂಬಂಧಿಕರು, ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರ ಕೊರತೆಯೇ ಇದಕ್ಕೆ ಕಾರಣ. ಹೃದ್ರೋಗದಿಂದ ಬರುವವರಿಗೆ ಒಂದೊಂದು ನಿಮಿಷವೂ ಮುಖ್ಯ. 

ಒಂದೇ ದಿನದಲ್ಲಿ 11 ಮಂದಿ ಸಾವಿಗೀಡಾದ ಸುದ್ದಿ

ಆದರೆ ಇಂತಹ ಪರಿಸ್ಥಿತಿಯಲ್ಲಿ ವೈದ್ಯರಿಲ್ಲದೇ ಸಾವಿಗೀಡಾಗುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 11 ಮಂದಿ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ನಿರ್ದೇಶಕ ಡಾ.ಬಿ. ದಿನೇಶ್‌ ಬೆಂಗಳೂರಿನಿಂದ ಧಾವಿಸಿ, ಬಂದು ಸ್ಥಳೀಯ ವೈದ್ಯಕೀಯ ನಿರ್ದೇಶಕ ಡಾ.ಕೆ.ಎಸ್‌. ಸದಾನಂದ ಅವರೊಡಗೂಡಿ ತುರ್ತು ಸುದ್ದಿಗೋಷ್ಠಿ ನಡೆಸಿದರು. 

ಸಂಜೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಕೂಡ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಾಮರ್ಶಿಸಿದರು.ಕಳೆದ 24 ಗಂಟೆಯಲ್ಲಿ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿಲ್ಲ. ಏಕೆಂದರೆ ಇಲ್ಲಿರುವ ವೈದ್ಯರು ಸಮರ್ಪಣಾ ಮನೋಭಾವ ಎಂಬ ಪದಕ್ಕೆ ಪರ್ಯಾಯ ಎಂಬಂತೆ ಕೆಲಸ ಮಾಡುತ್ತಿದ್ದಾರೆ.  

ಗೋಲ್ಡನ್‌ ಹವರ್‌ ಮೀರಿ ಬಂದವರು ಸಾವಿಗೀಡಾಗಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್‌ ಎಂದು ಸುದ್ದಿಗೋಷ್ಠಿಯಲ್ಲಿ ಸಮಜಾಯಿಷಿ ನೀಡಿದರು.ರೋಗಿಗಳಿಗೆ ಚಿಕಿತ್ಸೆ ಕೊಡುವುದು ಬದುಕುಳಿಯಬೇಕು ಎನ್ನುವ ಉದ್ದೇಶದಿಂದ. ಆದೇ ಕಾರಣದಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. ಸಂಸ್ಥೆ ಎಂದೂ ಕೂಡ ಮೊದಲು ಹಣವನ್ನು ನೋಡುವುದಿಲ್ಲ. ಬದಲಿಗೆ ಮೊದಲು ಚಿಕಿತ್ಸೆ ಕೊಡುತ್ತೇವೆ. ಇಲ್ಲಿನ ವೈದ್ಯರು ಸಮರ್ಪಣಾ ಮನೋಭಾವದಿಂದಲೇ ಕೆಲಸ ಮಾಡುತ್ತಾರೆ. ಮೃತ 11 ಜನ ಗೋಲ್ಡನ್ ಹವರ್ ಮೀರಿ ಬಂದಿದ್ದಾರೆ ಎಂದರು.

ಡಾ. ಸದಾನಂದ ಇಲ್ಲಿ ಚೆನ್ನಾಗಿ ಆಡಳಿತ ನಿರ್ವಹಣೆ ಮಡುತ್ತಿದ್ದಾರೆ. ಮೃತರೆಲ್ಲರೂ ಹೃದಯಾಘಾತ ಆಗಿ ಬಂದವರು ಹಾಗೂ ತುಂಬಾ ವಯಸ್ಸಾದವರು. ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಇಲ್ಲಿಗೆ ಬರುವವರಗೆ ಜೀವನ್ಮರಣದಿಂದ ಹೋರಾಟ ನಡೆಸಿದ್ದಾರೆ. ಜೊತೆಗೆ ಡಯಾಬಿಟಿಸ್ ರೋಗಿಗಳು ಆಗಿದ್ದಾರೆ. ಈ ರೀತಿಯ ಸನ್ನಿವೇಶದಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ ಶೇ. 09 ರಷ್ಟು ಇರುತ್ತದೆ ಎಂದು ಹೇಳಿದರು. 

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ವೈದ್ಯರ ಕೊರತೆ ಎಂಬುದು ಸುಳ್ಳು ಆರೋಪ. ನಮ್ಮ ಆಸ್ಪತ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.ಕೆಲವು ಕಡೆ ತಪ್ಪು ಸುದ್ದಿ ಹರಡಲಾಗಿದೆ. ಆಸ್ಪತ್ರೆಯಲ್ಲಿ 40 ಮಂದಿ ವೈದ್ಯರಿದ್ದಾರೆ. 24 ಜನ ಕಾರ್ಡೀಯೋಲಾಜಿಸ್ಟ್ ಇದ್ದಾರೆ. 10 ಮಂದಿ ಅನಸ್ಥಾಸಿಯೇಸ್ಟ್ ಒಬ್ಬರು ಸರ್ಜನ್ ಇದ್ದಾರೆ. ಪೋಸ್ಟ್ ಗ್ರ್ಯಾಜುಯೇಟ್ಸ್ 10 ಜನ ವೈದ್ಯರು ಇದ್ದಾರೆ ಎಂದು ಆಸ್ಪತ್ರೆಯಲ್ಲಿನ ವೈದ್ಯರ ಪ್ರಮಾಣವನ್ನು ತೆರೆದಿಟ್ಟರು. 

ಕಳೆದ ಬೇಸಿಗೆ ಯಿಂದ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಸುಮಾರು ಶೇ. 5 ರಿಂದ 8ರಷ್ಟು ವೈದ್ಯರ ಅವಶ್ಯಕತೆ ಇದೆ. ರಾಜ್ಯಾದ್ಯಂತ 24 ವೈದ್ಯರ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಮುಂದಿನ ಒಂದು ತಿಂಗಳಲ್ಲಿ ಈ ಕೊರತ ನೀಗಸಲಿದ್ದು, 200 ಬೆಡ್ ವಿಸ್ತರಣೆ ಆಗುತ್ತಿದ್ದು, ಈ ಪೈಕಿ 60 ಬೆಡ್ ಐಸಿಯು ಇರಲಿದೆ ಎಂದರು.ಚಾಮರಾಜನಗರ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಜಯದೇವ ಸಬ್ ಸೆಂಟರ್ ಆರಂಭವಾಗುವುದು. ಮುಂದಿನ ದಿನಗಳಲ್ಲಿ ಸುತ್ತಲೂ ಇರುವ ಜಿಲ್ಲೆಯಲ್ಲಿ ಸಬ್ ಸೆಂಟರ್ ನಿರ್ಮಿಸುವುದಾಗಿ ಅವರು ತಿಳಿಸಿದರು.ಹಣ ಇರಲಿ, ಇಲ್ಲದಿರಲಿ , ಮೊದಲು ಚಿಕಿತ್ಸೆ ನೀಡುವ ಉದ್ದೇಶವನ್ನು ಜಯದೇವ ಹೃದ್ರೋಗ ಆಸ್ಪತ್ರೆ ಹೊಂದಿದೆ ಎಂದು ಅವರು ಹೇಳಿದರು. 

  ಗೋಲ್ಡನ್ ಹವರ್‌ ಮೀರಿ ಬಂದವರು 

ಕಳೆದ 24 ಗಂಟೆಗಳಲ್ಲಿ ಮೃತಪಟ್ಟ ಹನ್ನೊಂದು ಮಂದಿಯು ಗೋಲ್ಡನ್‌ ಹವರ್‌ ಮೀರಿದ ಮೇಲೆ ಆಸ್ಪತ್ರೆಗೆ ದಾಖಲಾದವರು. ಇಂತಹ ಸಂದರ್ಭದಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ ಶೇ. 09 ಮಾತ್ರ. ಕಳೆದ 24 ಗಂಟೆಗಳಲ್ಲಿ ಹನ್ನೊಂದು ಜನ ಮೃತರಾದರೆ ಎರಡು ದಿನದ ಲೆಕ್ಕದಲ್ಲಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. 

 24 ಗಂಟೆಯಲ್ಲಿ ಮೃತರಾದ ಹನ್ನೊಂದು ಮಂದಿಯು ಗೋಲ್ಡನ್ ಹವರ್ ಮೀರಿ ಬಂದವರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಔಷಧೋಪಚಾರ ಮಾಡಲಾಗುತ್ತಿತ್ತು. ಅವರೆಲ್ಲರೂ ಒಂದು ದಿನ ಆಸ್ಪತ್ರೆಗೆ ದಾಖಲಾದವರಲ್ಲ. ಆಸ್ಪತ್ರೆಗೆ ಪ್ರತಿದಿನ 600 ರಿಂದ 800 ಮಂದಿ ರೋಗಿಗಳು ಬರುತ್ತಾರೆ. ಈ ಪೈಕಿ ಶೇ. 20ರಷ್ಟು ಮಂದಿ ತೀವ್ರ ಅನಾರೋಗ್ಯದಿಂದ ಬರುತ್ತಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ವೆನ್ನಿಲಾ ಕೇಸ್‌: ಕೊಲೆಗೂ ಮುನ್ನಬಾಲಕಿಗೆ ಆರೋಪಿಗಳಿಂದ ದೌರ್ಜನ್ಯ
ಆಡುವಾಗ ಕೌಂಪೌಂಡ್ಬಿದ್ದು 5ರ ಮಗು ಸಾವು