ರಕ್ತದಾನದಿಂದ ಜೀವ ಉಳಿಸುವವರು ಜೀವಸಂರಕ್ಷಕರೇ: ಸಿ.ಟಿ.ರವಿ

KannadaprabhaNewsNetwork |  
Published : Mar 23, 2026, 01:15 AM IST
ಸ | Kannada Prabha

ಸಾರಾಂಶ

ಚಿಕ್ಕಮಗಳೂರುರಕ್ತದಾನಕ್ಕೆ ಜಾತಿ ತಾರತಮ್ಯವಿಲ್ಲ. ಶ್ರೀಮಂತಿಕೆ ಎಷ್ಟೇ ಇದ್ದರೂ ತುರ್ತು ವೇಳೆ ರಕ್ತದ ಅವಶ್ಯವಿದ್ದಾಗ ಬಡವ ಅಥವಾ ಶ್ರೀಮಂತನೆಂಬ ಬೇಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ತ್ರಿಮೂರ್ತಿ ದೇಗುಲದಲ್ಲಿ ಡಾಕ್ಟರ್‌ ಜೀಯವರ ಜನ್ಮದಿನಕ್ಕೆ ವಿವೇಕ ಜಾಗೃತ ಬಳಗದ ಬೃಹತ್ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಕ್ತದಾನಕ್ಕೆ ಜಾತಿ ತಾರತಮ್ಯವಿಲ್ಲ. ಶ್ರೀಮಂತಿಕೆ ಎಷ್ಟೇ ಇದ್ದರೂ ತುರ್ತು ವೇಳೆ ರಕ್ತದ ಅವಶ್ಯವಿದ್ದಾಗ ಬಡವ ಅಥವಾ ಶ್ರೀಮಂತನೆಂಬ ಬೇಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಗೃಹ ಮಂಡಳಿ ಬಡಾವಣೆ ಸಮೀಪದ ತ್ರಿಮೂರ್ತಿ ದೇಗುಲದಲ್ಲಿ ಭಾನುವಾರ ಗುರುಗಳಾದ ಡಾಕ್ಟರ್‌ ಜೀಯವರ ಜನ್ಮದಿನದ ಪ್ರಯುಕ್ತ ವಿವೇಕ ಜಾಗೃತ ಬಳಗದಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಸೇವೆ ಮೂಲಕ ಪರೋಪಕಾರ ಧರ್ಮ ಪಾಲಿಸಬೇಕು. ಮಾನವ ಹಾಗೂ ಮೂಕ ಪ್ರಾಣಿಗಳಿಗೆ ಸ್ಪಂದಿಸುವ ಸೇವಾಗುಣ ಬೆಳೆಸಿಕೊಂಡಲ್ಲಿ ಮನುಷ್ಯನ ಜೀವನ ಸಾರ್ಥಕವಾದಂತೆ ಹಾಗೂ ಇತರರಿಗೂ ಪ್ರೇರಣೆಯಾಗಲಿದೆ. ಆ ನಿಟ್ಟಿನಲ್ಲಿ ರಕ್ತದಾನಿಗಳ ಪಟ್ಟಿಯನ್ನು ಪ್ರತಿವರ್ಷ ಹೆಚ್ಚಿಸಬೇಕು ಎಂದರು.

ರಕ್ತದಾನಿಗಳಿಗೆ ಜಾತಿ-ಧರ್ಮ, ಬಡವ-ಶ್ರೀಮಂತ ಹಾಗೂ ಮೇಳು-ಕೀಳು ಬೇಧವಿಲ್ಲ. ಕೇವಲ ರಕ್ತ ಕಣಕ್ಕೆ ಬೇರೆ ಬೇರೆ ಗ್ರೂಪ್‌ ಗಳಿವೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಮನುಷ್ಯ ಮತ್ತು ಪ್ರಾಣಿ ಎಲ್ಲರನ್ನೊಳಗೊಂಡು ಬದುಕಬೇಕು. ಜಗದ ಕವಿ ಕುವೆಂಪು ಆಶಯ ದಂತೆ ವಿಶ್ವಮಾನವ ಸಂದೇಶವನ್ನು ನಾವುಗಳು ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.ರಕ್ತದಾನದಿಂದ ಹೃದಯ ಸಂಬಂಧ ತೊಂದರೆ ಕಡಿಮೆಯಾಗಲಿದೆ. ಹೊಸ ಕೆಂಪು ರಕ್ತ ಕಣಗಳು ಉತ್ಪತಿಯಾಗಿ ದೇಹ ಹೊಸ ರಕ್ತವನ್ನು ಉತ್ಪಾದಿಸಲಿದೆ ಹಾಗೂ ದೇಹದ ಅಂಗಾಂಗಗಳಲ್ಲಿ ಅನಾವಶ್ಯಕ ಕಬ್ಬಿನಾಂಶ ಕ್ರೂಢೀಕರಣ ಆಗುವುದನ್ನು ತಪ್ಪಿಸುತ್ತದೆ ಎಂದು ಹೇಳಿದರು.ಪ್ರಕೃತಿಯ ಪಂಚ ಭೂತಗಳಾದ ಗಾಳಿ, ನೀರು, ಬೆಳಕು, ಅಗ್ನಿ ಹಾಗೂ ಆಕಾಶವನ್ನು ಪೂಜಿಸಬೇಕು. ನಾನು, ನನ್ನದು ಅಥವಾ ಅಹಂನಲ್ಲಿ ಬದುಕಬಾರದು. ನಾವುಗಳು ಎಂಬುವಂತೆ ಜೀವಿಸಬೇಕು. ಆದರಂತೆ ಡಾಜೀಯವರು ಹಣ, ಕೀರ್ತಿಗೆ ಬದುಕಿದ ವರಲ್ಲ. ಸಮಾಜದ ಏಕತೆ ಹಾಗೂ ಸದ್ವಿಚಾರದಡಿ ಜೀವನ ರೂಪಿ ಸಿಕೊಂಡ ಅಪರೂಪ ವ್ಯಕ್ತಿ ಎಂದರು.ವಿವೇಕ ಜಾಗೃತ ಬಳಗದ ಅಧ್ಯಕ್ಷ ರಾಜೀವ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಡಾ.ಜೀ ಅವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ. ರಕ್ತಕ್ಕೆ ಮತ್ಯಾವ ಪರ್ಯಾಯ ಇಲ್ಲ. ವೈದ್ಯಕೀಯ ಕ್ಷೇತ್ರ ಇಷ್ಟೆಲ್ಲಾ ಮುಂದುವರಿ ದಿದ್ದರೂ ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲಿಯತನ ಕಂಡುಹಿಡಿಯಲಾಗಿಲ್ಲ ಎಂದು ತಿಳಿಸಿದರು.ಮಾನವರು ಮಾತ್ರ ಇನ್ನೋರ್ವ ಮಾನವನಿಗೆ ರಕ್ತದಾನ ಮಾಡಬಹುದು ಹಾಗೂ ಜೀವ ಉಳಿಸಬಹುದು. ಬಹುತೇಕರು ಜನರು ಎಂದಾದರೂ ತಮಗೂ ಕೂಡ ರಕ್ತದ ಅವಶ್ಯಕತೆ ಬೀಳಬಹುದು ಎಂದು ಯೋಚಿಸುವುದಿಲ್ಲ. ಅವಶ್ಯವಿದ್ದಾಗ ಪರದಾ ಡುವ ಸ್ಥಿತಿ ನಿರ್ಮಾಣವಾಗುತ್ತದೆ. ವಾಸ್ತವವಾಗಿ ಓರ್ವ ಆರೋ ಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ ಮೂರು ಮಂದಿ ಜೀವ ಉಳಿಸಲು ಸಾಧ್ಯ ಎಂದರು.ಸಾಂಸ್ಕೃತಿಕ ಚಿಂತಕ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ರಕ್ತದಾನ ಮಾಡುವುದರಿಂದ ಹೆಚ್ಚುವರಿ ಕೊಲೆಸ್ಟ್ರಾಲ್‌ ಕಡಿಮೆ ಗೊಳಿಸಲಿದೆ. ಕ್ಯಾನ್ಸರ್‌ನಂಥ ರೋಗ ಕೂಡ ತಡೆಗಟ್ಟಬಹುದು. ಮಾನವನ ರಕ್ತದದ ಬ್ಯಾಡ್ ಕೊಲೆಸ್ಟ್ರಾಲ್‌ ಅನ್ನು ಕೂಡಾ ಕಡಿಮೆ ಹಾಗೂ ಚರ್ಮದ ಆರೋಗ್ಯ ಉತ್ತಮಗೊಳಿಸಲಿದೆ ಎಂದು ತಿಳಿಸಿದರು.ಇದೇ ವೇಳೆ ಶಿಬಿರದಲ್ಲಿ 120ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡ ರಕ್ತದಾನ ಮಾಡಿದರು. ಈ ವೇಳೆ ನಗರಸಭೆ ಸದಸ್ಯೆ ಕವಿತಾ ಶೇಖರ್, ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ಸುಬ್ಬಣ್ಣ, ಹೋಲಿಕ್ರಾಸ್ ಆಸ್ಪತ್ರೆ ಆಡಳಿತಾಧಿಕಾರಿ ಲೀಸಿಜಾನ್, ಡಾ.ಅನೀತ್‌ಕುಮಾರ್, ಡಾ.ಗೌರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲು ವರದಿ ವಿರೋಧಿಸಿ ಬಲಗೈಜಾತಿಗಳ ಒಕ್ಕೂಟದಿಂದ ನಾಳೆ ಪ್ರತಿಭಟನೆ
ಕಾಡುಗೊಲ್ಲರ ಹಟ್ಟಿಗಳಿಲ್ಲ ಅದ್ಧೂರಿ ರಾಮನವಮಿಗೆ ಸಿದ್ಧತೆ