ಜಲ್ಲಿ ಕಲ್ಲು, ಬಂಡೆ ಹೊಡೆಯುವರಿಗೆಲ್ಲ ರೈತರ ಕಷ್ಟ ಗೊತ್ತಾಗಲ್ಲ

KannadaprabhaNewsNetwork |  
Published : Jun 18, 2026, 01:15 AM IST
17ಕೆಆರ್ ಎಂಎನ್ 2.ಜೆಪಿಜಿವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ | Kannada Prabha

ಸಾರಾಂಶ

ರಾಮನಗರ: ರೈತನಾದವನಿಗೆ ಮಾತ್ರ ಕೃಷಿಕರ ಕಷ್ಟ ಗೊತ್ತಾಗುತ್ತೆ. ಜಲ್ಲಿ ಕಲ್ಲು, ಬಂಡೆ ಹೊಡೆಯುವರಿಗೆಲ್ಲ ರೈತರ ಕಷ್ಟ ಗೊತ್ತಾಗಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು

ರಾಮನಗರ: ರೈತನಾದವನಿಗೆ ಮಾತ್ರ ಕೃಷಿಕರ ಕಷ್ಟ ಗೊತ್ತಾಗುತ್ತೆ. ಜಲ್ಲಿ ಕಲ್ಲು, ಬಂಡೆ ಹೊಡೆಯುವರಿಗೆಲ್ಲ ರೈತರ ಕಷ್ಟ ಗೊತ್ತಾಗಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣ್ಣೀರು ಹಾಕಿದ ರೈತರ ಶಾಪ ತಟ್ಟದೆ ಬಿಡುವುದಿಲ್ಲ. ನಿಮ್ಮಿಂದ ಆ ಶಾಪ ತಡೆದುಕೊಳ್ಳಲು ಆಗಲ್ಲ. ಆದ್ದರಿಂದ ರೈತರ ಕೃಷಿ ಭೂಮಿಯನ್ನು ಬಿಟ್ಟು ಬಿಡಿ ಎಂದರು.

ನಿಜವಾದ ರೖತನ ಮಗ ಈ ರೀತಿ ಕೃಷಿಕರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾರರು. ನೀವು ನಿಜವಾಗಿಯೂ ರೈತನ ಮಗಾನ ಎಂಬ ಅನುಮಾನ ಕಾಡುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ತುಂಡು ಮಾಡಿದಿರಿ. ಆದರೂ ಜನರು ತಡೆದುಕೊಂಡಿದ್ದಾರೆ. ಈಗಿಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಇಷ್ಟೊಂದು ಹಠ ಏಕೆಂದು ಪ್ರಶ್ನಿಸಿದರು.

ಮುಗ್ಧ ರೈತರನ್ನು ಸಂಕಷ್ಟಕ್ಕೆ ದೂಡಬೇಡಿ:

ಮುಖ್ಯಮಂತ್ರಿಗಳು ಕನಕಪುರ ಭಾಗದ ರೈತರ ಭೂಮಿಗೆ ಚಿನ್ನದ ಬೆಲೆ ಬರುತ್ತದೆ ಅಂತ ಹೇಳುತ್ತಾರೆ.

ಅಲ್ಲಿ ಭೂಮಿ ಮಾರಬೇಡಿ ಎನ್ನುವ ನೀವು, ಇಲ್ಲೇಕೆ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದೀರಾ.

ಬಿಡದಿ ಭಾಗದ ರೈತರು ಭೂಮಿಯಲ್ಲಿ ಚಿನ್ನವನ್ನೇ ಬೆಳೆಯುತ್ತಿದ್ದಾರೆ. ದಯವಿಟ್ಟು ರೈತರನ್ನು ಬಿಟ್ಟುಬಿಡಿ ಎಂದು ಹೇಳಿದರು.

ರಿಯಲ್ ಎಸ್ಟೇಟ್ ಮಾಡಲು ಬೇರೆ ಮಾರ್ಗಗಳಿವೆ. ಅದಕ್ಕಾಗಿ ಮುಗ್ಧ ರೈತರನ್ನು ಸಂಕಷ್ಟಕ್ಕೆ ದೂಡಬೇಡಿ. ಈ ಯೋಜನೆಗೆ ಯಾವುದಾದರು ಒಂದೆರೆಡು ಕೇಸು ಬಿದ್ದರೆ ಎರಡು ಮೂರು ವರ್ಷ ಎಳೆದುಕೊಂಡು ಹೋಗುತ್ತದೆ. ಆ ವೇಳೆಗೆ ಬಿಜೆಪಿ - ಜೆಡಿಎಸ್ ನೇತೃತ್ವದ ಎನ್ ಡಿಎ ಸರ್ಕಾರ ಬಂದಿರುತ್ತದೆ. ಒಂದೂವರೆ ವರ್ಷದಲ್ಲಿ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಿಡದಿ ಭಾಗದಲ್ಲಿ ಅರ್ಧ ಎಕರೆ ಭೂಮಿ ಪಾಳು ಬಿದ್ದಿಲ್ಲ. ಇಲ್ಲಿರುವ ತೆಂಗು, ಅಡಿಕೆ, ಮಾವು, ಸಪೋಟ, ರೇಷ್ಮೆ, ಹೈನುಗಾರಿಕೆ ನೋಡಿದರೆ ರೖೆತರು ಮೖೆಗಳ್ಳರಲ್ಲ ಎಂಬುದು ಸಾಬೀತಾಗಿದೆ. ನೀರಾವರಿ ಭೂಮಿಯನ್ನು ಏಕೆ ಕಸಿದುಕೊಳ್ಳುತ್ತೀರಾ. ಚಿಕ್ಕಬಳ್ಳಾಪುರ ಆದ ಮೇಲೆ ಬೇಕಾದಷ್ಟು ಬರಡು ಭೂಮಿ ಇದೆ. ಅಲ್ಲಿ ಬೇಕಾದರೆ ನಾನೇ 15 ಸಾವಿರ ಭೂಮಿ ಕೊಡಿಸುತ್ತೇನೆ ಬನ್ನಿ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.

17ಕೆಆರ್ ಎಂಎನ್ 2.ಜೆಪಿಜಿ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ