- ವೈದ್ಯರ ಜವಾಬ್ದಾರಿಯಿಂದ ಸಾವುಗಳು ತಪ್ಪಿವೆ: ಡಾ.ಚಂದ್ರು ಲಮಾಣಿ
------ಕಳಪೆ ಗುಣಟ್ಟದ ಆರ್‌ಎಲ್ ಸಲೈನ್ ಗೆ ದಾವಣಗೆರೆಯಲ್ಲಿ ಬಾಣಂತಿ ಸಾವನ್ನಪ್ಪಿರಬಹುದಾ ಎಂಬ ಅನುಮಾನವನ್ನು ಬಿಜೆಪಿ ಸತ್ಯಶೋಧನಾ ತಂಡವು ವ್ಯಕ್ತಪಡಿಸಿದೆ.
ಚಾಮರಾಜ ಪೇಟೆಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ತಂಡದ ಸದಸ್ಯ, ಶಾಸಕ ಡಾ.ಚಂದ್ರು ಲಮಾಣಿ ಭೇಟಿ ನೀಡಿದ್ದ ವೇಳೆ ಕಳಪೆ ಗುಣಮಟ್ಟದ ಆರ್‌ಎಲ್ ಸಲೈನ್‌ನಿಂದಾಗಿಯೇ ಹರಪನಹಳ್ಳಿ ತಾ. ಮೂಲಕ ಚಂದ್ರಮ್ಮ ಎಂಬ ಬಾಣಂತಿ ಮೃತಪಟ್ಟಿರುವ ಅನುಮಾನ ಕಂಡು ಬಂದಿದೆ.ಮೂವರು ಬಾಣಂತಿಯರು ಇಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಒಬ್ಬ ಬಾಣಂತಿ ಆರ್‌ಎಲ್ ಸಲೈನ್‌ನಿಂದ ಸಾವನ್ನಪ್ಪಿದ್ದಾರೆಂಬ ಅನುಮಾನವಿದೆ. ಹರಪನಹಳ್ಳಿ ಮೂಲಕ ಬಾಣಂತಿ ಚಂದ್ರಮ್ಮ ಇಂತಹದ್ದೇ ಕಳಪೆ ಆರ್‌ಎಲ್ ಸಲೈನ್‌ನಿಂದಲೇ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಂಡವು ಬಲವಾಗಿ ಶಂಕಿಸಿತು.
ನಿಷೇಧಿಸಿರುವ ಸೆಲೈನ್ ದಾವಣಗೆರೆ ಆಸ್ಪತ್ರೆಗೂ ಪೂರೈಕೆಯಾಗಿತ್ತು. ಆ ಸಲೈನ್ ಬ್ಯಾಚ್‌ನ ನಂಬರ್ ಸಹ ಆಸ್ಪತ್ರೆಯ ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ನ.22ರಂದು ಹರಪನಹಳ್ಳಿ ಮೂಲದ ಬಾಣಂತಿ ಚಂದ್ರಮ್ಮಗೆ ಸಲೈನ್ ಹಾಕಿದ 48 ಗಂಟೆಯಲ್ಲೇ ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ತಂಡದ ಸದಸ್ಯರು ಹೇಳಿದರು.ಸರ್ಕಾರ ಈಗಾಗಲೇ ಮೃತ ಬಾಣಂತಿಯರ ಕುಟುಂಬಗಳಿಗೆ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದೆ. ಆದರೆ, ಇದುವರೆಗೂ ಯಾರಿಗೂ ಪರಿಹಾರದ ಹಣವೇ ಬಂದಿಲ್ಲ. ಅಮಾಯಕ ಬಾಣಂತಿಯರ ಸಾವಿಗೆ ಕಾರಣವಾಗಿರುವ ಕಂಪನಿಯಿಂದಲೇ ಕೊಡಿಸುವ ಕೆಲಸ ಮಾಡಲಿ ಎಂದು ತಂಡದ ಸದಸ್ಯರು ಒತ್ತಾಯಿಸಿದರು.
ಈಗಾಗಲೇ ನಿಷೇಧಿತ ಸಲೈನ್‌ನಿಂದ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಅಂತಹ ಮಕ್ಕಳನ್ನು ಸರ್ಕಾರ ದತ್ತು ತೆಗೆದುಕೊಳ್ಳಬೇಕು. ದಾವಣಗೆರೆಯ ಆಸ್ಪತ್ರೆಗಳಲ್ಲಿ ವೈದ್ಯರು ಅತ್ಯಂತ ಜವಾಬ್ಧಾರಿಯಿಂದ ಕೆಲಸ ಮಾಡಿದ್ದರಿಂದ ಇಲ್ಲಿ ಬಾಣಂತಿಯರ ಅದೆಷ್ಟೋ ಸಾವುಗಳು ತಪ್ಪಿವೆ ಎಂದು ಬಿಜೆಪಿ ಸತ್ಯಶೋಧನಾ ತಂಡದ ಸದಸ್ಯ, ಶಾಸಕ ಡಾ.ಚಂದ್ರು ಲಮಾಣಿ ಸ್ಪಷ್ಟಪಡಿಸಿದರು.