ಕನ್ನಡಪ್ರಭ ವಾರ್ತೆ ಕಲಾದಗಿ (ಬಾಗಲಕೋಟೆ)
ಮುರುನಾಳ ಆರ್.ಸಿಯ ಸಂಜಯ ರಾಮ ಗಣಿ (16),ಸಂತೋಷ ಕೂಡಗಿ (16) ಹಾಗೂ ಕಾಮಣ್ಣಾ ಕುಪಲಿ (18) ಮೃತ ಯುವಕರು. ಈ ಮೂವರು ಬೈಕ್ ಮೇಲೆ ಮುರುನಾಳದಿಂದ ಹುಬ್ಬಳ್ಳಿ ಮಾರ್ಗವಾಗಿ ಸಮೀಪದ ಉರೊಂದರ ಹನುಮಜಯಂತಿ ನಿಮಿತ್ತ ನಡೆಯುತ್ತಿದ್ದ ಮೆರವಣಿಗೆ ನೋಡಲು ಹೊರಟಿದ್ದ ವೇಳೆ ಎದುರಿನಲ್ಲಿ ಬಂದ ಟ್ಯಾಂಕರ್‌ಗೆ ಬಡಿದು ಅಪಘಾತ ಸಂಭವಿಸಿದೆ.
ಮೂವರು ಯುವಕರ ದೇಹದ ಭಾಗಗಳು ಛಿದ್ರವಾಗಿ ರಸ್ತೆಯುದ್ದಕ್ಕೂ ಬಿದ್ದಿದ್ದು ಅಪಘಾತದ ಭೀಕರತೆ ಗೆ ಸಾಕ್ಷಿಯಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.ಕಲಾದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.