ಥ್ರೋಬಾಲ್ ಕ್ರೀಡೆಯಿಂದ ರಕ್ತ ಸಂಚಾರ ಹೆಚ್ಚಳ

KannadaprabhaNewsNetwork |  
Published : May 29, 2025, 12:18 AM IST
ಫೋಟೊಪೈಲ್- ೨೭ಎಸ್ಡಿಪಿ೩- ಸಿದ್ದಾಪುರದ ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ ಜರುಗಿತು. | Kannada Prabha

ಸಾರಾಂಶ

ಸ್ಥಳೀಯ ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.

ಸಿದ್ದಾಪುರ: ಸ್ಥಳೀಯ ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಸಹಾಯಕ ಕಾರ್ಯದರ್ಶಿ ಸಂಪೂರ್ಣಾ ಹೆಗಡೆ ಪಾಲ್ಗೊಂಡು ಥ್ರೋಬಾಲ್ ಆಟದ ಮಹತ್ವ ವಿವರಿಸಿದರು. ಥ್ರೋಬಾಲ್ ಹಿಡಿಯುವುದರಿಂದ ಉಂಟಾಗುವ ಆಕ್ಯುಪ್ರೆಷರ್ ನಿಂದಾಗಿ ರಕ್ತ ಸಂಚಾರ ಹೆಚ್ಚುತ್ತದೆ. ಜತೆಗೆ ಮಿದುಳಿನ ಎರಡು ಭಾಗದ ಚಟುವಟಿಕೆ ಉತ್ತೇಜಿಸುವ ಮೂಲಕ ಬುದ್ಧಿಮತ್ತೆ ಸುಧಾರಣೆಯಾಗುತ್ತದೆ ಎಂದರು.

ಈ ವೇಳೆ ಹೀನಗಾರಿನ ಅನ್ನಪೂರ್ಣ ಸೀತಾರಾಮ ಹೆಗಡೆ ೭೫ನೇ ಹುಟ್ಟುಹಬ್ಬದ ಪ್ರಯುಕ್ತ ಸಂಸ್ಥೆಗೆ ೧೦ ಥ್ರೋಬಾಲ್, ಪಂಪ್, ಸ್ಮಾರ್ಟ್ ವೇಯಿಂಗ್ ಸ್ಕೇಲ್ ಮತ್ತು ನೆಟ್ ನ್ನು ದಾನವಾಗಿ ನೀಡಿದರು. ನಾಲ್ಕು ವಾರಾಂತ್ಯದ ಉಚಿತ ಥ್ರೋಬಾಲ್ ತರಬೇತಿಗಾಗಿ ಕೋಚ್ ಗಳನ್ನು ಒದಗಿಸುವುದಾಗಿ ಪ್ರಕಟಿಸಿದರು. ಜತೆಗೆ, ತಾವು ಥ್ರೋಬಾಲ್ ಆಡುವುದರಿಂದ ಅತಿಮೂತ್ರ, ಭುಜನೋವು ನಿವಾರಣೆ ಹಾಗೂ ದೃಷ್ಟಿ ಸುಧಾರಣೆ ಪ್ರಯೋಜನಗಳನ್ನು ಪಡೆದಿದ್ದಾಗಿ ತಿಳಿಸಿದರು.

ಪ್ರಾಂಶುಪಾಲೆ ಡಾ.ವಾಣಿ ಜೀರಗಲ್ ಮಾತನಾಡಿ, ಥ್ರೋಬಾಲ್ ಆಡುವುದರಿಂದ ಹಲವು ಹಾರ್ಮೋನ್ ಗಳ ಸಮತೋಲನದಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೊಳ್ಳುತ್ತದೆ ಎಂದರು.

ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಡೀನ್ ಡಾ. ರಾಘವೇಂದ್ರ ಎಲ್., ಸಿದ್ದಾಪುರ ಎಂ.ಜಿ.ಸಿ. ಕಾಲೇಜಿನ ಪ್ರಾಂಶುಪಾಲ ಜಗನ್ನಾಥ ಮೊಗೇರ, ಥ್ರೋಬಾಲ್ ಆಟಗಾರರಾದ ರೀನಾ ಎಲ್. ಜೆ., ಶ್ರೀರಾಜ್ ಕುಮಾರ್, ರಕ್ಷಿತ್ ಇದ್ದರು.

ಸಿದ್ದಾಪುರದ ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಜಾಗೃತಿ ಶಿಬಿರ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನು ಅರಿವಿನಿಂದ ಅಪರಾಧ ಇಳಿಮುಖ: ನ್ಯಾಯಾಧೀಶೆ ನಾಗವೇಣಿ
ಹಾನಗಲ್ಲ ತಾಲೂಕಲ್ಲಿ 42 ಲಕ್ಷ ಪುಟಗಳ ಕಂದಾಯ ದಾಖಲೆಗಳ ಡಿಜಿಟಲೀಕರಣ