ಹುಬ್ಬಳ್ಳಿ:
ಏ. 1ರಿಂದ ನ. 30ರ ವರೆಗಿನ ಸಂಚಿತ ಅವಧಿಯಲ್ಲಿ, ಎಸ್‌ಡಬ್ಲ್ಯೂಆರ್ 5.57 ಲಕ್ಷ ಟಿಕೆಟ್ ತಪಾಸಣಾ ಪ್ರಕರಣ ಪತ್ತೆ ಮಾಡಿದೆ. ಈ ಮೂಲಕ ಒಟ್ಟು ₹45.89 ಕೋಟಿ ಆದಾಯ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ (2024–25) ಅನುಗುಣವಾದ ಅವಧಿಯಲ್ಲಿ 4.8 ಲಕ್ಷ ಪ್ರಕರಣಗಳಿಂದ ₹32.87 ಕೋಟಿ ಆದಾಯವಿತ್ತು. ಈ ಅವಧಿಯಲ್ಲಿ ಪ್ರಕರಣಗಳಲ್ಲಿ ಶೇ. 16ರಷ್ಟು ಮತ್ತು ಆದಾಯದಲ್ಲಿ ಶೇ. 40ರಷ್ಟು ಪ್ರಗತಿ ಸಾಧಿಸಿದೆ.
2025-26ರ ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ತಿಂಗಳಿನಲ್ಲಿ (2025) ಒಟ್ಟು 67,000 ಟಿಕೆಟ್ ತಪಾಸಣಾ ಪ್ರಕರಣಗಳನ್ನು ನೈಋತ್ಯ ರೈಲ್ವೆ ದಾಖಲಿಸಿದ್ದು, ಇದರಿಂದ ಬರೋಬ್ಬರಿ ₹ 5.36 ಕೋಟಿ ಆದಾಯ ಸಂಗ್ರಹಿಸಿದೆ. ಕಳೆದ ವರ್ಷದ (ನವೆಂಬರ್ 2024) ಇದೇ ಅವಧಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 24ರಷ್ಟು ಮತ್ತು ಆದಾಯದಲ್ಲಿ ಶೇ. 60ರಷ್ಟು ದಾಖಲೆಯ ಏರಿಕೆ ಕಂಡುಬಂದಿದೆ. ನವೆಂಬರ್ 2024ರಲ್ಲಿ 54,000 ಪ್ರಕರಣಗಳಿಂದ ₹3.35 ಕೋಟಿ ಸಂಗ್ರಹವಾಗಿತ್ತು.ಮುಂಬರುವ ಹಬ್ಬಗಳು ಮತ್ತು ಗರಿಷ್ಠ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇರುವುದರಿಂದ, ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕಾಗಿ ಟಿಕೆಟ್ ತಪಾಸಣಾ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಸ್‌ಡಬ್ಲ್ಯೂಆರ್ ತಿಳಿಸಿದೆ. ಪ್ರಯಾಣಿಕರು ಯಾವಾಗಲೂ ಮಾನ್ಯವಾದ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವಂತೆ ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.