ರೈಲಿನಿಂದ ಹಾರಲು ಹೊರಟ ಟಿಕೆಟ್ ರಹಿತ ಯುವಕ: ಟಿಸಿ ರಕ್ಷಣೆ

KannadaprabhaNewsNetwork |  
Published : Apr 01, 2026, 02:30 AM IST
ಪೊಟೋ: 31ಎಸ್‌ಎಂಜಿಕೆಪಿ07ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿ ಮಾಡಿದರು. | Kannada Prabha

ಸಾರಾಂಶ

ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದು, ಕರ್ತವ್ಯ ನಿರ್ವಸುತ್ತಿದ್ದ ಟಿಕೇಟು ತಪಾಸಣಾಧಿಕಾರಿ ಬಾಬು ಸಮಯಪ್ರಜ್ಞೆಯಿಂದ ರಕ್ಷಿಸಲ್ಪಿಟ್ಟಿದ್ದಾರೆ. ಈ ಘಟನೆ ಸೋಮವಾರ ಮುಂಜಾನೆ ಕೇರಳದಿಂದ ಮುಂಬೈಗೆ ತೆರಳುತಿದ್ದ ರೈಲಿನಲ್ಲಿ ನಡೆದಿದೆ.

ಉಡುಪಿ: ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದು, ಕರ್ತವ್ಯ ನಿರ್ವಸುತ್ತಿದ್ದ ಟಿಕೇಟು ತಪಾಸಣಾಧಿಕಾರಿ ಬಾಬು ಸಮಯಪ್ರಜ್ಞೆಯಿಂದ ರಕ್ಷಿಸಲ್ಪಿಟ್ಟಿದ್ದಾರೆ. ಈ ಘಟನೆ ಸೋಮವಾರ ಮುಂಜಾನೆ ಕೇರಳದಿಂದ ಮುಂಬೈಗೆ ತೆರಳುತಿದ್ದ ರೈಲಿನಲ್ಲಿ ನಡೆದಿದೆ.ಈ ಯುವಕನನ್ನು ಕೇರಳದ ಕೊಯಿಕೋಡ್ ನಿವಾಸಿ ಸಹಾದ್ (25) ಎಂದು ಗುರುತಿಸಲಾಗಿದೆ ಮತ್ತು ಮಾನಸಿಕವಾಗಿಯೂ ಅಸ್ವಸ್ಥನಾಗಿದ್ದಾರೆ ಎಂದು ಹೇಳಲಾಗಿದೆ.ರೈಲು ಉಡುಪಿ ಸಮೀಪದ ಇನ್ನಂಜೆ ರೈಲು ನಿಲ್ದಾಣಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಸಹಾದ್ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದ ಸಹಾದ್ ಟಿಸಿಯನ್ನು ಕಂಡು ರೈಲಿನ ಬಾಗಿಲು ತೆರೆದು ಹೊರಗೆ ಹಾರಲೆತ್ನಿಸಿದ, ತಕ್ಷಣ ಯುವಕನನ್ನು ಟಿಸಿ ಬಾಬು ಎಳೆದು ಹಿಡಿದು ರಕ್ಷಿಸಿದರು. ನಂತರ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕೆಳಗಿಳಿಸಿ ಅಲ್ಲಿನ ರೈಲ್ವೆ ಪೊಲೀಸ್ ಕಚೇರಿಗೆ ಒಪ್ಪಿಸಿದರು.ಯುವಕ ಮಾನಸಿಕ ಅಸ್ವಸ್ಥನಾಗಿದ್ದರಿಂದ, ರೈಲ್ವೆ ಪೊಲೀಸರು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರು. ಈ ಕಾರ್ಯಾಚರಣೆಯಲ್ಲಿ ಟಿಸಿ ಸುನೀಲ್, ರೈಲ್ವೆ ಪೊಲೀಸರಾದ ರವಿಪ್ರಕಾಶ್, ಜೀನ ಪಿಂಟೋ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

(ಮಸ್ಟ್) ಸಮರ್ಪಕ ಅನಿಲ ವಿತರಣೆ: ಸಂಸದ ಕೋಟ ಸೂಚನೆ
ಮನೆಯಿಂದ 15 ಲಕ್ಷ ರು. ಮೌಲ್ಯದ ಚಿನ್ನ ಕಳ್ಳತನ: ಆರೋಪಿ ಸೆರೆ