ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಹೊರ ವಲಯದ ಭೋವಿ ಗುರುಪೀಠದಲ್ಲಿ ಇಂದು ಶುಕ್ರವಾರ ನಡೆಯಲಿರುವ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದ ನಿಮಿತ್ತ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.ಕರ್ನಾಟಕ ರಾಜ್ಯವಲ್ಲದೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದಲೂ ಸಹ ಭಕ್ತಾಧಿಗಳು ಆಗಮಿಸಲಿದ್ದಾರೆ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಹ ಭೋವಿ ಸಮಾಜದ ಭಾಂಧವರು ಮಠಕ್ಕೆ ಆಗಮಿಸಲಿದ್ದಾರೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಭಕ್ತಾಧಿಗಳು ಆಸೀನವಾಗಲು ಸುಮಾರು 5 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಮುಖ್ಯ ಅತಿಥಿಗಳು ಆಸೀನವಾಗಲು ಆಗಲವಾದ ವೇದಿಕೆ ಸಿದ್ಧಪಡಿಸಲಾಗಿದೆ. ಈಗ ಮಳೆಗಾಲವಾಗಿರುವುದರಿಂದ ಮಳೆ ಬಂದು ಕಾರ್ಯಕ್ರಮ ಹಾಳಾಗಬಾರದೆಂದು ಮಳೆಯಲ್ಲಿ ಸೋರದ ಜರ್ಮನ್ ಚಪ್ಪರವನ್ನು ಹಾಕಿಸಲಾಗಿದೆ.
ಈ ವೇಳೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಶಿಕ್ಷಣದ ಕಡೆಗೆ ಹೆಚ್ಚಿನ ಒಲವನ್ನು ಸೆಳೆಯುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಪದವಿ ಪಡೆದ, ಸಂಶೋಧನೆಯನ್ನು ಮಾಡಿದವರನ್ನು ಸನ್ಮಾನಿಸಲಾಗುವುದು. ಇದಲ್ಲದೆ ಭೋವಿ ಸಮುದಾಯದಲ್ಲಿ ಕೆಲವರ ಮದುವೆಯ ವಯಸ್ಸು ಮೀರುತ್ತಿರುವುದನ್ನು ಮನಗಂಡು ಈ ಕಾರ್ಯಕ್ರಮದಲ್ಲಿ ವಧು-ವರರ ಸಮಾವೇಶ ಹಮ್ಮಿಕೊಂಡಿದ್ದು ಇಲ್ಲಿ ಭೋವಿ ಸಮುದಾಯದವರು ತಮ್ಮ ಮಕ್ಕಳಿಗೆ ಗಂಡು, ಹೆಣ್ಣನ್ನು ನೋಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಉಚಿತವಾದ ಆರೋಗ್ಯ ಶಿಬಿರ ಏರ್ಪಡಿಸಲಾಗಿದ್ದು ಇಲ್ಲಿಗೆ ಆಗಮಿಸಿದ ಭಕ್ತಾಧಿಗಳು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.ಶ್ರೀ ಮಠ ಬಹು ದಿನಗಳಿಂದ ರಕ್ತದಾನದ ಶಿಬಿರಗಳನ್ನು ಮಾಡುತ್ತಾ ಬಂದಿದೆ. ಇದುವರೆಗೂ ಶೀ ಮಠದ ಆಶ್ರಯದಲ್ಲಿ 10 ಸಾವಿರ ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಗಿದೆ. ಈ ಭಾರಿಯೂ ಸಹ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧ ಮಠಾಧೀಶರಿಂದ ಧಾರ್ಮಿಕ ಸಭೆಗಳು ನಡೆಯಲಿವೆ. ಇದರಲ್ಲಿ ಸಮುದಾಯದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಯಲಿದೆ. ಇದಾದ ಮೇಲೆ ಮಾಯಾವಿ ಹಾಗೂ ಹೆಚ್ಚೆಮ್ಮ ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಭೋವಿ ಸಮುದಾಯದ ಜಾಗೃತ ಸಭೆ ನಡೆದ ನಂತರ ವಧು-ವರರ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದ್ದು ಇದಕ್ಕಾಗಿ 25 ಕೌಂಟರ್ ಗಳನ್ನು ತೆರೆಯಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕ ಸುನೀಲ್ ವಲ್ಯಾಪುರೆ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಬೆಂಗಳೂರಿನ ಸಿ.ವಿ.ರಾಮನ್ ನಗರದ ಶಾಸಕ ಎಸ್.ರಘು, ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್, ಬೆಂಗಳೂರು ಪುಲಿಕೇಶಿ ನಗರ ಶಾಸಕ ಎ.ಸಿ.ಶ್ರೀನಿವಾಸ್, ಪಾವಗಡ ಶಾಸಕ ವೆಂಕಟೇಶ್ ವಿ, ಕೋಲಾರ ಸಂಸದ ಮಲ್ಲೇಶ್ ಬಾಬು, ಎಂಎಲ್‌ಸಿ ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯುವ ಜನ ಪ್ರಾಧಿಕಾರದ ಅಧ್ಯಕ್ಷ ವಿ.ಶಾಂತಕುಮಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಓಸಿಸಿಐ ರಾಷ್ಟ್ರೀಯ ಅಧ್ಯಕ್ಷ ಎಚ್.ರವಿ ಮಾಕಳಿ, ರಾಜ್ಯಾಧ್ಯಕ್ಷ ಎಚ್.ಆನಂದಪ್ಪ, ಮಾಜಿ ಸಚಿವ ವೆಂಕಟರಮಣಪ್ಪ, ಗೂಳಿಹಟ್ಟಿ ಡಿ.ಶೇಖರ್, ಮಾಜಿ ಸಂಸದ ಜನಾರ್ಧನಸ್ವಾಮಿ, ಮಾಜಿ ಶಾಸಕರಾದ ಬಂಗಾರ ಪೇಟೆಯ ನಾರಾಯಣಸ್ವಾಮಿ, ನೆಲಮಂಗಲ ಎಂ.ವಿ.ನಾಗರಾಜು, ಲಿಂಗಸೂಗೂರಿನ ಡಿ.ಎಸ್.ಹಲಗೇರಿ, ಅಖಂಡ ಶ್ರೀನಿವಾಸಮೂರ್ತಿ, ಬೆಳಗಾವಿ ಬಾಳಾಸಾಹೇಬ ವಡ್ಡರ, ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ನಿವೃತ್ತ ಐ.ಎ.ಎಸ್. ಅಧಿಕಾರಿ ಮಂಜುನಾಥ ಪ್ರಸಾದ್, ಎಸ್.ಎಲ್.ಗಂಗಾಧರಪ್ಪ, ಭೀಮಯ್ಯ ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಭೋವಿ ಗುರುಪೀಠದ ಕಾರ್ಯ ನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಮುಂತಾದವರು ಉಪಸ್ಥಿತರಿದ್ದರು.