ಮಹಾಲಿಂಗಪುರದಲ್ಲಿ ಇಂದು ಜನುಮದ ಜೋಡಿ ಕಾರ್ಯಕ್ರಮ

KannadaprabhaNewsNetwork |  
Published : Jan 03, 2026, 03:15 AM IST
02 MLP 01 ಪೋಟೋ | Kannada Prabha

ಸಾರಾಂಶ

ಎರಡು ಹೃದಯಗಳು ಒಂದೇ ಭಾವ. ದಂಪತಿಗಳಿಗಾಗಿ ಜನುಮದ ಜೋಡಿ ಕಾರ್ಯಕ್ರಮ ಶನಿವಾರ ಸಂಜೆ ೪ ಗಂಟೆಗೆ ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪಟ್ಟಣದ ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ ಅಧ್ಯಕ್ಷ ಸಿದ್ಧಲಿಂಗೇಶ್ವರ ನಕಾತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಎರಡು ಹೃದಯಗಳು ಒಂದೇ ಭಾವ. ದಂಪತಿಗಳಿಗಾಗಿ ಜನುಮದ ಜೋಡಿ ಕಾರ್ಯಕ್ರಮ ಶನಿವಾರ ಸಂಜೆ ೪ ಗಂಟೆಗೆ ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪಟ್ಟಣದ ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ ಅಧ್ಯಕ್ಷ ಸಿದ್ಧಲಿಂಗೇಶ್ವರ ನಕಾತಿ ತಿಳಿಸಿದ್ದಾರೆ.

ಪಟ್ಟಣದ ವೈದ್ಯರ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಣೆ ಮತ್ತು ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸ್ಪರ್ಧೆ ಮಾಡಿ ಪ್ರಥಮ ಸ್ಥಾನ ಪಡೆಯುವ ಜನುಮದ ಜೋಡಿ ದಂಪತಿ ಪ್ರಶಸ್ತಿಯೊಂದಿಗೆ ₹೫೦ ಸಾವಿರದ ಟನ್ವೆಲ್ ಎಲೆಕ್ಟ್ರಿಕ್ ಬೈಕ್, ದ್ವಿತೀಯ ಸ್ಥಾನ ಪಡೆಯುವ ಭಲೆ ಜೋಡಿಗೆ ಪ್ರಶಸ್ತಿ ಸೇರಿ ₹೩೦ ಸಾವಿರ ಬೆಲೆಯ ಫ್ರಿಡ್ಜ್ ಮತ್ತು ತೃತೀಯ ಸ್ಥಾನ ಪಡೆಯುವ ಅಪೂರ್ವ ಜೋಡಿ ಪ್ರಶಸ್ತಿ ಜೊತೆ ₹೧೮ ಸಾವಿರದ ಆಕ್ವಾ ಗೋಲ್ಡ್ ಫ್ಯುರಿಫೈಯರ್ ಕೊಡಲಾಗುವುದು. ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಹಾಗೂ ಕಿರುತೆರೆ ನಿರೂಪಕರಾದ ಮಾಸ್ಟರ್ ಆನಂದ್ ಮತ್ತು ಕಾಮಿಡಿ ಕಿಲಾಡಿಯ ನಯನಾ ಅವರು ಕಾರ್ಯಕ್ರಮದ ನಿರೂಪಣೆ ಜೊತೆಗೆ ಜನುಮದ ಜೋಡಿಗಳಿಗೆ ಮನರಂಜನೆ ನೀಡಲಿದ್ದಾರೆ.

ಚಿಕ್ಕ ಮಕ್ಕಳನ್ನು ಮನ ರಂಜಿಸಲು ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕಾ ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದ್ದಾಳೆ. ವಿಶೇಷ ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು. ಲಯನ್ಸ್ ಕ್ಲಬ್ ಶ್ರೇಷ್ಠ ಸಾಧಕರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಿದೆ. ಶ್ರೇಷ್ಠ ಜೀವಮಾನ ಸಾಧನೆ ವೈದ್ಯಕೀಯ, ಶ್ರೇಷ್ಠ ಕಾಯಕಯೋಗಿ, ಶ್ರೇಷ್ಠ ಯುವ ರತ್ನ, ಶ್ರೇಷ್ಠ ಸಮಾಜ ಸೇವೆ ಮತ್ತು ಶ್ರೇಷ್ಠ ಕೃಷಿ ರತ್ನ ಪ್ರಶಸ್ತಿಗಳು ಸೇರಿವೆ.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಂಘಟನಾ ಅಧ್ಯಕ್ಷ ಸೋಮಶೇಖರ ಸಂಶಿ, ಕಾರ್ಯದರ್ಶಿ ಡಾ.ವಿದ್ಯಾ ದಿನ್ನಿಮನಿ, ಖಜಾಂಚಿ ಪ್ರಶಾಂತ್ ಅಂಗಡಿ,ಡಾ.ಮಹಾಲಿಂಗ ಚನ್ನಾಳ, ಅರ್ಚನಾ ಕಡಪಟ್ಟಿ,ಡಾ.ಅಶೋಕ ದಿನ್ನಿಮನಿ,ರಾಜು ತಾಳಿಕೋಟಿ,ಡಾ.ಮಾರುತಿ ಮೇದಾರ ಇದ್ದರು.--------------

ಎರಡು ಹೃದಯಗಳು ಒಂದೇ ಭಾವ. ದಂಪತಿಗಳಿಗಾಗಿ ಜನುಮದ ಜೋಡಿ ಕಾರ್ಯಕ್ರಮ ಶನಿವಾರ ಸಂಜೆ ೪ ಗಂಟೆಗೆ ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪಟ್ಟಣದ ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ ಅಧ್ಯಕ್ಷ ಸಿದ್ಧಲಿಂಗೇಶ್ವರ ನಕಾತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಕಪಾಳಮೋಕ್ಷ: 27 ಜನರ ವಿರುದ್ಧ ಕೇಸ್‌
ಮೂಗಿಯ ಮನದೊಳು’ ಕನ್ನಡ ಕಾದಂಬರಿ ಲೋಕಾರ್ಪಣೆ