ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಲ್ಯಾಣ ನಗರದ ಶ್ರೀ ಬಸವ ಮಂದಿರದಲ್ಲಿ ಫೆ.27 ಹಾಗೂ‌28 ರಂದು ಚಂದ್ರಶೇಖರ ಮಹಾಸ್ವಾಮಿಗಳ 171 ನೇ ಜಯಂತಿ, ಜಯಚಂದ್ರಶೇಖರ ಮಹಾಸ್ವಾಮಿಗಳ 30ನೇ ಸಂಸ್ಮರಣೆ, ಬಸವತತ್ವ ಸಮಾವೇಶ ಹಾಗೂ ಬಸವತತ್ವ ಪೀಠದ ಸುವರ್ಣ ಮಹೋತ್ಸವ ನಡೆಯಲಿದೆ ಎಂದು ಬಸವತತ್ವ ಪೀಠಾಧ್ಯಕ್ಷ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಫೆ.27 ರಂದು ಬೆಳಗ್ಗೆ 7.30ಕ್ಕೆ ಚಿದ್ರಳ್ಳಿ ಗವಿಮಠದ ಮಲ್ಲಿಕಾರ್ಜುನ ಶ್ರೀಗಳ ಷಡುಸ್ಥಲ ಧ್ವಜಾರೋಹಣ ಮಾಡುವರು. ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮಿ ಉಪಸ್ಥಿತರಿರುವರು. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಎಐಟಿ ವೃತ್ತದಿಂದ ಪ್ರಾರಂಭವಾಗಿ ವಿಶ್ವಗುರು ಬಸವಣ್ಣ, ಚಂದ್ರಶೇಖರ ಮಹಾಸ್ವಾಮಿ, ಜಯಚಂದ್ರಶೇಖರ್ ಸ್ವಾಮಿಗಳ ಉತ್ಸವ ಶ್ರೀಮಠ ತಲುಪಲಿದೆ. ಸಂಜೆ ಶ್ರೀ ಬಸವತತ್ವ ಪೀಠದ ಕೊಡುಗೆ ವಿಚಾರಗೋಷ್ಠಿ ದಿಸಾನಿಧ್ಯವನ್ನು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿ, ಕಡೂರು ಎಳನಾಡು ಸಂಸ್ಥಾನದ 1108 ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮಿ, ಸಿಂದಿಗೆರೆ ಕರಡಿ ಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿ ವಹಿಸುವರು. ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿ ಗಳಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ನಯನಾ ಮೋಟಮ್ಮ, ಟಿ.ಡಿ ರಾಜೇಗೌಡ, ಎಸ್.ಎಲ್ ಭೋಜೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಮಾಜಿ ಎಂಎಲ್‌ಸಿ ಗಾಯಿತ್ರಿ ಶಾಂತೇಗೌಡ, ಭಾಗವಹಿಸುವರು. ಖ್ಯಾತ ಗಾಯಕ ತೋಟಪ್ಪ ಉತ್ತಂಗಿ, ಇ-ಸಾಹಿತ್ಯ ಅಶೋಕ್ ದೊಮ್ಮಲೂರು ಅವರನ್ನು ಸನ್ಮಾನಿಸಲಾಗುವುದೆಂದು ಹೇಳಿದರು.

ಫೆ.28ಕ್ಕೆ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ, ಸಂಜೆ ವಚನಗಳಲ್ಲಿ ರಾಷ್ಟ್ರೀಯ ಮೌಲ್ಯಗಳು ವಿಚಾರಗೋಷ್ಠಿ ದಿವ್ಯ ಸಾನಿಧ್ಯ ವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶ್ರೀ, ಪುಷ್ಪಗಿರಿ ಮಠದ ಸೋಮಶೇಖರ ಶ್ರೀಗಳು ವಹಿಸಲಿದ್ದು, ಉದ್ಘಾಟನೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ನೆರವೇರಿಸಲಿದ್ದಾರೆ. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಬಿ. ಕೋರೆ ಅವರನ್ನು ಸನ್ಮಾನಿಸಲಾಗುವುದು,

ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಶಾಸಕ ಎಚ್.ಡಿ. ತಮ್ಮಯ್ಯ, ಬೆಳ್ಳಿಪ್ರಕಾಶ್, ಕೆ.ಬಿ ಮಲ್ಲಿಕಾರ್ಜುನ್, ಬಿ.ಎಚ್ ಹರೀಶ್, ಸ್ವಾಗತ ಸಮಿತಿ ಅಧ್ಯಕ್ಷ ಮಹಡಿ ಮನೆ ಸತೀಶ್ ಭಾಗವಹಿಸಲಿದ್ದು, ಶಂಕರಘಟ್ಟದ ಸಾಹಿತಿ ಡಾ. ಕುಮಾರಚಲ್ಯ ಉಪನ್ಯಾಸ ನೀಡುವರು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳು ಹಾಗೂ ಸ್ವಾಗತ ಸಮಿತಿ ಮುಖಂಡರಾದ ಎಚ್.ಸಿ ಕಲ್ಮರುಡಪ್ಪ, ಬಿ.ಜಿ ಸೋಮಶೇಖರ್, ರವೀಶ್ ಕ್ಯಾತನಬೀಡು, ಎಂ.ಎಸ್ ನಿರಂಜನ್, ಮಹಡಿ ಮನೆ ಸತೀಶ್, ಷಡಾಕ್ಷರಿ, ಚಿದಾನಂದ, ರುದ್ರಮೂರ್ತಿ, ವಿನಾಯಕ, ಶಿವರಾಂ ಉಪಸ್ಥಿತರಿದ್ದರು.