ಸವಣೂರು:ಪಂಡಿತ ಜವಾಹರಲಾಲ ನೆಹರು ಅವರು ಇಂದಿನ ಮಕ್ಕಳೆ ನಾಳಿನ ಭವ್ಯ ಭಾರತದ ಪ್ರಜೆಗಳು ಎಂಬ ದೃಷ್ಟಿಕೋನದೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ದಿನ ಆಚರಿಸಲು ಕರೆ ನೀಡಿದರು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ಅರಗೋಳ ಹೇಳಿದರು.ತಾಲೂಕಿನ ಮಂತ್ರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಾಧಿಕಾರಿಗಳ ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಕಾರಡಗಿ ಇವರುಗಳ ಸಂಯುಕ್ತ ಆಸ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಮಕ್ಕಳು ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸುವ ಪ್ರಜೆಗಳಾಗಿದ್ದು, ರಾಜಕೀಯ ಕ್ಷೇತ್ರ ಅಷ್ಟೆ ಅಲ್ಲದೆ ಎಲ್ಲ ರಂಗಗಳಲ್ಲಿಯೂ ಮುನ್ನಡೆ ಸಾಧಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂಬ ದೂರ ದೃಷ್ಟಿ ಪಂಡಿತ ಜವಾಹರಲಾಲ ನೆಹರು ಅವರದಾಗಿತ್ತು. ಆದ್ದರಿಂದ ಈ ಶಾಲೆಯ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ತೋರುವ ಮೂಲಕ ಈ ಗ್ರಾಮದ ಗರಿಮೆಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.ಎಸ್‌ಡಿಎಂಸಿ ಅಧ್ಯಕ್ಷ ಅಶೋಕ.ನಿಂ.ಕಳಲಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಲೆಯ 210 ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಸಹಕಾರಿಯಾಗಲು ಟ್ರ್ಯಾಕ್ ಸೂಟಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿ. ಖಾಸಗಿ ಶಾಲೆಗಳಿಗಿಂತ ನಮ್ಮ ಸರಕಾರಿ ಶಾಲೆಗಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಖಾಸಗಿ ಶಾಲೆಗಳು ಕೇವಲ ಶಿಕ್ಷಣ ನೀಡಿದರೆ, ಸರಕಾರಿ ಶಾಲೆಗಳು ಮೌಲ್ಯಾಧರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಗಳನ್ನು ನೀಡುವ ಶಾಲೆಗಳಾಗಿವೆ. ಮಕ್ಕಳ ಶೈಕ್ಷಣಿಕ ಪ್ರಗತಿ ಕೇವಲ ಶಿಕ್ಷಕರಿಂದ ಮಾತ್ರವಲ್ಲದೆ ಪಾಲಕರ ಮತ್ತು ಪೋಷಕರ ಸಹಕಾರದಿಂದಾಗಿ ಸಾಧ್ಯವಾಗಲಿರುವ ಹಿನ್ನೆಲೆಯಲ್ಲಿ ಈ ಬಾರಿ ಶಿಕ್ಷಕರ ಪೂಷಕರ ಮಹಾಸಭೆಯನ್ನು ಏರ್ಪಡಿಸಿದೆ. ಪಾಲಕರು ಪೋಷಕರು ತಮ್ಮ ಮಕ್ಕಳನ್ನು ಬಾಲ್ಯದಲ್ಲಿ ದುಡಿಮೆಗೆ ಹಚ್ಚದೆ ಶಿಕ್ಷಣವನ್ನು ನೀಡುವಂತಾಗಬೇಕು, ಮಕ್ಕಳು ಶಾಲೆಯಲ್ಲಿ ಕಲಿತ ವಿಷಯದ ಕುರಿತು ಮಕ್ಕಳೊಂದಿಗೆ ಚರ್ಚಿಸುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಯಲಿದೆ. ಈ ಹಿಂದೆ ಖಾಸಗಿ ಶಾಲೆಗಳಲ್ಲಿ ತಿಂಗಳಿಗೊಮ್ಮೆ ಪಾಲಕರ ಸಭೆ ಏರ್ಪಡಿಸಲಾಗುತ್ತಿತು. ಮಕ್ಕಳ ಶೈಕ್ಷಣಿಕ ಹಿತ ದೃಷ್ಠಿಯಿಂದ ಇನ್ನೂ ಮುಂದೆ ಸರಕಾರಿ ಶಾಲೆಗಳಲ್ಲಿಯೂ ಮಾಸಿಕ ಸಭೆಯನ್ನು ಏರ್ಪಡಿಸಲಾಗುವುದು. ಇದರಿಂದಾಗಿ ಮಕ್ಕಳ ಬುದ್ಧಿ ಮತ್ತೆಯನ್ನು ಪರೀಕ್ಷಿಸಬಹುದಾಗಿದ್ದು ಶಿಕ್ಷಕರಿಗೆ ಪರಿಣಾಮಕಾರಿಯಾಗಿ ಬೋಧನೆ ಕೈಗೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಭೋಜರಾಜ ಲಮಾಣಿ ಮಾತನಾಡಿ, ಪೋಷಕರು-ಶಿಕ್ಷಕರ ಪರಸ್ಪರ ಸಮನ್ವಯದೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಳಗೊಳಲಿದೆ. ಶಿಕ್ಷಕರು ಶಾಲೆಯಲ್ಲಿ ಭೋದಿಸಿದ ವಿಷಯವನ್ನು ಮನೆಯಲ್ಲಿ ಪೋಷಕರು ಪುರ್ನಮನನ ಮಾಡುವದ್ದರಿಂದ ಮಕ್ಕಳ ಬುದ್ದಿಮತ್ತೆ ಹೆಚ್ಚಳಗೊಳಲಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸಲು ಗ್ರಾಪಂ ವತಿಯಿಂದ ಯೋಜನೆಯನ್ನು ರೂಪಿಸಲಾಗುವದು ಎಂದರು.ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಎಂ.ಬಿ. ಬಾವಿಕಟ್ಟಿ ಸರಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೀಡಿರುವ ಸೌಲಭ್ಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೋಳಿವಾಡ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶಿದ್ದಪ್ಪ ಹುಬ್ಬಳ್ಳಿ, ಎಸ್‌ಡಿಎಂಸಿ ಸದಸ್ಯರಾದ ಹನಮಂತಪ್ಪ ಗುರನಳ್ಳಿ, ಶಿದ್ದಪ್ಪ ಪಾಣೀಗಟ್ಟಿ, ಶಬ್ಬೀರ ನದಾಫ, ಮಂಜುನಾಥ ಹಿತ್ತಲಮನಿ, ಗಂಗಮ್ಮ ಹಡಪದ, ನಿರ್ಮಲಾ ಗುಡಗೇರಿ, ಸುನಂದಾ ಗೊಟಗೋಡಿ, ಗ್ರಾಪಂ ಮಾಜಿ ಅಧ್ಯಕ್ಷ ಬಾಪುಗೌಡ ಕೊಪ್ಪದ, ವೆಂಕಪ್ಪ ಗುರನಳ್ಳಿ, ಮಂಜುಳಾ ಕುಂದೂರ, ಚನ್ನಬಸಪ್ಪ ಮುದ್ದಪ್ಪನವರ, ಶಿಕ್ಷಕರಾದ ನೀಲಮ್ಮ ಗಂಜಿಗಟ್ಟಿ, ಅಶ್ವಿನಿ ಬಾಲಪ್ಪನವರ, ದೀಪಾ ಚಾಕಲಬ್ಬಿ, ಶಿದ್ದನಗೌಡ ಪಾಟೀಲ ಹಾಗೂ ಪಾಲಕರು ಪೋಷಕರು ಮುದ್ದು ಮಕ್ಕಳು ಉಪಸ್ಥಿತರಿದ್ದರು.ಶಿಕ್ಷಕಿ ಎಸ್.ಸಿ. ಸಜ್ಜನ ಸ್ವಾಗತಿಸಿದರು. ಅಶೋಕ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.