ರಾಮನಗರ: ಬೆಲೆ ಏರಿಕೆ ನಡುವೆಯೇ ವಾಹನ ಸವಾರರಿಗೆ ಟೋಲ್ ದರ ಏರಿಕೆ ಬಿಸಿ ತಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ( ಎನ್‌ಎಚ್‌ಎಐ) ಟೋಲ್ ದರವನ್ನು ಶೇ. ೫ರಷ್ಟು ಏರಿಕೆ ಮಾಡಿದ್ದು, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಏ.೧ರಂದು ಮಂಗಳವಾರದಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಎಕ್ಸ್‌ಪ್ರೆಸ್ ಹೈವೆ ಟೋಲ್‌ನ ಹೊಸ ದರ:
ಕಾರು/ಜೀಪು ವಾಹನಗಳ ಏಕಮುಖ ಸಂಚಾರದ ಹಳೇ ದರ ೧೭೦ ರು.. ಇತ್ತು. ಇದೀಗ ಈ ದರದಲ್ಲಿ ೧೦ ರು.. ಹೆಚ್ಚಳವಾಗಿದ್ದು, ಹೊಸ ದರ ೧೮೦ ರು.. ಆಗಿದೆ. ದ್ವಿಮುಖ ಸಂಚಾರದ ಹಳೇ ದರ ೨೫೫ ರು.. ಇತ್ತು, ಇದೀಗ ೧೫ ರು. ಹೆಚ್ಚಿಸಲಾಗಿದ್ದು, ಹೊಸ ದರ ೨೭೦ ರು. ಆಗಿದೆ.ಲಘು ವಾಣಿಜ್ಯ ವಾಹನ:
ಲಘು ವಾಣಿಜ್ಯ ವಾಹನಗಳ ಏಕಮುಖ ಸಂಚಾರ ಹಳೆ ದರ ೨೭೫ ರು. ಇತ್ತು. ಹೊಸ ದರ ೨೯೦ ರು. ಆಗಿದ್ದು, ೧೫ ರು. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹಳೆ ದರ ೪೧೫ ರು. ಇತ್ತು. ಇದೀಗ ಹೊಸ ದರ ೪೩೦ ರು. ಆಗಿದ್ದು, ೧೫ ರು. ಹೆಚ್ಚಿಸಲಾಗಿದೆ.ಬಸ್/ಟ್ರಕ್: ಬಸ್/ಟ್ರಕ್‌ಗಳ ಏಕಮುಖ ಸಂಚಾರದ ಹಳೇ ದರ ೫೮೦ ರು. ಇತ್ತು. ಇದಗೀ ಹೊಸ ದರ ೬೦೫ ರು. ಆಗಿದ್ದು, ೨೫ ರು. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹಳೆ ದರ ೮೭೦ ರು. ಇತ್ತು. ಹೊಸ ದರ ೯೦೫ ರು.. ಆಗಿದ್ದು, ಇದೀಗ ೩೫ ರು. ಹೆಚ್ಚಳವಾಗಿದೆ.
ಮೂರು ಆಕ್ಸಲ್ ವಾಣಿಜ್ಯ ವಾಹನ:3 ಆಕ್ಸಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರದ ಹಳೆ ದರ ೬೩೫ ರು. ಇತ್ತು. ಹೊಸ ದರ ೬೬೦ ರು. ಆಗಿದ್ದು, ಇದೀಗ ೨೫ ರು. ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರದ ಹಳೆ ದರ ೯೫೦ ರು. ಇತ್ತು. ಇದೀಗ ಹೊಸ ದರ ೯೯೦ ರು. ಆಗಿದ್ದು, ೪೦ ರು. ಹೆಚ್ಚಳವಾಗಿದೆ.
ಮಲ್ಟಿ ಆಕ್ಸಲ್ ವೆಹಿಕಲ್ಸ್(೪-೬ ಆಕ್ಸಲ್):ಮಲ್ಟಿ ಆಕ್ಸಲ್ ವೆಹಿಕಲ್ಸ್‌ಗಳ (೪-೬ ಆಕ್ಸಲ್) ಏಕಮುಖ ಸಂಚಾರದ ಹಳೆ ದರ ೯೧೦ ರು. ಇತ್ತು. ಇದೀಗ ಹೊಸ ದರ ೯೪೫ ರು. ಆಗಿದ್ದು, ೩೫ ರು.. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹಳೆ ದರ ೧,೩೬೫ ಇತ್ತು. ಹೊಸ ದರ ೧,೪೨೦ ರು. ಆಗಿದ್ದು, ಇದೀಗ ೫೫ ರು.. ಹೆಚ್ಚಿಸಲಾಗಿದೆ.
ಭಾರಿ ವಾಹನಗಳು(೭ ಆಕ್ಸೆಲ್ ಅಥವಾ ಅಧಿಕ):ಏಕಮುಖ ಸಂಚಾರದ ಹಳೆ ದರ ೧,೧೧೦ ಇತ್ತು. ಹೊಸ ದರ ೧,೧೫೫ ರು. ಆಗಿದ್ದು, ೫೫ ರು. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ ೧,೭೩೦ ರು. ಆಗಿದ್ದು, ಹಳೆ ದರ ೧,೬೬೦ ರು. ಇತ್ತು. ಇದೀಗ ೧೦೦ ರು. ಹೆಚ್ಚಿಸಲಾಗಿದೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಏ.೧ರಿಂದ ಪರಿಷ್ಕೃತ ದರ ಜಾರಿಗೊಳಿಸಲಾಗಿದೆ.ಪೊಟೋ೧ಸಿಪಿಟಿ೧:
ಬೆಂಗಳೂರು ಮೈಸೂರು ಹೆದ್ದಾರಿ ಟೋಲ್.