ಟೋಮೊಟೋ ಬೆಲೆ ಕುಸಿತ, ಚರಂಡಿಗೆ ಸುರಿದ ರೈತರು

KannadaprabhaNewsNetwork |  
Published : Mar 01, 2026, 03:00 AM IST
ಪೊಟೋ-ದೊಡ್ಡೂರ -ಲಕ್ಷ್ಮೇಶ್ವರ ಮದ್ಯದ ರಸ್ತೆಯ ಪಕ್ಕದಲ್ಲಿ ರೈತರು ತಾವು ಬೆಳೆದ ಟಮೋಟೊ ಹಣ್ಣಿಗೆ ಬೆಲೆ ಸಿಗದೆ ಸುರಿದ ಹೋಗಿರುವ ಹಣ್ಣನ್ನು ಆಯ್ದುಕೊಳ್ಳುತ್ತಿರುವ ಸಾರ್ವಜನಿಕರು.  | Kannada Prabha

ಸಾರಾಂಶ

ಟೋಮೊಟೋ ಬೆಲೆ ಕುಸಿತದಿಂದ ಕಂಗಾಲಾದ ರೈತರು ತಾವು ಬೆಳದ ಟೋಮೊಟೋ ಹಣ್ಣನ್ನು ರಸ್ತೆಯ ಪಕ್ಕದ ಚರಂಡಿಗೆ ಸುರಿದು ಹೋದ ಘಟನೆ ಶನಿವಾರ ಕಂಡು ಬಂತು.

ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: ಟೋಮೊಟೋ ಬೆಲೆ ಕುಸಿತದಿಂದ ಕಂಗಾಲಾದ ರೈತರು ತಾವು ಬೆಳದ ಟೋಮೊಟೋ ಹಣ್ಣನ್ನು ರಸ್ತೆಯ ಪಕ್ಕದ ಚರಂಡಿಗೆ ಸುರಿದು ಹೋದ ಘಟನೆ ಶನಿವಾರ ಕಂಡು ಬಂತು.

ಸತತ ಒಂದು ವಾರದಿಂದ ಟೋಮೊಟೋ ಬೆಲೆ ನೆಲ ಕಚ್ಚಿದ್ದರಿಂದ ರೈತರು ಕಷ್ಟ ಪಟ್ಟು ಬೆಳೆದ ಟೋಮೊಟೋ ಹಣ್ಣನ್ನು ದೊಡ್ಡೂರ-ಲಕ್ಷ್ಮೇಶ್ವರ ಮದ್ಯದ ರಸ್ತೆಯ ಪಕ್ಕದ ಚರಂಡಿಗೆ ಸುರಿದು ಹೋಗಿದ್ದಾರೆ. ಟೋಮೊಟೋ ಹಣ್ಣಿನ ಬೆಲೆ ಕಳೆದ ಒಂದು ವಾರದಿಂದ 20-25 ಕೇಜಿ ಬಾಕ್ಸ್ ಒಂದಕ್ಕೆ ₹ 50-100ಕ್ಕೆ ಕುಸಿದಿದ್ದರಿಂದ ಟೋಮೊಟೋ ಹಣ್ಣನ್ನು ಕಿತ್ತ ಆಳಿನ ಕೂಲಿಯೂ ಆಗುವುದಿಲ್ಲ ಎಂದು ರೈತರು ದಾರಿ ತೋಚದೆ ರಸ್ತೆಯ ಪಕ್ಕಕ್ಕೆ ಸುರಿದು ಹೋಗಿದ್ದಾರೆ.

ಒಂದು ಎಕರೆ ಟೋಮೊಟೋ ಸಸಿ ತಂದು ನಾಟಿ ಮಾಡಲು ಸುಮಾರು ₹25 ಸಾವಿರ ಖರ್ಚಾಗುತ್ತದೆ. ಆಳಿನ ಕೂಲಿ, ಗೊಬ್ಬರ, ಕ್ರಿಮಿನಾಶಕ ಸಿಂಪಡಿಸುವ ಖರ್ಚು ಸೇರಿದಂತೆ ಲಕ್ಷಾಂತರ ವೆಚ್ಚವಾಗುತ್ತದೆ. ಈಗ ಟೋಮೊಟೋ ಹಣ್ಣು ಬಂದ ವೇಳೆ ಬಾಕ್ಸ್‌ ಬೆಲೆ ₹50ಕ್ಕೆ ಕುಸಿತವಾಗಿದ್ದು ರೈತರ ಎದೆ ಸೀಳಿದಂತೆ ಮಾಡಿದೆ. ಹಲವು ಕನಸು ಹೊತ್ತು ಸುಡು ಬೇಸಿಗೆಯಲ್ಲಿ ನೀರುಣಿಸಿ ಬೆಳೆದ ಹಣ್ಣನ್ನು ದಿಕ್ಕು ತೋಚದಂತೆ ರಸ್ತೆಯ ಪಕ್ಕದಲ್ಲಿ ಚೆಲ್ಲಿ ಹೋಗುವುದು ರೈತರ ಪಾಲಿಗೆ ಹೆತ್ತ ಮಗುವನ್ನು ಕತ್ತು ಹಿಸುಕಿ ಕೊಂದಂತೆ ಆಗುತ್ತದೆ ಎನ್ನುತ್ತಾರೆ ಟೋಮೊಟೋ ಬೆಳೆದು ಕೈ ಸುಟ್ಟುಕೊಂಡ ರೈತ ಅಬ್ದುಲ್ ಕರೀಮ್ ಸೂರಣಗಿ.

ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ಪರಿತಪಿಸುತ್ತಿದ್ದೇವೆ. ಈ ವೇಳೆ ಟೋಮೊಟೋ ಬೆಲೆಯೂ ನೆಲ ಕಚ್ಚಿದ್ದರಿಂದ ರೈತರ ಬೆವರಿಗೆ ಸಿಕ್ಕ ಬೆಲೆ ಇದು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಗತಿಪರ ರೈತ ಶಿವನಗೌಡ ಪಾಟೀಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ದಿನೇಶ ಗುಂಡೂರಾವ್
ರಾಜ್ಯದಲ್ಲಿ ಜನರು ಆತಂಕದಲ್ಲೇ ಬದುಕುವಂತಾಗಿದೆ: ಕಾಗೇರಿ