ತರಕಾರಿ ಬೆಲೆ ಗಗನಮುಖಿ । ಗ್ರಾಹಕರು ಕಕ್ಕಾಬಿಕ್ಕಿ
ಟೊಮ್ಯೊಟೋ ಕೆಜಿಗೆ ₹ ೮೦ ಇದ್ದರೆ, ಹಸಿಮೆಣಸಿನಕಾಯಿ ಖಾರ ಹೆಚ್ಚಾಗಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.
ನೀರಾವರಿ ಪ್ರದೇಶ ಭತ್ತದ ಕಣಿಜ ಕಾರಟಗಿ ಮಾರುಕಟ್ಟೆಯಲ್ಲಿ ಬುಧವಾರ ತರಕಾರಿ ಬೆಲೆ ಇದು. ಏಕಾಏಕಿ ತರಕಾರಿ ಬೆಲೆ ಗಗನಮುಖಿಯಾಗಿದ್ದು, ವಾರದ ಸಂತೆಗೆ ಬಂದ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ.ಮಳೆ ಇಲ್ಲದೆ ಕಳೆದ ಮಾರ್ಚ್‌ದಿಂದ ಮೇವರೆಗೂ ತರಕಾರಿ ಬೆಲೆಗಳು ಸಹಜವಾಗಿ ಏರುಗತಿಯಲ್ಲಿದ್ದವು. ಈಗ ಇಂಧನ ಬೆಲೆ ಏರಿಕೆಯಿಂದ ಸಹಜವಾಗಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನುವುದು ತರಕಾರಿ ವ್ಯಾಪಾರಿಗಳ ಸಿದ್ಧ ಉತ್ತರ.
ಇನ್ನು ದೊಣ್ಣಮೆಣಸಿನಕಾಯಿ(ಕ್ಯಾಪ್ಸಿಕಂ) ಮತ್ತು ಗಜ್ರಿ (ಕ್ಯಾರೆಟ್)ನ ಬೆಲೆ ಕೆಜಿಗೆ ₹೭೦-೮೦, ಬೆಂಡೆಕಾಯಿ ಮತ್ತು ಆಲೂಗಡ್ಡೆ ₹೫೦-೬೦ಗೆ ಏರಿಕೆಯಾಗಿದ್ದರೆ, ಪ್ರತಿದಿನ ಅಡುಗೆಗೆ ಅಗತ್ಯವಾಗಿ ಬಳಕೆ ಮಾಡುವ ಟೊಮ್ಯಾಟೊ ಬೆಲೆಯೂ ₹೮೦ರ ಗಡಿ ದಾಟಿತ್ತು. ಬದನೆಕಾಯಿ ಬೆಲೆಯಲ್ಲಿ ಯಾವುದೇ ವ್ಯತ್ಯಸವಾಗಿರಲಿಲ್ಲ.
ಒಂದು ತಿಂಗಳಿನಿಂದ ನಿತ್ಯ, ವಾರದ ಸಂಜೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೇಳುವವರೇ ಇರಲಿಲ್ಲ. ಕೆಜಿಗೆ ಇತಿಂಷ್ಟು ಎನ್ನುವುದಕ್ಕಿಂತ ₹೫೦ಗೆ ಐದಾರು ಕೆಜಿ ಮಾರಾಟ ಮಾಡಲಾಗಿತ್ತು. ಆದರೆ ಬುಧವಾರ ಏಕಾಏಕಿ ಕೆಜಿಗೆ ₹೮೦ ತಲುಪಿದೆ. ಟೊಮ್ಯಾಟೊಗೆ ಹೆಚ್ಚಿನ ಬೇಡಿಕೆ ಹೀಗಾಗಿ ಬೆಲೆ ಏರಿಕೆಯಾಗಿದೆ. ಬದನೆಕಾಯಿ ಹೊರತುಪಡಿಸಿ ಯಾವ ತರಕಾರಿಯೂ ೫೦-೬೦ ಕೆಜಿಗೆ ಕಡಿಮೆಯಿಲ್ಲದೆ ಗ್ರಾಹಕರು ಅನಿವಾರ್ಯವಾಗಿ ಖರೀದಿಸುವಂಥ ವಾತಾವರಣ ನಿರ್ಮಾಣವಾಗಿತ್ತು.
೨೬ಕೆಆರ್‌ಟಿ:೩,೩ಎ: ಕಾರಟಗಿಯ ವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿ.