ನಾಳೆ ತರೀಕೆರೆ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ 132ನೇ ದಿವ್ಯ ರಥೋತ್ಸವ

KannadaprabhaNewsNetwork |  
Published : Jan 04, 2025, 12:30 AM IST
ಜ.5 ರಂದು ತರೀಕೆರೆ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಯವರ 132ನೇ ದಿವ್ಯ ರಥೋತ್ಸವ | Kannada Prabha

ಸಾರಾಂಶ

ತರೀಕೆರೆ, ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಅನೇಕ ಪ್ರವಾಸಿ ಸ್ಥಳಗಳಂತೆ ಧಾರ್ಮಿಕ ಕ್ಷೇತ್ರಗಳಿಗೂ ಪ್ರಖ್ಯಾತಿಯಾಗಿದೆ. ವರ್ಷಪೂರ್ತಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತರು ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸುತ್ತಾರೆ.

- ಭಕ್ತರ ಅಭೀಷ್ಟೆಗಳನ್ನು ಈಡೇರಿಸುವ ಷಷ್ಠಿ ಖ್ಯಾತಿ । ಅದ್ಧೂರಿ ರಥೋತ್ಸವ, ಅತ್ಯಾಕರ್ಷಕ ಹೂವಿನ ಅಲಂಕಾರಕನ್ನಡಪ್ರಭ ವಾರ್ತೆ, ತರೀಕೆರೆ

ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಅನೇಕ ಪ್ರವಾಸಿ ಸ್ಥಳಗಳಂತೆ ಧಾರ್ಮಿಕ ಕ್ಷೇತ್ರಗಳಿಗೂ ಪ್ರಖ್ಯಾತಿಯಾಗಿದೆ. ವರ್ಷಪೂರ್ತಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತರು ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸುತ್ತಾರೆ.

ಮಲೆನಾಡು ಹೆಬ್ಬಾಗಿಲು ತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ತುಳುಷಷ್ಠಿಯಂದು ಶ್ರದ್ಧಾಭಕ್ತಿಯಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದಿವ್ಯ ರಥೋತ್ಸವದಲ್ಲಿ ರಾಜ್ಯದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹ ಭಾಗವಹಿಸಿ ದೇವರ ದರ್ಶನ ಪಡೆಯುತ್ತಾರೆ.ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಇಲ್ಲಿ ಬಹು ಅಪರೂಪವಾದ ಕೃಷ್ಣ ಶಿಲೆಯಲ್ಲಿ ಒಡಮೂಡಿದ್ದು ಏಳು ಹೆಡೆ ಸರ್ಪಾಕೃತಿಯಲ್ಲಿ ಆದಿಶೇಷನ ರೂಪದಲ್ಲಿದೆ. ಶ್ರೀ ಮೂರ್ತಿ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತದೆ. ಏಳು ಹೆಡೆ ಸರ್ಪಾಕೃತಿಯಲ್ಲಿ ಆದಿಶೇಷನ ರೂಪದಲ್ಲಿ ಸರ್ವಾಲಂಕೃತವಾದ ಸ್ವಾಮಿಯನ್ನು ನೋಡುತ್ತ ನಿಂತರೆ ಸಮಯ ಕಳೆದದ್ದೇ ಗೊತ್ತಾಗುವು

ದಿಲ್ಲ, ಶ್ರೀ ಸ್ವಾಮಿಯ ಮೂರ್ತಿ ಮನಮೋಹಕವಾಗಿದೆ.ಷಷ್ಠಿ ಖ್ಯಾತಿ ಸುಬ್ರಹ್ಮಣ್ಯಃ ತರೀಕೆರೆಯಲ್ಲಿ ಆದಿಶೇಷನ ರೂಪದಲ್ಲಿ ನೆಲಸಿರುವ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಗೆ ಪ್ರಾಚೀನ ಕಾಲದಿಂದಲೂ ನಿರಂತರವಾಗಿ ವೇದೋಕ್ತ ಮಂತ್ರ ಪುರಸ್ಸರವಾಗಿ ನಡೆಸಿಕೊಂಡು ಬರುತ್ತಿರುವ ಷಷ್ಠಿ ಪೂಜೆಗೂ ಅವಿನಾಭಾವ ಸಂಬಂಧ ಇದೆ. ಜಾತಿ ಮತ ಬೇಧವಿಲ್ಲದೆ ಎಲ್ಲ ವರ್ಗದ ಭಕ್ತಜನರು ಷಷ್ಠಿ ಪೂಜೆಯಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸುತ್ತಾರೆ. ಅಂತೆಯೆ ಭಕ್ತರ ಅಭೀಷ್ಠೆಗಳನ್ನು ಶ್ರೀ ಸ್ವಾಮಿ ಈಡೇರಿಸುತ್ತಾನೆ ಎಂಬುದು ಭಕ್ತಜನರ ಅಚಲವಾದ ವಿಶ್ವಾಸ ಹಾಗೂ ಭಕ್ತಿಭಾವ ಪೂರ್ಣ ನಂಬಿಕೆಯೂ ಇದೆ.ವಿಶೇಪ ಹೂವಿನ ಅಲಂಕಾರಃ

ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ತುಳು ಷಷ್ಠಿಯ ದಿವ್ಯ ರಥೋತ್ಸವ ಸಂದರ್ಭದಲ್ಲಿ ಭಕ್ತಜನರು ದೇವಸ್ಥಾನ, ಗರ್ಭಗುಡಿ ಹಾಗೂ

ಭವ್ಯ ತೇರನ್ನು ನಾನಾ ಬಗೆಯಿಂದ ವಿಶೇಷ ಹೂವುಗಳಿಂದ ಅಲಂಕರಿಸಲಾಗುತ್ತದೆ. ಭವ್ಯವಾಗಿ ಅಲಂಕೃತವಾದ ದೇವಸ್ಥಾನವನ್ನು ನೋಡುವುದೇ ಚಂದ.ಗರುಡಪಕ್ಷಿ ಪ್ರದಕ್ಷಿಣೆಃ ಶ್ರೀ ಸ್ವಾಮಿಯವರ ರಥಾರೋಹಣವಾಗುತ್ತಿದ್ದಂತೆ ಶ್ರೀ ಸ್ವಾಮಿಯವರಿಗೆ ಮಹಾ ಮಂಗಳಾರತಿಯಾಗುತ್ತಿದ್ದಂತೆ, ಶ್ರೀ ಸ್ವಾಮಿಗೆ ಭಕ್ತಜನರ ಉದ್ಘೋಷ ಮತ್ತು ಜೈಕಾರದ ನಡುವೆಯೇ ಆಕಾಶದಲ್ಲಿ ಗರುಡಪಕ್ಷಿ ತೇರಿಗೆ ಪ್ರದಕ್ಷಿಣೆ ಬರುವುದು ಪವಾಡದಂತೆ ನಡೆಯುತ್ತಿದ್ದು ಭಕ್ತ ಜನಸಮೂಹ ಈ ಕ್ಷಣಗಳನ್ನು ಕಣ್ತುಂಬಿಕೊಂಡು ಸಂತೋಷದಿಂದ ನಮಸ್ಕರಿಸಿ ಜೈಕಾರ ಹಾಕುತ್ತಾರೆ.

ಜ.4 ರಂದು ಶನಿವಾರ ಪ್ರಾತಃಕಾಲ 9 ಗಂಟೆಗೆ ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಾಂದಿ, ಋತ್ವಿಗ್ವರಣ, ಗೋಪೂಜೆ ನವಗ್ರಹ ಜಪ, ಸೂರ್ಯ ನಮಸ್ಕಾರ, ಅಶ್ವತ್ಥ ಪ್ರದಕ್ಷಿಣೆ, ದ್ವಜಾರೋಹಣ ಏಕವಾರ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯುತ್ತದೆ.

ಜ.5 ರಂದು ಷಷ್ಠಿ ಪ್ರಾತಃಕಾಲ 5 ಗಂಟೆಗೆ ಸುಪ್ರಭಾತ ಸೇವೆ, ನಗರ ಸಂಕೀರ್ತನೆ, ಮೂಲದೇವರಿಗೆ ರುದ್ರಾಭಿಷೇಕ, 8ಕ್ಕೆ ನವ ಗ್ರಹಪೂರ್ವಕ ಶ್ರೀ ಸುಬ್ಹಹ್ಮಣ್ಯ ಹೋಮ, ದಿಗ್ಬಲಿ, ರಥೋತ್ಸವಾಂಗ ಹೋಮಗಳು, ಮಹಾಮಹಿಮ ಶ್ರೀ ಸುಬ್ಹಹ್ಮಣ್ಯ ಸ್ವಾಮಿಯವರ ದಿವ್ಯ ರಥಾರೋಹಣ, ರಥೋತ್ಸವ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ, ಸಾಯಂಕಾಲ ಗ್ರಾಮದೊಳಗೆ ಹೂವಿನ ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ಅಷ್ಠಾವಧಾನ ಸೇವೆ, ರಾತ್ರಿ 9ಕ್ಕೆ ತೊಟ್ಟಿಲು ಸೇವೆ, ಶಯನೋತ್ಸವ ನಡೆಯುತ್ತದೆ.ಜ.6 ರಂದು ಸಪ್ತಮಿ ಪ್ರಾತಃಕಾಲ ಸುಪ್ರಭಾತ ಸೇವೆ, ಕಷಾಯ ತೀರ್ಥ, ರುದ್ರಾಭಿಷೇಕ, ಅವಬೃತ ಸ್ನಾನ, ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ, ಜ.7 ರಂದು ಸಂಪ್ರೋಕ್ಷಣೆ ಮತ್ತು ಮಹಾ ಮಂಗಳಾರತಿ ನಡೆಯುತ್ತದೆ. ರಥೋತ್ಸವದ ಅಂಗವಾಗಿ ಜ.3 ರಿಂದ 7 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

-- ಕೋಟ್--

ಜನವರಿ 5 ರಂದು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಲಿರುವ 132ನೇ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವದಲ್ಲಿ ಸರ್ವರೂ ಭಾಗವಹಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಬ್ರಾಹ್ಮಣ ಸೇವಾ ಸಮಿತಿ ಪರವಾಗಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಮನವಿ ಮಾಡಿದ್ದಾರೆ.-3ಕೆಟಿಆರ್.ಕೆ.1ಃ

ತರೀಕೆರೆ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ.3ಕೆಟಿಆರ್.ಕೆ.2ಃ

(ಸಂಗ್ರಹ ಚಿತ್ರ) ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!