ನಾಳೆ ಮಹಾದೇವಿ, ಶಶಿಕಲಾ, ಡಾ.ಶಿವಕುಮಾರ ಸೇರಿದಂತೆ ಅಲಿಬಾದಿ ದಂಪತಿಗೆ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Nov 24, 2025, 03:30 AM IST
ಪ್ರಶಸ್ತಿ ಪುರಸ್ಕೃತರು | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ 6 ದಿನಗಳ ಕಾಲ ನಡೆಯುವ ಇಷ್ಟಲಿಂಗ ಮಹಾಪೂಜೆ ಹಾಗೂ ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ 6 ದಿನಗಳ ಕಾಲ ನಡೆಯುವ ಇಷ್ಟಲಿಂಗ ಮಹಾಪೂಜೆ ಹಾಗೂ ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಾಹಿತಿ ದಂಪತಿಯಾದ ಅಪ್ಪಾಸಾಹೇಬ ಅಲಿಬಾದಿ ಹಾಗೂ ಭಾರತಿ ಅಪ್ಪಾಸಾಹೇಬ ಅಲಿಬಾದಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಸಾಹಿತ್ಯ ರತ್ನಾಕರ ಪ್ರಶಸ್ತಿ, ಚಿಕ್ಕೋಡಿ ತಾಲೂಕಿನ ನಿವೃತ್ತ ಶಿಕ್ಷಕಿ, ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆಯಾದ ಮಹಾದೇವಿ ಸಿದ್ದಪ್ಪ ಚವಾನ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ, ವಿಜಯಪುರ ಜಿಲ್ಲೆಯ ಸ್ಪೂರ್ತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ, ಸುವರ್ಣ ಸಾಧಕಿ ಪ್ರಶಸ್ತಿ-2025 ಪುರಸ್ಕೃತೆಯಾದ ಶಶಿಕಲಾ ಗುರು ತಳಸದಾರ(ಸ್ಥಾವರಮಠ) ಅವರಿಗೆ ಸಹಕಾರ ರತ್ನ ಪ್ರಶಸ್ತಿ, ಬಾಗಲಕೋಟೆ ಜಿಲ್ಲೆಯ ಎಂಆರ್‌ಎನ್‌ ಗ್ರುಪ್‌ ಆಫ್‌ ಮೆಡಿಕಲ್‌ ಇನ್‌ಸ್ಟ್ರಕ್ಷನ್‌ನ ಆಡಳಿತಾಧಿಕಾರಿ ಡಾ.ಶಿವಕುಮಾರ ಅಶೋಕ ಗಂಗಾಲ ಅವರಿಗೆ ವೈದ್ಯ ಭೂಷಣ ಪ್ರಶಸ್ತಿಯನ್ನು ನಾಡಿನ ಶಿವಾಚಾರ್ಯರು ಮತ್ತು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನ.25 ರಂದು ನಡೆಯುವ ಮಾನವ ಧರ್ಮ ಸಮಾವೇಶದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಶ್ರೀಕ್ಷೇತ್ರ ಬಿಸನಳ್ಳಿಯ ಕಾಶಿ ಜಂಗಮವಾಡಿ ಖಾಸಾಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!