ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿ.ಕಣಬೂರು ಗ್ರಾಪಂನಿಂದ ನಿರ್ಮಿಸಿರುವ ನೂತನ ಸ್ವಾಗತ ಕಮಾನು ಹಾಗೂ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿರುವ ಉಳುಮೆ ಮಾಡುತ್ತಿರುವ ರೈತನ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಬಸ್ ನಿಲ್ದಾಣದ ಅಭಿವೃದ್ಧಿಗಾಗಿ ಈ ಹಿಂದೆ ₹50 ಲಕ್ಷ ಅನುದಾನವನ್ನು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಂದ, ಶಾಸಕರ ಅನುದಾನದಲ್ಲಿ ₹25 ಲಕ್ಷ ಅನುದಾನ ನೀಡಲಾಗಿತ್ತು.
ಇದೀಗ ಗ್ರಾಪಂನಿಂದ ಸುಸಜ್ಜಿತ ಸ್ವಾಗತ ಕಮಾನು, ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಲಯನ್ಸ್ ಸಂಸ್ಥೆ ಸಹಕಾರದಲ್ಲಿ ಭಾರತದ ಬೆನ್ನೆಲುಬಾದ ರೈತ ಮತ್ತು ಎತ್ತಿನ ಪ್ರತಿಮೆ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.ಲಯನ್ಸ್ ಸಂಸ್ಥೆ ಸಾರ್ವಜನಿಕವಾಗಿ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಸಮಾಜಕ್ಕಾಗಿಯೇ ವಿವಿಧ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಪ್ರಸ್ತುತ ಗ್ರಾಪಂನೊಂದಿಗೆ ಸೇರಿ ಅಭಿವೃದ್ಧಿ ಕಾರ್ಯಕ್ಕೆ ಕೈಜೋ ಡಿಸಿರುವುದು ಶ್ಲಾಘನೀಯ. ಪಟ್ಟಣದ ಅಭಿವೃದ್ಧಿಗೆ ನಿರಂತರವಾಗಿ ನನ್ನ ಕಡೆಯಿಂದ ಸಹಕಾರವಿರುತ್ತದೆ ಎಂದು ಹೇಳಿದರು.
ವಿದೇಶ ಅಥವಾ ಬೃಹತ್ ನಗರಗಳ ಮಾದರಿಯಲ್ಲಿ ರಸ್ತೆ ವಿಸ್ತರಣೆ ಮಾಡಿ, ಎರಡೂ ಬದಿಗಳಲ್ಲಿ ಉತ್ತಮ ಹೈಮಾಸ್ಟ್ ದೀಪಗಳನ್ನು ಅಳವಡಿಸಿ ಪಟ್ಟಣದ ಚೆಂದ ಹೆಚ್ಚಿಸಲಾಗಿದೆ. ಗ್ರಾಪಂ ವ್ಯಾಪ್ತಿಯನ್ನು ತಾಲೂಕು ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಲಾಗಿದೆ ಎಂದು ತಿಳಿಸಿದರು.
ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ನಿಂದ ನಿರ್ಮಿಸಿರುವ ಉಳುಮೆ ಮಾಡುತ್ತಿರುವ ರೈತನ ಪ್ರತಿಮೆಯನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ರವಿಚಂದ್ರ, ವಿಕ್ರಮ್, ಸುಧಾಕರ್, ರವೀಂದ್ರ, ರಂಜಿತಾ, ಚಂದ್ರಮ್ಮ, ಹೇಮಲತಾ ಇದ್ದರು.