ಹಾಲು ಉತ್ಪಾದಕರ ಹಿತ ರಕ್ಷಣೆಗೆ ಮೊದಲ ಆದ್ಯತೆ: ಸತೀಶ್‌ಗೌಡ

KannadaprabhaNewsNetwork |  
Published : Feb 22, 2026, 02:00 AM IST
ಬೆಂಡಿಗಾನಹಳ್ಳಿಯಲ್ಲಿ ಉತ್ಪಾದಕರಿಗೆ ವೈದ್ಯಕೀಯ ಪರಿಹಾರ ಚೆಕ್‌ಗಳನ್ನು ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ವಿತರಿಸಿದರು ಉಪವ್ಯವಸ್ಥಾಪಕ ಶ್ರೀರಾಮ್, ಇತರರು ಇದ್ದರು | Kannada Prabha

ಸಾರಾಂಶ

ಸೂಲಿಬೆಲೆ: ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿರುವ ಉತ್ಪಾದಕರ ಆರೋಗ್ಯ ರಕ್ಷಣೆಗೆ ಬಮೂಲ್ ಆದ್ಯತೆ ನೀಡುತ್ತಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡ ಹೇಳಿದರು

ಸೂಲಿಬೆಲೆ: ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿರುವ ಉತ್ಪಾದಕರ ಆರೋಗ್ಯ ರಕ್ಷಣೆಗೆ ಬಮೂಲ್ ಆದ್ಯತೆ ನೀಡುತ್ತಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡ ಹೇಳಿದರು.

ಹೋಬಳಿಯ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಲು ಸರಬರಾಜು ಮಾಡುವ ಸಕ್ರಿಯ ಸದಸ್ಯರು ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, 2೦೨೫- ೨೬ನೇ ಸಾಲಿನಲ್ಲಿ ಹಾಲು ಪೂರೈಸುವ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದರೆ ಅವರಿಗೆ ವೈದ್ಯಕೀಯ ಪರಿಹಾರ ಚೆಕ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ನಕ್ಕನಹಳ್ಳಿ, ನಡುವತ್ತಿ, ಬೆಟ್ಟಹಳ್ಳಿ, ಬಿಸನಹಳ್ಳಿ, ಕಮ್ಮಸಂದ್ರ, ಬಿಸನಹಳ್ಳಿ, ಎಂ.ಸತ್ಯವಾರ ಗ್ರಾಮಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದ ೮ ಮಂದಿಗೆ ಚಿಕಿತ್ಸೆಗೆ ಅನುಗುಣವಾಗಿ ಹಾಗೂ ಮರಣ ಹೊಂದಿದ ಸದಸ್ಯರ ನಾಮಿನಿಗೆ ಪರಿಹಾರ ಚೆಕ್ ನೀಡಲಾಗಿದೆ ಎಂದರು.

ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್, ಬೆಂಗಳೂರು ಹಾಲು ಒಕ್ಕೂಟದ ಡಾ.ಸಂತೋಷ್ ಕುಮಾರ್ ಮಾತನಾಡಿದರು. ಬಮೂಲ್ ಟ್ರಸ್ಟ್ ನವೀನ್ ಕುಮಾರ್, ಸಹಕಾರ ಬ್ಯಾಂಕ್ ಸಿಇಒ ಎಸ್.ಕೆ.ವಸಂತ್‌ಕುಮಾರ್, ಕಂಬಳೀಪುರ ಗ್ರಾಪಂ ಅಧ್ಯಕ್ಷ ಮಲ್ಲಿಕಾ ಅವಿನ್, ಸಹಕಾರ ಬ್ಯಾಂಕ್ ನಿರ್ದೇಶಕ ವಿನಯ್, ಹಾಗೂ ಹಾಲು ಉತ್ಪಾದಕರು, ಸಹಕಾರ ಸಂಘದ ಕಾರ‍್ಯದರ್ಶಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಲ್ಯಾಣ ಕರ್ನಾಟಕ ವೃಂದ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ
ಸಂಸ್ಕೃತಿಯ ಪ್ರತೀಕ ಶಾರದ ವಿದ್ಯಾಸಂಸ್ಥೆ