ಪಕ್ವ ಪ್ರತಿಭೆಗೆ ಪ್ರೇಕ್ಷಕರ ಅಭಿಮಾನ: ಪುಷ್ಕಳ್‌ ಕುಮಾರ್

KannadaprabhaNewsNetwork |  
Published : Jun 18, 2026, 02:45 AM IST
ಕಿನ್ನಿಗೋಳಿಯಲ್ಲಿ ಶ್ರೀ ಮೇಘ ರಂಜನಿ ಕಾರ್ಯಕ್ರಮ | Kannada Prabha

ಸಾರಾಂಶ

ಕಲಾವಿದನ ಪ್ರದರ್ಶನದಲ್ಲಿ ಪಕ್ವತೆ ಇರಬೇಕು. ಸಂಗೀತ ಕ್ಷೇತ್ರಕ್ಕೆ ಪ್ರದರ್ಶನ ನೀಡುವ ಕಲಾವಿದರಲ್ಲಿ ಶಾಸ್ತ್ರೀಯ ಅಧ್ಯಯನ ಕಡಿಮೆ ಇದ್ದರೂ, ಶೃತಿ ಲಯ ರಾಗಗಳ ಸಾಮಾನ್ಯ ಜ್ಞಾನ, ಪ್ರತಿಭೆಯಲ್ಲಿ ಪಕ್ವತೆ ಇದ್ದಾಗ ಪ್ರೇಕ್ಷಕರ ಅಭಿಮಾನ ಗಳಿಸಲು ಸಾಧ್ಯ ಎಂದು ಹರಿಕಥಾ ಶಿರೋಮಣಿ, ಕಲಾ ಸಾರಥಿ ತೋನ್ಸೆ ಪುಷ್ಕಳ್‌ ಕುಮಾರ್ ಹೇಳಿದರು.

ಮೂಲ್ಕಿ: ಕಲಾವಿದನ ಪ್ರದರ್ಶನದಲ್ಲಿ ಪಕ್ವತೆ ಇರಬೇಕು. ಸಂಗೀತ ಕ್ಷೇತ್ರಕ್ಕೆ ಪ್ರದರ್ಶನ ನೀಡುವ ಕಲಾವಿದರಲ್ಲಿ ಶಾಸ್ತ್ರೀಯ ಅಧ್ಯಯನ ಕಡಿಮೆ ಇದ್ದರೂ, ಶೃತಿ ಲಯ ರಾಗಗಳ ಸಾಮಾನ್ಯ ಜ್ಞಾನ, ಪ್ರತಿಭೆಯಲ್ಲಿ ಪಕ್ವತೆ ಇದ್ದಾಗ ಪ್ರೇಕ್ಷಕರ ಅಭಿಮಾನ ಗಳಿಸಲು ಸಾಧ್ಯ ಎಂದು ಹರಿಕಥಾ ಶಿರೋಮಣಿ, ಕಲಾ ಸಾರಥಿ ತೋನ್ಸೆ ಪುಷ್ಕಳ್‌ ಕುಮಾರ್ ಹೇಳಿದರು.

ಮಧುರ ತರಂಗ, ದಕ್ಷಿಣ ಕನ್ನಡ, ಮಂಗಳೂರು ಆಶ್ರಯದಲ್ಲಿ ಕಿನ್ನಿಗೋಳಿಯ ಯುಗ ಪುರುಷ ಹಾಗೂ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಯೋಗದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಮೇಘ ರಂಜನಿ ಶೀರ್ಷಿಕೆಯಲ್ಲಿ ಜಗದೀಶ್ ಶಿವಪುರ ಸಾರಥ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಉಡುಪಿ ಕಾನಂಗಿ ದೇವಸ್ಥಾನದ ಪ್ರಧಾನ ಅರ್ಚಕ ಕುತ್ಪಾಡಿ ರಾಧಾಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನುಡಿ ಚಕ್ರೇಶ್ವರ. ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕರಂಗಲ್ಪಾಡಿಯ ವ್ಯೆದ್ಯಕೀಯ ನಿರ್ದೇಶಕ ಡಾ. ಹಂಸರಾಜ್ ಆಳ್ವರಿಗೆ ಮಧುರತರಂಗ ಸಂಗೀತ ಸಂಸ್ಥೆ ವತಿಯಿಂದ ವೈದ್ಯೋ ನಾರಾಯಣ ಋಷಿಃ ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು.

ಮೇಘ ರಂಜನಿ ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತದ ಒಕ್ಕೂಟದ ಕಲಾವಿದರು, ಮಧುರ ತರಂಗ ಸಂಸ್ಥೆಯಿಂದ ಗೌರವವನ್ನು ಪಡೆದಿರುವ ಮುರಳೀಧರ ಕಾಮತ್, ಸತೀಶ್ ಸುರತ್ಕಲ್, ನವಗಿರಿ ಗಣೇಶ್, ಅಧ್ಯಕ್ಷ ಧನರಾಜ್ ಅತ್ತಾವರ, ಲಯಮಾತಾಂಡ ದೀಪಕ್ ಉಳ್ಳಾಲ್, ಐವನ್ ರಿಚರ್ಡ್ ಡಿಸೋಜ ವಾದ್ಯಗೋಷ್ಠಿಯ ಕಲಾವಿದರಾಗಿ ಭಾಗವಹಿಸಿದ್ದು, ರವೀಂದ್ರ ಪ್ರಭು ಹಾಗೂ ಮುರಳೀಧರ ಕಾಮತ್‌ ಅವರ ವಾದ್ಯಗೋಷ್ಠಿಯ ಕಲಾವಿದರು ಹಾಗೂ ಗಾಯಕರ ಸಂಯೋಜನೆಯನ್ನು ಮಾಡಿ ಗಾಯಕರಾದ ಕರ್ನಾಟಕ ಸ್ವರ ಕಂಠೀರವ, ಸ್ವರ ತಪಸ್ವಿ ಜಗದೀಶ್ ಶಿವಪುರ, ತೋನ್ಸೆ ಪುಷ್ಕಳ್‌ ಕುಮಾರ್, ರಾಮು, ರೇಷ್ಮಾ ಮಂಜುನಾಥ್, ಅದ್ಭುತ ಗಾಯಕಿ ವೈಷ್ಣವಿ ಭಟ್ ಕಟೀಲು, ರಮೇಶ್ ಸಾಲ್ಯಾನ್, ಶೀಲಾ ಪಡೀಲ್ ಗಾಯನ ನೆರೆದಿದ್ದ ಪ್ರೇಕ್ಷರನ್ನು ಮನರಂಜಿಸಿತು.

ಒಕ್ಕೂಟದ ಅಧ್ಯಕ್ಷ ಧನರಾಜ್, ಪ್ರಕಾಶ್, ಡಾ. ಸರಳ ರಮೇಶ್ ಕುಂದರ್, ಮಧುರ ತರಂಗದ ಕೋಶಾಧಿಕಾರಿ ಪಿ. ಶಿವರಾಮ್, ಮುಕ್ತ ಶ್ರೀನಿವಾಸ, ರೇಖಾ ಜಗದೀಶ್ ಶಿವಪುರ, ಭಜನಾ ಭಗೀರಥ ಭರತ್‌ ಕುಮಾರ್, ಲೆಕ್ಕಪರಿಶೋಧಕ ಕೆ. ಆರ್. ಕಾರಂತ್, ಸುಭಾಷಿತ್ ಉಡುಪಿ ಹಾಗೂ ಒಕ್ಕೂಟದ ಕಲಾವಿದರು ಪಾಲ್ಗೊಂಡಿದ್ದರು. ನಯನ ದಿವಾಕರ್ ವಂದಿಸಿದರು. ಕುಮಾರಿ ವರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು.

(ಚಿತ್ರ:15ಕಿನ್ನಿಗೋಳಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಕಲ್ ಬಳಕೆ ಆರೋಗ್ಯ ವೃದ್ದಿಗೆ ಪೂರಕ: ವಿಜಯಾ ಕೋರಿಶೆಟ್ಟಿ
ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ