ರಾಮನಗರ: ಜಿದ್ದಾಜಿದ್ದಿನ ಅಖಾಡವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 3, ಬಿಜೆಪಿ - ಜೆಡಿಎಸ್ ಮೈತ್ರಿಕೂಟಕ್ಕೆ 4 ವಿಧಾನಸಭಾ ಕ್ಷೇತ್ರಗಳು ಕಠಿಣ ಸವಾಲಿನಿಂದ ಕೂಡಿವೆ.
ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ , ಚನ್ನಪಟ್ಟಣ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಕೂಟಕ್ಕೆ ಕನಕಪುರ, ಆನೇಕಲ್ , ಮಾಗಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಬೇಟೆಯಾಡಲು ಸಾಕಷ್ಟು ಬೆವರು ಸುರಿಸಬೇಕಿದೆ. ಉಳಿದಂತೆ ಕುಣಿಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸಮಬಲದ ಹೋರಾಟ ನಡೆದಿದೆ.
ಈ ಕ್ಷೇತ್ರದ ಫಲಿತಾಂಶವನ್ನು ಬೆಂಗಳೂರು ದಕ್ಷಿಣ ಮತ್ತು ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರಗಳು ನಿರ್ಣಯಿಸಿದರು ಅಚ್ಚರಿ ಇಲ್ಲ. ಇದಕ್ಕೆ ಕಾರಣ ಏನೆಂದರೆ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರಲ್ಲಿ ಶೇಕಡ 44ರಷ್ಟು ಜನರು ಈ ಎರಡೂ ಕ್ಷೇತ್ರಗಳಲ್ಲಿಯೇ ಇದ್ದಾರೆ.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಮತದಾರ ಸಂಖ್ಯೆ 27.63 ಲಕ್ಷ ಇದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವೊಂದರಲ್ಲೇ 7.33 ಲಕ್ಷ ಮತ್ತು ಆರ್‌ಆರ್ ನಗರ ಕ್ಷೇತ್ರದಲ್ಲಿ 4.98 ಲಕ್ಷ ಸೇರಿ ಒಟ್ಟು 12.31 ಲಕ್ಷ ಮತದಾರರು ಇದ್ದಾರೆ. ಈ ಎರಡೂ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿವೆ.
ಈ ಎಲ್ಲ ಕಾರಣದಿಂದಾಗಿಯೇ ಡಿಕೆ ಸಹೋದರರು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಸರತ್ತು ಮುಂದುವರೆಸಿದ್ದಾರೆ. ವಿಪಕ್ಷ ಮುಖಂಡರಿಗೆ ಗಾಳ ಹಾಕುವ ಜೊತೆಗೆ ಸ್ಥಳೀಯ ನಾಯಕರಿಗೆ ಹೆಚ್ಚಿನ ಮತ ಕೊಡಿಸಬೇಕೆಂಬ ಟಾಸ್ಕ್ ನೀಡಿದ್ದಾರೆ.
ಅದರಲ್ಲೂ ಡಿ.ಕೆ.ಶಿವಕುಮಾರ್ ರವರು ಕನಕಪುರ ಕ್ಷೇತ್ರದಲ್ಲಿ 1.20 ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದವರು. ಡಿ.ಕೆ.ಶಿವಕುಮಾರ್ ಭದ್ರಕೋಟೆಯಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿ, ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ಗೆ ತವರು ನೆಲದಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡಲು ಮೈತ್ರಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ.
ತಮ್ಮದೇ ಕ್ಷೇತ್ರಗಳಲ್ಲಿ ಮತಗಳು ಬಂದೇ ಬರಲಿದೆ ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳಲ್ಲಿ ನಡೆದಿವೆ. ಆದರೂ ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ಮಿತ್ರ ಪಕ್ಷಗಳು ತಮ್ಮ ಶಾಸಕರಿಲ್ಲದ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಯಾರು ಯಾವ ಪಕ್ಷದ ಭದ್ರಕೋಟೆಯನ್ನು ಭೇದಿಸುವರೇ ಕಾದು ನೋಡಬೇಕಿದೆ.ಬಾಕ್ಸ್ ................
ಅಭ್ಯರ್ಥಿಗಳ ವರ್ಚಸ್ಸು, ಅಭಿವೃದ್ಧಿಯ ಮಾನದಂಡಗಳ ಹೊರತಾಗಿ ವಿವಿಧ ಜಾತಿ ಸಮುದಾಯಗಳ ಒಲವು ಯಾರ ಕಡೆಗೆ ಎಷ್ಟಿವೆ ಎಂಬುದು ನಿರ್ಣಾಯಕವಾಗಲಿದೆ. ಮತದಾರರ ಒಲವು ಯಾವ ಕಡೆಗಿದೆ ಎಂಬ ಸುಳಿವನ್ನು ಬಿಟ್ಟುಕೊಡದೆ ನಿಗೂಢತೆಯನ್ನು ಕಾಯ್ದುಕೊಂಡಿದೆ.
ವಿಧಾನಸಭಾ ಕ್ಷೇತ್ರವಾರು ಪಕ್ಷಗಳ ಬಲಾಬಲ
ಹೆಸರ.
ಪಕ್ಷಕುಣಿಗಲ್.
ಡಾ.ಎಚ್.ಡಿ.ರಂಗನಾಥ್.ಕಾಂಗ್ರೆಸ್
ಆನೇಕಲ್.ಬಿ.ಶಿವಣ್.
ಕಾಂಗ್ರೆಸ್ಮಾಗಡ.
ಎಚ್.ಸಿ.ಬಾಲಕೃಷ್.ಕಾಂಗ್ರೆಸ್
ರಾಮನಗ.ಇಕ್ಬಾಲ್ ಹುಸೇನ್.
ಕಾಂಗ್ರೆಸ್ಕನಕಪು.
ಡಿ.ಕೆ.ಶಿವಕುಮಾರ್.ಕಾಂಗ್ರೆಸ್
ಚನ್ನಪಟ್ಟ.ಎಚ್.ಡಿ.ಕುಮಾರಸ್ವಾಮ.
ಜೆಡಿಎಸ್ಆರ್ ಆರ್ ನಗ.
ಮುನಿರತ್.ಬಿಜೆಪಿ
ಬೆಂಗಳೂರು ದಕ್ಷಿ.ಎಂ.ಕೃಷ್ಣಪ್.
ಬಿಜೆಪಿ26ಕೆಆರ್ ಎಂಎನ್ 3,4.ಜೆಪಿಜಿ3.ಡಿ.ಕೆ.ಸುರೇಶ್ 4.ಡಾ.ಸಿ.ಎನ್ .ಮಂಜುನಾಥ್