ಗೋಮಾಂಸ ಸಾಗಾಟ ಇಬ್ಬರ ವಶ

KannadaprabhaNewsNetwork |  
Published : Jun 10, 2025, 12:57 AM IST

ಸಾರಾಂಶ

ಸಮೀಪದ ಕೂಡ್ಲಿ ಗ್ರಾಮದಿಂದ ಹೊಳೆಹೊನ್ನೂರಿಗೆ ಬೈಕ್‌ನಲ್ಲಿ ಗೋಮಾಂಸ ಸಾಗಾಟ ಮಾಡುವಾಗ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ಮತ್ತವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹೊಳೆಹೊನ್ನೂರು: ಸಮೀಪದ ಕೂಡ್ಲಿ ಗ್ರಾಮದಿಂದ ಹೊಳೆಹೊನ್ನೂರಿಗೆ ಬೈಕ್‌ನಲ್ಲಿ ಗೋಮಾಂಸ ಸಾಗಾಟ ಮಾಡುವಾಗ ಹೊಳೆಹೊನ್ನೂರು ಪೊಲೀಸ್ ಠಾಣೆ ಪಿಐ ಲಕ್ಷ್ಮಿಪತಿ ಮತ್ತವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶೋಯೆಬ್‌ ಹಾಗೂ ಕಸಬ್ ಎಂಬುವರು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂದೂ ಸಂಘಟನೆಯವರು ಅನುಮಾನ ಬಂದು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿಯ ಆಧಾರದ ಮೇಲೆ ಆರ್.ಎಲ್.ಲಕ್ಷ್ಮೀಪತಿ ಹಾಗೂ ಪಿಎಸ್ಐ ಕೆ.ರಮೇಶ ಅವರ ತಂಡ ದ್ವಿಚಕ್ರ ವಾಹನ ಸವಾರರನ್ನು ತಪಾಸಣೆಗೊಳಪಡಿಸಿದೆ.

ತಪಾಸಣೆಯ ವೇಳೆ 7 ಕೆಜಿ ಗೋಮಾಂಸ ಪತ್ತೆಯಾಗಿದೆ ಎಲ್ಲಿಂದ ತಂದಿರೋದು ಎಂದು ಪರಿಶೀಲಿಸಿದ ಪಿಐ ಲಕ್ಷ್ಮಿಪತಿ ತಂಡಕ್ಕೆ ಮತ್ತೊಂದು ಮಾಹಿತಿ ದೊರೆತಿದೆ. ಮಾಂಸವನ್ನು ಸೈಫ್ ಅಲಿ ಖಾನ್ ಮನೆಯಿಂದ ಮಾಂಸ ಖರೀದಿಸಲಾಗಿದೆ ಎಂದು ಶೋಯೆಬ್ ತಪಾಸಣೆ ವೇಳೆ ಪೊಲೀಸರಿಗೆ ಬಾಯಿಬಿಟ್ಟಿದ್ದಾನೆ.

ಸೈಫ್ ಅಲಿ ಖಾನ್ ಮನೆ ಮೇಲೂ ಪಿಎಸ್ಐ ರಮೇಶ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ 30 ಕೆಜಿಗೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ. ಶೋಯೆಬ್ ಹಾಗೂ ಕಸಬ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ