Tragedy... Two workers die after falling into a water tank
ತರೀಕೆರೆ: ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಅಡಿಕೆ ಸುಲಿವ ಕೆಲಸಕ್ಕೆ ತೆರಳಿದ್ದ ಇಬ್ಬರು ಕಾರ್ಮಿಕರು ಅಡಿಕೆ ತೋಟದ ಮನೆಯಲ್ಲಿದ್ದ ಸಿಮೆಂಟ್ ತೊಟ್ಟಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಅಮೃತಾಪುರ ಗ್ರಾಮದ ಆನಂದ ರಾವ್ (48) ಹಾಗೂ ಜುಂಜಾ ನಾಯ್ಕ್ (65) ಎಂದು ಗುರುತಿಸಲಾಗಿದೆ. ಗ್ರಾಮದ ಎ.ಆರ್ ಮುರುಗೇಶ್ವರಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆನಂದ ರಾವ್ ಹಾಗೂ ಅವರ ಪತ್ನಿ ಕಳೆದ ಎರಡು ವರ್ಷಗಳಿಂದ ಮುರುಗೇಶ್ವರಪ್ಪ ಅವರ ತೋಟದಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ 7 ಗಂಟೆಗೆ ದಂಪತಿ ಕೆಲಸಕ್ಕೆ ತೆರಳಿದ್ದು, ಅದೇ ಗ್ರಾಮದ ಜುಂಜಾ ನಾಯ್ಕ್ ಕೂಡ ಕೆಲಸಕ್ಕೆ ಬಂದಿದ್ದರು. ಅಡಿಕೆ ಸುಲಿಯುವ ಯಂತ್ರದ ಪಕ್ಕದಲ್ಲಿದ್ದ ಸಿಮೆಂಟ್ ತೊಟ್ಟಿಯಲ್ಲಿ ಅಡಿಕೆ ಚರಟ ಹಾಗೂ ಕಸ ಸಂಗ್ರಹವಾಗುತ್ತಿತ್ತು. ಎರಡು-ಮೂರು ದಿನಕ್ಕೊಮ್ಮೆ ಕಾರ್ಮಿಕರು ತೊಟ್ಟಿಗೆ ಇಳಿದು ಚರಟ ಮತ್ತು ಕಸವನ್ನು ಸ್ವಚ್ಛಗೊಳಿಸುತ್ತಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.