ಕನ್ನಡಪ್ರಭ ವಾರ್ತೆ ಮಂಡ್ಯ
- ಹೀಗೆ ಶುಕ್ರವಾರ ಮಂಡ್ಯ ರೈಲು ನಿಲ್ದಾಣದಲ್ಲಿ ಬೆಂಗಳೂರಿನ ರೈಲ್ವೆ ಸುರಕ್ಷತಾ ಪಡೆ ಪ್ರಯಾಣಿಕರಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಫೋರ್ಸ್‌ನ ಎಎಸ್‌ಐ ಬಸವರಾಜ್ ಹೊಟ್ಟಾರ್ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ರೈಲ್ವೆ ಪೊಲೀಸರು ನಿಲ್ದಾಣದ ಫ್ಲಾಟ್‌ಫಾಂರಂಗಿಳಿದು ಪ್ರಯಾಣಿಕರಿಗೆ ಅಪಘಾತ ಹಾಗೂ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.
ಮಹಿಳೆಯರು ಕಿಟಕಿ ಪಕ್ಕ ಕುಳಿತ ವೇಳೆ ತಮ್ಮ ಚಿನ್ನಾಭರಣ ಸೇರಿ ಮೊಬೈಲ್ ಮೇಲೆ ಎಚ್ಚರಿಕೆ ವಹಿಸಬೇಕು. ಕಳ್ಳರು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಹಾಗಾಗಿ ಜಾಗೃತರಾಗಿರುವಂತೆ ಸಲಹೆ ನೀಡಿದರು. ಪ್ರಯಾಣಿಕರು ಸುರಕ್ಷಿತ ಪ್ರಯಾಣಕ್ಕಾಗಿ ರೈಲ್ವೆ ನಿಯಮಗಳನ್ನು ಪಾಲಿಸಬೇಕು ಮತ್ತು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸೂಚನೆ ನೀಡಿದರು.ರೈಲಿನಲ್ಲಿ ಪ್ರಯಾಣಿಸುವಾಗ ಅಪರಿಚಿತರು ನೀಡುವ ಬಿಸ್ಕತ್ತು, ಚಾಕೋಲೇಟ್ ಅಥವಾ ಪಾನೀಯಗಳನ್ನು ಎಂದಿಗೂ ಸೇವಿಸಬೇಡಿ. ಇವುಗಳಲ್ಲಿ ಮಾದಕ ದ್ರವ್ಯ ಬೆರೆಸಿ ನಿಮ್ಮನ್ನು ಪ್ರಜ್ಞೆ ತಪ್ಪಿಸಿ ಲೂಟಿ ಮಾಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರತೀಯ ರೈಲ್ವೆಯು ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿ ತಡೆಯಲು ಕವಚ್ ಎಂಬ ತಂತ್ರಜ್ಞಾನವನ್ನು ಜಾರಿಗೆ ತರುತ್ತಿದೆ. ಇದು ತಾಂತ್ರಿಕವಾಗಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈಗ ಬಹುತೇಕ ರೈಲು ನಿಲ್ದಾಣಗಳು ಮತ್ತು ಪ್ರಮುಖ ರೈಲುಗಳ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸದಾ ನಿಗಾ ಇಡಲಾಗುತ್ತದೆ. ಆದರೂ ಸಹ ಪ್ರಯಾಣಿಕರು ಜಾಗರೂಕರಾಗಿದ್ದರೆ ಅಪರಾಧಗಳನ್ನು ಶೂನ್ಯಕ್ಕೆ ಇಳಿಸಬಹುದು ಎಂದು ತಿಳಿಸಿದರು.