ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಅವರು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಹಸರಿರೆಲೆ ಗೊಬ್ಬರ, ಹಿಂಡಿಗಳು ಮತ್ತು ಎರೆಗೊಬ್ಬರಗಳನ್ನು ಬಳಕೆ ಮಾಡಲು, ಸಾವಯವ ಕೃಷಿಯಲ್ಲಿ ತೋಟಗಾತಿಕೆ ಬೆಳೆಗಳನ್ನು ಬೆಳೆಯಲು ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಹಾಗೂ ಪೋಷಕಾಂಶಗಳನ್ನು ಒದಗಿಸುವುದು ಪ್ರಮುಖವಾಗಿರುತ್ತದೆ. ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು ಇಳುವರಿ ಹೆಚ್ಚಾಗುತ್ತದೆ ಎಂದರು.
ಶುಂಠಿ ಬೆಳೆಯ ಉತ್ಪಾದನಾ ತಾಂತ್ರಿಕತೆ, ಬೀಜೋಪಚಾರವನ್ನು ಕೈಗೊಳ್ಳುವುದು ಪ್ರಮುಖ ಕ್ರಮವಾಗಿರುತ್ತದೆ. ಶುಂಠಿ ಸ್ಪೆಷಲ್ ಅನ್ನು ಬಳಕೆ ಮಾಡುವ ವಿಧಾನಗಳ ಬಗ್ಗೆ ತಿಳಿಸಿದರು. ತೋಟಗಾರಿಕೆ ಬೆಳೆಗಳಲ್ಲಿ ತೆಂಗು ಪ್ರಮುಖವಾದ ಮತ್ತು ಧೀರ್ಘಕಾಲದ ಬೆಳೆಯಾಗಿದ್ದು, ರೈತರಿಗೆ ವರದಾನವಾಗಿದೆ. ರೈತರು ತೆಂಗು ಮತ್ತು ಶುಂಠಿ ಬೆಳೆಗಳನ್ನು ಬೆಳೆಯುವ ಮೊದಲು ಬೇಕಾದ ಉತ್ತಮ ತಳಿಗಳ ಆಯ್ಕೆ, ಪೋಷಕಾಂಶಗಳ ಬಳಕೆ ಮತ್ತು ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಗೊಬ್ಬಗಳ ಬಳಕೆ, ಲಘು ಪೋಷಕಾಂಶಗಳು ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮಾಡಬೇಕು ಎಂದು ಅವರು ತಿಳಿಸಿದರು.ಅತೀಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡುವುದರಿಂದ ಸೂಕ್ಷ್ಮಾಣು ಜೀವಿಗಳು ನಾಸವಾಗಿ ಮಣ್ಣಿನ ಫಲವತ್ತತೆ ಕಡೆಮೆ ಮಾಯಾಗುತ್ತದೆ. ಆದ್ದರಿಂದ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ಕೃಷಿ ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್. ಮೌಲ್ಯಾ ಅವರು, ತೆಂಗಿನ ಬೆಳೆಯಲ್ಲಿ ಕಂಡು ಬರುವ ರುಗೋಸಾ ಬಿಳಿನೊಣ, ಗರಿತಿನ್ನುವ ಹುಳು, ಕೆಂಪು ಮೂತಿ ಹುಳು, ಹಿಟ್ಟು ತಿಗಣೆ, ಗೆದ್ದಲು, ಸುಳಿಕೊರೆಯುವ ರೈನೋಸರಸ್ ದುಂಬಿ ಕೀಟಗಳು ಮತ್ತು ಸುಳಿಕೊಳೆ ರೋಗ, ಕಾಂಡ ಸೋರುವ ರೋಗ, ಅಣಬೆ ರೋಗ ಮತ್ತು ಎಲೆ ಚುಕ್ಕೆ ರೋಗಗಳು ಹಾಗೂ ಅವುಗಳ ನಿರ್ವಹಣಾ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಹಾಗೇಯೇ ಶುಂಠಿ ಬೆಳೆಯಲ್ಲಿ ಕಂಡು ಬರುವ ಕಾಂಡ ಕೊರೆಯುವ ಹುಳು, ಗೆಡ್ಡೆಕೊಳೆ ರೋಗ, ಎಲೆ ಚುಕ್ಕೆ ರೋಗ ಮತ್ತು ದುಂಡಣು ಸೊರಗು ರೋಗಗಳನ್ನು ಹತೋಟಿ ಮಾಡುವ ಕ್ರಮಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಒಟ್ಟು 25 ಜನ ರೈತರು ಭಾಗವಹಿಸಿದ್ದರು. ರೈತ ಮುಖಂಡ ರಾಜೇಶ್, ಕ್ಷೇತ್ರ ಸಹಾಯಕ ಧರಣೇಶ ಇದ್ದರು.