ಆಲಸ್ಯತನ ತೋರುವ ಅಧಿಕಾರಿಗಳು ವರ್ಗಾಯಿಸಿಕೊಂಡು ತೊಲಗಿ

KannadaprabhaNewsNetwork |  
Published : Jun 24, 2025, 12:32 AM IST
ತಾಲೂಕಿನ ಐನಾಪುರ ಪಟ್ಟಣ ಇಂದಿರಾ ನಗರದ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಮಂಗಸೂಳಿಯಲ್ಲಿ ವಿವಿಧ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಸರ್ಕಾರದಿಂದ ಕಾಡಿ ಬೇಡಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತಂದರೇ ಆಯಾ ಇಲಾಖೆಯ ಅಧಿಕಾರಿಗಳಿಂದ ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸದೇ ಆಲಸ್ಯತನ ತೋರುವ ಅಧಿಕಾರಿಗಳು ನನ್ನ ಕ್ಷೇತ್ರದಲ್ಲಿ ಬೇಡ. ನೀವು ಬೇರೆಡೆಗೆ ವರ್ಗಾಯಿಸಿಕೊಂಡು ತೊಲಗಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಸರ್ಕಾರದಿಂದ ಕಾಡಿ ಬೇಡಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತಂದರೇ ಆಯಾ ಇಲಾಖೆಯ ಅಧಿಕಾರಿಗಳಿಂದ ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸದೇ ಆಲಸ್ಯತನ ತೋರುವ ಅಧಿಕಾರಿಗಳು ನನ್ನ ಕ್ಷೇತ್ರದಲ್ಲಿ ಬೇಡ. ನೀವು ಬೇರೆಡೆಗೆ ವರ್ಗಾಯಿಸಿಕೊಂಡು ತೊಲಗಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ತಾಲೂಕಿನ ಐನಾಪುರ ಪಟ್ಟಣ ಇಂದಿರಾ ನಗರದ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಮಂಗಸೂಳಿಯಲ್ಲಿ ವಿವಿಧ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಾವು ಜನತೆಗೆ ನೂರಾರು ಭರವಸೆಗಳನ್ನು ಕೊಟ್ಟು ಆಯ್ಕೆಯಾಗಿ ಬಂದಿದ್ದೇವೆ. ಅವುಗಳನ್ನು ಈಡೇರಿಸುವುದುದು ನಮ್ಮ ಕರ್ತವ್ಯ. ಸರ್ಕಾರದಿಂದ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಮನವಿ ಮಾಡಿಕೊಂಡು ಯೋಜನೆಗಳನ್ನು ತಂದರೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮನಬಂದಂತೆ ವರ್ತಿಸಿದರೇ ಸಾರ್ವಜನಿಕರಿಗೆ ನಾನೇನು ಉತ್ತರ ಕೊಡಲಿ? ಅದಕ್ಕಾಗಿ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿ ಇಲ್ಲದಿದ್ದರೇ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು.ಯಾವುದೇ ಒಂದು ಕಾಮಗಾರಿಗೆ ಒಂದು ನಿಗದಿತ ಅವಧಿ ಇರುತ್ತದೆ. ಆ ಅವಧಿಯಲ್ಲಿಯಲ್ಲಿ ಗುತ್ತಿಗೆದಾರರು ಕೆಲಸ ಮಾಡಬೇಕು. ಅದನ್ನು ಅಧಿಕಾರಿಗಳು ಮುಂದೆ ನಿಂತು ಮಾಡಿಸಿಕೊಳ್ಳಬೇಕು. ಅದನ್ನು ಬಿಟ್ಟು ವರ್ಷಗಟ್ಟಲೇ ಕಾಮಗಾರಿ ಮಾಡದಿದ್ದರೆ ಜನ ಏನಂತೆ ಗೊತ್ತಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಸದ್ಯ ಮಳೆಗಾಲ ಪ್ರಾರಂಭವಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ತ್ವರಿತವಾಗಿ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.ಐನಾಪುರ ಪಟ್ಟಣ ಪಂಚಾಯತಿ ಸದಸ್ಯ ಪ್ರವೀಣ(ಪುಟ್ಟು) ಗಾಣಿಗೇರ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಅಧಿಕಾರಿಗಳಾದ ಜಯಾನಂದ ಹಿರೇಮಠ, ವೀರಣ್ಣ ವಾಲಿ, ರವೀಂದ್ರ ಮುರಗಾಲಿ, ಮಲ್ಲಿಕಾರ್ಜುನ ಮಗದುಮ್, ಪಟ್ಟಣ ಪಂಚಾಯತಿ ಸದಸ್ಯರಾದ ಅರುಣ ಗಾಣಿಗೇರ, ಸಂಜಯ ಭಿರಡಿ, ಮುಖಂಡರಾದ ಚಮನರಾವ್ ಪಾಟೀಲ, ರಾಜುಗೌಡ ಪಾಟೀಲ, ಶಂಕರ ವಾಘಮೋಡೆ, ವಸಂತ ಖೋತ, ಡಾ.ಅರವಿಂದರಾವ್ ಕಾರ್ಚಿ, ಸುರೇಶ ಅಡಿಸೇರಿ, ನವೀಣ ಗಾಣಿಗೇರ, ದಾದಾ ಜಂತೆನ್ನವರ, ಸಿಕಂದರ ನದಾಫ, ರಾಜು ಅವಟಿ, ಉಮಾಜಿ ನಡೋಣಿ, ಅಮಗೌಂಡ ಒಡಿಯರ, ಬಾಹುಬಲಿ ಕುಸನಾಳೆ, ವಿಶ್ವನಾಥ ನಾಮದಾರ, ಸುನೀಲ ಅವಟಿ, ಗುತ್ತಿಗೆದಾರರಾದ ತಿಪ್ಪಣ್ಣ ಬಜಂತ್ರಿ, ಬಸವರಾಜ ಮಗದುಮ್, ರಾಜು ಮರಡಿ, ಅನಿಲಕುಮಾರ ಸತ್ತಿ, ಶಂಕರ ಮದನ್ನವರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ