ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶ-ವಿದೇಶಗಳ ಪ್ರವಾಸಿ ತಾಣಗಳು, ಧಾರ್ಮಿಕ ತಾಣಗಳ ಪ್ಯಾಕೇಜ್ ಟೂರ್ ಜೊತೆಗೆ ಪ್ರವಾಸಿಗರ ‘ಇಚ್ಛೆಯ ತಾಣ’ಗಳಿಗೆ ಕರೆದೊಯ್ಯುವ ಅವಕಾಶಗಳನ್ನು ನೀಡಲಿದೆ.
ಒತ್ತಡವಿಲ್ಲದೇ ಸಂತೋಷದಿಂದ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಮನೆಯಿಂದಲೇ ಪ್ರವಾಸಿಗರನ್ನು ಪಿಕಪ್ ಮಾಡಲಾಗುತ್ತದೆ. ಹಿರಿಯ ನಾಗರಿಕರು ಸೇರಿದಂತೆ ಅಗತ್ಯ ಇದೆ ಎನ್ನುವವರಿಗೆ ಪ್ರವಾಸದ ಉದ್ದಕ್ಕೂ ಗೈಡ್ ಮಾದರಿಯಲ್ಲಿ ಒಬ್ಬ ವ್ಯಕ್ತಿಯನ್ನು ನಿಯೋಜಿಸಲಾಗುತ್ತದೆ.ಇಎಂಐ ಅವಕಾಶ, ಲಕ್ಕಿ ಡ್ರಾ:
ಸರ್ಕಾರಿ ನೌಕರರಿಗಾಗಿ ವಿಶೇಷ ಇಎಂಐ ಯೋಜನೆಯನ್ನು ರೂಪಿಸಲಾಗುತ್ತಿದೆ. ಪ್ರವಾಸ ಮೊತ್ತದಲ್ಲಿ ಶೇ.25ರಷ್ಟು ಮಾತ್ರ ಮುಂಗಡವಾಗಿ ಕಟ್ಟಿಸಿಕೊಂಡು ಉಳಿದ ಹಣವನ್ನು ಪ್ರವಾಸದ ಬಳಿಕ ಇಎಂಐ ಮೂಲಕ ಪಾವತಿಸಬಹುದು. ಪ್ರವಾಸದ ವೇಳೆ ಹಲವರಿಗೆ ಊಟದ ಸಮಸ್ಯೆ ಕಾಡುತ್ತದೆ. ಅವರಿಗಾಗಿ ಮನೆಯಲ್ಲಿ ಮಾಡಿಕೊಳ್ಳುವಂತೆ ಚಪಾತಿ, ಮುದ್ದೆ, ರೊಟ್ಟಿ ಊಟವನ್ನು ಒದಗಿಸುವ ಯೋಜನೆಯನ್ನು ಕೂಡ ರೂಪಿಸಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಈ ಯೋಜನೆ ಅನುಷ್ಠಾನ ವಿಳಂಬವಾಗಿದ್ದು, ಜೂನ್ ಎರಡನೇ ವಾರದಲ್ಲಿ ಪ್ರವಾಸ ಬುಕ್ಕಿಂಗ್ ಆರಂಭಿಸುವ ಗುರಿ ಇದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ರವಿಕುಮಾರ್ ತಿಳಿಸಿದರು.
- ಅಯೋಧ್ಯೆ, ಕಾಶಿ ಸೇರಿದಂತೆ ಕಾಶ್ಮೀರದಿಂದ- ಕನ್ಯಾಕುಮಾರಿವರೆಗಿನ ಪ್ರವಾಸಿ ತಾಣಗಳಿಗೆ ಟ್ರಿಪ್
- ಪ್ರವಾಸಿಗರನ್ನು ಮನೆಯಿಂದ ಪಿಕಪ್ ಮತ್ತು ಡ್ರಾಪ್
- ಹಿರಿಯ ನಾಗರಿಕರು ಸೇರಿದಂತೆ ಅಗತ್ಯ ಇರುವವರಿಗೆ ಪ್ರವಾಸದ ಉದ್ದಕ್ಕೂ ‘ಗೈಡ್’ ನೆರವು