ಕನ್ನಡಪ್ರಭ ವಾರ್ತೆ ಪಾಂಡವಪುರ
ಮರ ಬಿದ್ದ ರಭಸಕ್ಕೆ ಗೋಪುರ ಮೇಲಿದ್ದ ಕಳಸ, ವಿಗ್ರಹಗಳು ಛಿದ್ರವಾಗಿವೆ. ಗೋಪುರ ಬಿರುಕು ಬಿಟ್ಟಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಶ್ರೀಚನ್ನಿಗರಾಯಸ್ವಾಮಿ ಪುರಾತನ ದೇವಾಲಯ. ಕೆಲ ವರ್ಷಗಳ ಹಿಂದೆ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿತ್ತು. ಈಗ ಮರ ಬಿದ್ದು ಮತ್ತೆ ದೇವಸ್ಥಾನದ ಗೋಪುರ ಬಿರುಕು ಬಿಟ್ಟಿರುವುದು ದುರಂತದ ಸಂಗತಿಯಾಗಿದೆ.
ಗ್ರಾಮದ ದೇವಸ್ಥಾನ ಕಮಿಟಿ ಸದಸ್ಯರು, ಮುಖಂಡರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಗ್ರಾಮ ಆಡಳಿತಾಧಿಕಾರಿ ಗೋಳಪ್ಪ ಅವರು ಸ್ಥಳಕ್ಕೆ ಪರಿಶೀಲನೆ ನಡೆಸಿದರು. ಘಟನೆ ವಿವರವನ್ನು ವರದಿ ಮೂಲಕ ತಹಸೀಲ್ದಾರ್ ಅವರಿಗೆ ಸಲ್ಲಿಸಲಾಗುವುದು. ಮುಜರಾಯಿ ಇಲಾಖೆಯಿಂದ ದೇವಸ್ಥಾನದ ರಿಪೇರಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡುವಂತೆ ಕಮಿಟಿ ಸದಸ್ಯರು, ಯಜಮಾನರು ಗ್ರಾಮ ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದರು.ಸಿಲಿಂಡರ್ ಸ್ಫೋಟಕ್ಕೆ ಮನೆ ಭಸ್ಮ
ಸಿಲಿಂಡರ್ ಸ್ಫೋಟದಿಂದ ವಾಸದ ಮನೆಯೇ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಕೊಡಿಯಾಲ ಗ್ರಾಮದ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ಶಮನ ಕಾರ್ಯಾಚರಣೆ ಮಾಡಲಾಗಿದೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.