ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೇರ್ಗಳ್ಳಿಯ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀಬಿರ್ಸಾ ಮುಂಡಾ ಅವರ 150ನೇ ಜಯಂತಿ ಪ್ರಯುಕ್ತ ಜನಜಾತೀಯ ಗೌರವ ದಿವಸ ಸಮಾರಂಭದಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರಿಗಾಗಿ ಶ್ರೀಬಿರ್ಸಾ ಮುಂಡ ಅವರ ಹೆಸರಿನಲ್ಲಿ ಇಂದು ಸುಮಾರು 6.600 ಕೋಟಿ ರು.ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ, ಶಿಕ್ಷಣಕ್ಕೆ ಏಕಲವ್ಯ ರೆಸಿಡೆನ್ಸಿಯಲ್ ಶಾಲೆಗಳ ನಿರ್ಮಾಣ, ಪ್ರತಿ ಗ್ರಾಮಗಳಿಗೆ ಪಕ್ಕಾ ಮನೆ, ಸುಸರ್ಜಿತವಾದ ರಸ್ತೆಗಳ ನಿರ್ಮಾಣ, ಟೆಲಿಕಾಂ ಕನೆಕ್ಷನ್, ಸೋಲಾರ್ ಮೂಲಕ ವಿದ್ಯುತ್ ಸಂಪರ್ಕ, ಆಹಾರದಲ್ಲಿ ಇರುವ ಕೊರತೆ ನೀಗಿಸಲು ಪೌಷ್ಟಿಕ ಆಹಾರದ ಪೂರೈಕೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಮಗಳನ್ನು ಒಳಗೊಂಡಿರುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬುಡಕಟ್ಟು ಜನಾಂಗದವರ ಬಗ್ಗೆ, ಅವರು ದೇಶಕ್ಕಾಗಿ ನೀಡಿರುವ ಕೊಡುಗೆಗಳ ಬಗ್ಗೆ ತಿಳಿಸಲು ಪ್ರದರ್ಶನಾಲಯಗಳನ್ನು ಸ್ಥಾಪಿಸಿದ್ದು, ಯುವ ಜನರು ವೀಕ್ಷಿಸಿ ಅವರ ಕೊಡುಗೆಯನ್ನು ಅರಿತುಕೊಳ್ಳಬೇಕು. ಬುಡಕಟ್ಟು ಜನಾಂಗದವರನ್ನು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಿಸಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರವು ಅಗತ್ಯ ಎಂದರು.ಬಿರ್ಸಾ ಮುಂಡ ಅವರ ದಿನವನ್ನು ಜನಜಾತೀಯ ಗೌರವ ದಿನವನ್ನಾಗಿ ಆಚರಣೆ ಮಾಡಲು 2016ರ ಸ್ವತಂತ್ರ ದಿನಾಚರಣೆಯ ವೇಳೆ ತೀರ್ಮಾನಿಸಲಾಯಿತು. 1885ರಲ್ಲಿ ಬಿಹಾರದ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಬಿರ್ಸಾ ಮುಂಡ ಅವರು, ದೇಶದಲ್ಲಿ ಬ್ರಿಟಿಷರು ಆಡಳಿತ ಬಂದಾಗ ಅವರ ಕ್ರೂರ ಆಡಳಿತದ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಡಕ್ಕೆ ಹೋರಾಟ ಮಾಡಿದವರಲ್ಲಿ ಒಬ್ಬರಾಗಿದ್ದಾರೆ. ಬಿಹಾರದಲ್ಲಿ ಬ್ರಿಟಿಷ್ ದೌರ್ಜನ್ಯದ ವಿರುದ್ಧ ಎಲ್ಲರನ್ನು ಒಟ್ಟುಗೂಡಿಸಿ ಹೋರಾಡಿದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಹಾಗಾಗಿ ಇಂದು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಪ್ರಸ್ತುತ 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳು ಏಕಲವ್ಯ ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿದೆ. ಅದನ್ನು ಬಳಸಿಕೊಂಡು ತಮ್ಮನ್ನು ತಾವು ನಂಬಿ ಛಲಬಿಡದೆ ಮುಂದೆ ಬರಬೇಕು ಎಂದರು.
ಅಧಿಕಾರಿಗಳು ವಾರದಲ್ಲಿ ಒಂದು ಬಾರಿಯಾದರು ಬುಡಕಟ್ಟು ಜನರಿರುವ ಸ್ಥಳಗಳಿಗೆ ತೆರಳಿ ಅವರಿಗೆ ತರಬೇತಿಗಳನ್ನು ನೀಡಬೇಕು. ಇಲ್ಲಿನ ಆಗು-ಹೋಗುಗಳ ಬಗ್ಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಅವರನ್ನು ಮುಖ್ಯ ವಾಹಿನಿಗೆ ತರವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒರಿಸ್ಸಾ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಕೀಟನಾಶಕ ಬೆರೆಸದೆ ಹಲಸಿನ ಹಣ್ಣು, ಪೈನಾಪಲ್ ಬೆಳೆಯುವ ಕಾರಣ ಈ ಹಣ್ಣುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಬರಲಿದೆ. ಆರೋಗ್ಯಕ್ಕೆ ಒತ್ತು ನೀಡಿರುವ ಕಾರಣ ಸಿಕೆಲ್ ಸೆಲ್ ಅನಿಮೀಯಾ ಪತ್ತೆ ಮಾಡಲು ಪ್ರತಿಯೊಬ್ಬರ ತಪಾಸಣೆ ಮಾಡಿ ಆರೋಗ್ಯ ಸಮಸ್ಯೆ ಪತ್ತೆ ಹಚ್ಚುವ ಕೆಲಸ ಆರಂಭಿಸಲಾಗಿದೆ. ಸ್ವ- ಉದ್ಯೋಗಕ್ಕೆ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಸಾಲ ಕೊಡಿಸುವ ಜೊತೆಗೆ ಮಾರುಕಟ್ಟೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಚ್.ಡಿ.ಕೋಟೆ ತಾಲೂಕು ಸಿತಾರ, ನೇತ್ರಾವತಿ, ವರ್ಷ ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿರಿಯಾಪಟ್ಟಣ ತಾಲೂಕಿನ ಆಲನಕಟ್ಟೆ ಹಾಡಿಯ ಗೀತಾ, ಸಿದ್ದ ಅವರಿಗೆ ಮನೆ ಬೀಗದ ಕೀ ವಿತರಣೆ, ಜನ್ಧನ್ ಯೋಜನೆಯಡಿ ಬ್ಯಾಂಕ್ ಖಾತೆಯ ಪಾಸ್ ಪುಸ್ತಕವನ್ನು ವೀರಯ್ಯ, ನಾಗಯ್ಯ, ಕರಿಯಯ್ಯ ಅವರಿಗೆ ವಿತರಿಸಲಾಯಿತು.