ಕನ್ನಡಪ್ರಭ ವಾರ್ತೆ ಹರಿಹರ
ಪ್ರಸ್ತುತ ಪ್ರಶಸ್ತಿಗೆ ಭಾಜನರಾಗುವ ಮೂಲಕ ರಾಜ್ಯ ಮಟ್ಟದಲ್ಲಿ ದಾವಣಗೆರೆ ಜಿಲ್ಲೆಗೆ ಏಕೈಕ ಗೌರವ ಕೊಡಿಸಿದ, ರಾಜ್ಯದಲ್ಲಿ ಜಾನಪದ ಅಕಾಡಮಿ ನೀಡುವ 2025ನೇ ಸಾಲಿನ ಕೆಲವೇ ಕೆಲವರಲ್ಲಿ ಭಾಜನರಾಗುವ ಮೂಲಕ ಹರಿಹರ ತಾಲೂಕಿಗೆ ಹೆಗ್ಗಳಿಕೆ ತಂದಿದ್ದಾರೆ.
ಸಾಮಾನ್ಯವಾಗಿ ಸಿದ್ದಾರೂಢ ಪರಂಪರೆಯಲ್ಲಿ ತತ್ವ ಪದಗಳನ್ನು ಹಾಡಲು ಏಕದಾರಿ ವಾಧ್ಯವನ್ನು ಬಳಸುತ್ತಾರೆ. ಸಂತ ಶಿಶುನಾಳ ಷರೀಪರು, ಮೀರಾಬಾಯಿ, ಸೂಪಿ ಸಂತರು, ಕೋಲಾರ ಜಿಲ್ಲೆಯ ಭ್ರಹ್ಮ ಜ್ಞಾನಿಗಳಾದ ಎಲಿತಾತರು, ನಿಜಗುಣ ಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು ಬಳಸಿದ ಈ ಏಕದಾರಿ ( ಒಂದು ತಂತಿ ವಾಧ್ಯ) ತತ್ವ ಪದಗಳ ಗಾಯನಕ್ಕೆ ಇವರಿಗೆ ಪ್ರಶಸ್ತಿ ಒಲಿದು ಬಂದಿದೆ.ಭಜನೆ ಪರಂಪರೆ ಹೊಂದಿದ್ದ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಗುಂಡಾಭಕ್ತರ ಬಸಪ್ಪ ಹಾಗೂ ಶಾಂತಮ್ಮ ಇವರ ಮಗನಾದ ಪರಮೇಶ್ವರಪ್ಪ ಬಿ.ಎ. ವ್ಯಾಸಂಗ ಮಾಡಿ 1979ರಲ್ಲಿ ಹರಿಹರದ ಖಾಸಗಿ ಕಂಪನಿಯ ಉದ್ಯೊಗಿಯಾಗಿದ್ದರೂ, ತಂದೆಯ ಒಡನಾಟದಲ್ಲಿ ತತ್ವಪದ, ಜಾನಪದ, ಸಂಗೀತ ಹಾಗೂ ಜಾನಪದ ಸಂಗ್ರಹ ಕಾರ್ಯದ ಬಗೆಗೆ ಆಸಕ್ತಿ ಹೊಂದಿದ್ದರು. 1975ರಿಂದಲೇ ತಮ್ಮ ಕಲೆಯನ್ನು ಲೋಕಾರ್ಪಣ ಮಾಡುವ ಮೂಲಕ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಅನೇಕರ ಕಣ್ಮಣಿಯಾಗಿದ್ದರು.
ಜಾನಪದ ಸಾಹಿತ್ಯ ಸಂಗ್ರಹ:ಏನು ಹೇಳಲಿ ತಮ್ಮಾ ನಾ ನಿನಗೆ (ತತ್ವಪದ) ಗುಣಸಾಗರಿ ಮತ್ತು ಅವಳ ಹಾಡು (ಜಾನಪದ) ಜಾನಪದಲ್ಲಿ ಚನ್ನಪ್ಪ ಸ್ವಾಮಿಯ ಹಾಡುಗಳು (ಸಂಗ್ರಹ) ಮಾರಿಕೊಪದ ಹಳದಮ್ಮ ದೇವಿ ಹಾಡುಗಳ ಮತ್ತು ಕಥೆಗಳು (ಜಾನಪದ) 3 ಸಾವಿರ ಗಾದೆಗಳನ್ನು (ಸಹಯೋಗದಲ್ಲಿ ಸಂಗ್ರಹ) ಸಂಗ್ರಹಿಸಿದ್ದಾರೆ.
ಇವರು 1992 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ದಾವಣಗೆರೆ ಮೂರು ದಿನಗಳವರೆಗೆ ಜಾನಪದ ಸಂಗ್ರಹ ಹಾಗೂ ಸಂಶೋಧನಾ ತರಬೇತಿ ಶಿಬಿರ, 2007 ರಲ್ಲಿ ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕ ಇವರು ಆಯೋಜಿಸಿದ್ದ 3 ದಿನಗಳ ಜಾನಪದ ಕಮ್ಮಟ ಹಾಗೂ ಯುವಜನ ಮೇಳ, ತಾಲೂಕು ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಮೇಳದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರ ಸೇವೆ. ಕಲಾವಿದ ಮತ್ತು ತರಬೇತುದಾರರಾಗಿ ತೀರ್ಪುಗಾರನಾಗಿ ಭಾಗವಹಿಸಿದ್ದರು.ಸಂಗೀತ ಸೇವೆ, ಧ್ವನಿ ಸುರುಳಿಗಳು: ಹಬ್ಬಾಬಂತು ಹಬ್ಬ, ರಸಗಂಗೆ ಸಂಗ್ರಹ, ಬಣ್ಣದ ಗೆಜ್ಜೆ, ಮಲೆಯ ಮಾದೇಶ್ವರ ಭಾಗ-2,ಹಸಿರು ಧ್ವನಿ, ರೈತರ ಗೀತೆ( ಹಸಿರು ಧ್ವನಿ) ಚನ್ನೇಶ್ವರಗಾನ ಕಲಾ ಸಂಘ ಹೊನ್ನಾಳಿಯ ಹಿರೇ ಕಲ್ಮಠದಲ್ಲಿ ಶಿವನುಭವ ಗೋಷ್ಠಿಯಲ್ಲಿ ನಿರಂತರ ಸೇವೆ, ಹರಿಹರದ''''''''ನಂದಿ ಸಾಂಸ್ಕೃತಿಕ ಕಲಾತಂಡ, ಭದ್ರಾವತಿಯ ಆಕಾಶವಾಣಿಯಲ್ಲಿ "ಏಕದಾರಿ ತತ್ವಪದ ಹಾಡಿದ್ದಾರೆ.
ಪುರಸ್ಕಾರ, ಬಿರುದುಗಳು: ಜಾನಪದದ ವಿವಿಧ ಕಾರ್ಯಕ್ರಮಗಳಲ್ಲಿ ಆಧ್ಯಕ್ಷತೆ ವಹಿಸಿದ್ದ ಇವರಿಗೆ ವರ್ಷದ ಪ್ರತಿಭಾವಂತ ಪುರಸ್ಕಾರ, ಜಾನಪದ ಪ್ರತಿಭೆ, ಜಾನಪದ ಗಾಯಕ ಸನ್ಮಾನ, ಕನ್ನಡ ರಾಜ್ಯೋತ್ಸವ ಸನ್ಮಾನ, ಗ್ರಾಮೀಣ ಸಿರಿ, ಜಾನಪದ ಜಂಗಮ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಜಾನಪದ ಕಲಾವಿದ, ಜಾನಪದ ಪರಮಶ್ರೀ, ಪುರಸ್ಕಾರ, ತತ್ವಪದ ಗಾಯಕ ಪುರಸ್ಕಾರ, ಸರ್ವಜ್ಞ ಪ್ರತಿಷ್ಠಾನ ಸನ್ಮಾನ, ದಾವಣಗೆರೆ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವ ಪುರಸ್ಕಾರ,ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸೇರಿದಂತೆ ಹಲವು ಪುರಸ್ಕಾರಗಳು ಒಲಿದು ಬಂದಿವೆ.