ಸವಾಲುಗಳ ನಡುವೆ ಸಾಧನೆ ಮಾಡಿದವರೇ ನಿಜವಾದ ನಾಯಕ: ವಿ.ಎಸ್. ಪಾಟೀಲ

KannadaprabhaNewsNetwork |  
Published : Oct 08, 2025, 01:01 AM IST
ಮುಂಡಗೋಡ: ಮಂಗಳವಾರ ಇಲ್ಲಿಯ ನಗರಸಭಾ ಭವನದಲ್ಲಿ ತಾಲೂಕು ಆಡಳಿತ, ತಾ.ಪಂ, ಪ.ಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಜರುಗಿತು. ಮಹರ್ಷಿ ವಾಲ್ಮೀಕಿ ಭಾವ ಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. | Kannada Prabha

ಸಾರಾಂಶ

ಸಾಕಷ್ಟು ಸವಾಲುಗಳ ನಡುವೆಯೂ ಸಾಧನೆ ಮಾಡಿದವರೇ ನಿಜವಾದ ನಾಯಕರಾಗುತ್ತಾರೆ.

ಕನ್ನಡಪ್ರಭ ವಾರ್ತೆ ಮುಂಡಗೋಡ

ಸಾಕಷ್ಟು ಸವಾಲುಗಳ ನಡುವೆಯೂ ಸಾಧನೆ ಮಾಡಿದವರೇ ನಿಜವಾದ ನಾಯಕರಾಗುತ್ತಾರೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.

ಮಂಗಳವಾರ ಇಲ್ಲಿಯ ನಗರಸಭಾ ಭವನದಲ್ಲಿ ತಾಲೂಕು ಆಡಳಿತ, ತಾಪಂ ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವ ಸಮಾಜದಲ್ಲಿ ಹುಟ್ಟುತ್ತೇವೆ ಎಂಬುವುದಕ್ಕಿಂತ ಏನು ಸಾಧನೆ ಮಾಡಿದ್ದೇವೆ ಎಂಬುವುದು ಮುಖ್ಯವಾಗುತ್ತದೆ. ನಮ್ಮ ಅಜ್ಜ ಮುತ್ತಜ್ಜರ ಹೆಸರು ನಮಗೆ ನೆನಪಿರುವುದಿಲ್ಲ. ಆದರೆ ಮಹಾತ್ಮರು ಮಾಡಿದ ಸಾಧನೆಯಿಂದಾಗಿ ನೂರಾರು ವರ್ಷಗಳು ಕಳೆದರೂ ಕೂಡ ಇಂದಿಗೂ ಅವರ ಹೆಸರು ಅಜರಾಮರವಾಗಿ ಉಳಿಯಲು ಸಾಧ್ಯವಾಗಿದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಕ್ರಾಂತಿ ಮಾಡಿದ ನಾಯಕರ ಜಯಂತಿ ಮಾಡಲಾಗುತ್ತದೆ. ವಾಲ್ಮೀಕಿ, ಅಂಬೇಡ್ಕರ್‌, ಬಸವಣ್ಣ ಹೀಗೆ ಹಲವು ನಾಯಕರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೆ ಇಂದಿನ ತಂದೆ-ತಾಯಂದಿರು ಯಾರು ಕೂಡ ತಮ್ಮ ಮಕ್ಕಳು ಅಂಬೇಡ್ಕರ್‌ ಅಥವಾ ವಾಲ್ಮೀಕಿಯಾಗಲೆಂದು ಬಯಸುವುದಿಲ್ಲ. ಬದಲಾಗಿ ಎಂಜಿನಿಯರ್ ಅಥವಾ ವೈದ್ಯರಾಗಬೇಕೆಂದು ಬಯಸುತ್ತಾರೆ. ಸಮಾಜ, ಧರ್ಮ, ದೇಶ ರಕ್ಷಣೆ ಬಗ್ಗೆ ಚಿಂತನೆ ಕ್ಷೀಣಿಸಿದೆ. ಮಹಾನ ವ್ಯಕ್ತಿಗಳ ಸಾಧನೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ನಮ್ಮ ದೇಶದ ಸಂಸ್ಕೃತಿಯನ್ನು ಉಯಳಿಸುವ ಕೆಲಸವನ್ನು ಮಡಬೇಕು ಎಂದು ಕರೆ ನೀಡಿದರು.

ಮೆರವಣಿಗೆ:

ಇದಕ್ಕೂ ಮುನ್ನ ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು.

ತಹಸೀಲ್ದಾರ ಶಂಕರ ಗೌಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಸುರೇಶ ಕಲ್ಲಳ್ಳಿ, ರಾಘವೇಂದ್ರ ಮಳಗಿಕರ, ದಲಿತ ಮುಖಂಡ ಚಿದಾನಂದ ಹರಿಜನ, ಪಪಂ ಸದಸ್ಯ ಶ್ರೀಕಾಂತ ಸಾನು, ಅಶೋಕ ಚಲವಾದಿ, ಬಿಬಿಜಾನ ಮುಲ್ಲಾನವರ, ಅರುಣ ಗಸ್ತಿ, ಹನ್ಮಂತಪ್ಪ ತಳವಾರ ಮುಂತಾದವರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ