ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಬಸವಕಲ್ಯಾಣ ಇವರ ಸಹಯೋಗದಲ್ಲಿ ನಗರದ ಥೇರ್ ಮೈದಾನದಲ್ಲಿ ಹಮ್ಮಿಕೊಂಡ ದ್ವಿತೀಯ ಕಾಯಕ ಉತ್ಸವದ ಕಾಯಕ ಚಿಂತನ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
12ನೇ ಶತಮಾನದ ಬಸವಾದಿ ಶಿವಶರಣರ ತತ್ವ ಹೇಳಲಿಕ್ಕೆ ಬರುವುದು ಬಹಳ ಸುಲಭ. ಆದರೆ ಆಚರಣೆಯಲ್ಲಿ ತರುವುದು ತುಂಬಾ ಕಷ್ಟಕರ ಕೆಲಸವಾಗಿದೆ. ಮನುಷ್ಯ ಮಾತನಾಡುವುದರ ಜೊತೆಗೆ ಕಾಯಕಕ್ಕೆ ಆದ್ಯತೆ ನೀಡಬೇಕು. ಶರಣರ ಕಾಯಕ ಎಂಬ ಪರಿಕಲ್ಪನೆ ಸುಂದರ ಪರಿಕಲ್ಪನೆಯಾಗಿದೆ ಎಂದರು.ಬಸವ ಮಹಾಮನೆಯ ಸಿದ್ದರಾಮ ಶರಣ ಬೆಲ್ದಾಳ ಮಾತನಾಡಿ, ಬಸವಾದಿ ಶಿವಶರಣರು ಕಾಯಕಕ್ಕೆ ಮೊದಲಾದ್ಯತೆ ನೀಡಿದರು. ಜಗತ್ತಿನ 16 ಧರ್ಮಗಳ ಕುರಿತು ನಾನು ಅಧ್ಯಯನ ಮಾಡಿದ್ದೇನೆ. ಆದರೆ ಕಾಯಕ ತತ್ವ ಸಿಗುವುದು ಕೇವಲ ಬಸವಾದಿ ಶಿವಶರಣರ ತತ್ವದಿಂದ ಮಾತ್ರ, ದೇಶದ ಆರ್ಥಿಕತೆ ನೀತಿ ಸಮತೋಲನೆ ನೀತಿ ಬರಬೇಕಾದರೆ ಸತ್ಯ, ಶುದ್ಧ ಕಾಯಕ ಮಾಡಿ ಆರ್ಥಿಕ ನೀತಿ ಕಾಪಾಡಿದರೆ ದೇಶದ ಆರ್ಥಿಕತೆ ಇನ್ನೂ ಎತ್ತರಕ್ಕೆ ಹೋಗುತ್ತದೆ ಎಂದು ಹೇಳಿದರು.
ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು, ಗವಿ ಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬೇಲೂರ ಉರಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಡಾ. ಯುವರಾಜ ಬಿರಾದಾರ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ವಿಕಾಸ ಅಕಾಡೆಮಿಯ ಸಂಚಾಲಕ ರೇವಣಸಿದ್ದಪ್ಪಾ ಜಲಾದೆ, ಮುಖ್ಯಗುರು ಸೂರ್ಯಕಾಂತ ಕೆ. ಪಾಟೀಲ, ಯಶಸ್ವಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕಿ ಕಾವೇರಿ ಪಾಟೀಲ ಉಪಸ್ಥಿತರಿದ್ದರು.