ಉಚಿತ ಎಕ್ಸ್ ರೇ ಪರೀಕ್ಷೆಯಿಂದ ಕ್ಷಯ ರೋಗ ಪತ್ತೆ: ಡಾ.ಎಂ.ಎನ್.ಆಶಾಲತಾ

KannadaprabhaNewsNetwork |  
Published : May 23, 2026, 01:45 AM IST
22ಕೆಎಂಎನ್ ಡಿ17 | Kannada Prabha

ಸಾರಾಂಶ

ಕ್ಷಯ ರೋಗ ಪತ್ತೆಗೆ ಉಚಿತ ಎಕ್ಸ್ ರೇ ಮಾಡಲಾಗುವುದು. ಜನರು ಇದರ ಪ್ರಯೋಜನ ಪಡೆಯುವಂತೆ ಡಾ.ಆಶಾಲತಾ ತಿಳಿಸಿದರು.

ಮದ್ದೂರು: ಕ್ಷಯ ರೋಗ ಪತ್ತೆಗೆ ಉಚಿತ ಎಕ್ಸ್ ರೇ ಮಾಡಲಾಗುವುದು. ಜನರು ಇದರ ಪ್ರಯೋಜನ ಪಡೆಯುವಂತೆ ಡಾ.ಆಶಾಲತಾ ತಿಳಿಸಿದರು.

ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನದ ಶಿಬಿರದಲ್ಲಿ ಎಕ್ಸ್ ರೇ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಹ್ಯಾಂಡ್ ಹೆಲ್ಡ್ ಎಕ್ಸ್ ರೇಯಿಂದ ಕ್ಷಯ ರೋಗ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದರು. ಸಾರ್ವಜನಿಕರು ಉಚಿತ ಎಕ್ಸ್ ರೇ ಮಾಡಿಸಿಕೊಳ್ಳಬೇಕು. ರೋಗದ ಲಕ್ಷಣ ಇರುವವರಿಗೆ ಕಫ ಪರೀಕ್ಷೆ ಹಾಗೂ ಎಕ್ಸ್ ರೇ ಮಾಡಿಸುವ ಮೂಲಕ ಆದಷ್ಟು ಬೇಗ ಕ್ಷಯ ರೋಗ ಪತ್ತೆ ಮಾಡಬಹುದು. ರೋಗ ದೃಢಪಟ್ಟರೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ತಿಳಿಸಿದರು.

ವೈದ್ಯಾಧಿಕಾರಿ ಡಾ.ನವ್ಯಶ್ರೀ ಮಾತನಾಡಿ, ಕ್ಷಯವನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಂಡರೆ ರೋಗವನ್ನು ಗುಣಪಡಿಸಬಹುದು ಎಂದರು.

ಈ ವೇಳೆ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜನಾರ್ಧನ, ಡಿಪಿಸಿ ಹರ್ಷ, ಪಿಪಿಎಂ ನವೀನ್, ಎಲ್ ಟಿಒ ದಿನೇಶ್, ಪಿಎಚ್ ಸಿ ಒ ಸುಮಲತಾ, ಕ್ಷ- ಕಿರಣ ತಂತ್ರಜ್ಞೆ ಚೇತನಾ, ಎಸ್ ಟಿಎಸ್ ಕೆಂಪೇಗೌಡ, ಎಸ್ ಟಿಎಲ್ ಎಸ್ ಅರುಣ್ ಕುಮಾರ್, ಕೆಎಚ್ಪಿಟಿ ಸಚಿನ್, ಭವ್ಯ, ನಿಸರ್ಗ ,ಆಶಾ ಕಾರ್ಯಕರ್ತೆ ವಿದ್ಯಾಶ್ರೀ ಹಾಗೂ ಸಾರ್ವಜನಿಕರು ಹಾಜರಿದ್ದರು.

ಶಾಸಕ ಹುಟ್ಟುಹಬ್ಬ ಶುಭಹಾರೈಸಿ ಮುಸ್ಲಿಂಮರಿಂದ ಪ್ರಾರ್ಥನೆ

ಶ್ರೀರಂಗಪಟ್ಟಣ: ಶಾಸಕ ಹಾಗೂ ಸೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡರ 59ನೇ ವರ್ಷದ ಹುಟ್ಟುಹಬ್ಬವನ್ನು ಮುಸ್ಲಿಂ ಬಾಂಧವರು ಪಟ್ಟಣದ ಟಿಪ್ಪು ಮಡಿದ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಆಚರಿಸಿದರು. ಈ ವೇಳೆ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದರು. ಈ ವೇಳೆ ಅಬ್ದುಲ್ ರೌಫ್, ಇಮ್ರಾನ್. ಇರ್ಫಾನ್, ಸಲೀಂ, ಅನ್ಸರ್, ಲಿಯಾಕತ್, ಅಕ್ರಮ್, ಅಫ್ಸರ್, ಸೈಯದ್ ಜುಲ್ಫಿಕರ್ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಬೀಜ, ಗೊಬ್ಬರ ಮಾರಾಟ ಮಾಡಿದರೆ ಕಾನೂನು ಕ್ರಮ: ಡಿಸಿ
ಧಾರವಾಡ ಪ್ರತ್ಯೇಕ ಪಾಲಿಕೆಗೆ 7 ದಿನದ ಗಡುವು!