ಹೆಬ್ರಿ: ಪಶ್ಚಿಮ ಘಟ್ಟದಲ್ಲಿ ಸುರಂಗ ಮಾರ್ಗವು ಇಲ್ಲಿನ ಪರಿಸರದ ಮೇಲೆ ಭಾರಿ ಪರಿಣಾಮ ಬೀರಲಿದ್ದು, ಇದು ಅಪಾಯಕ್ಕೆ ದಾರಿಯಾಗಲಿದೆ ಎಂದು ಪರಿಸರಪರ ಹೋರಾಟಗಾರ, ಅಂತಾರಾಷ್ಟ್ರೀಯ ಖ್ಯಾತಿ ಕಲಾವಿದ ದಿನೇಶ್ ಹೊಳ್ಳ ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನೇತ್ರಾವತಿ ನದಿ ತಿರುವು ಯೋಜನೆ ಪರಿಣಾಮವನ್ನು ಅನುಭವಿಸುತಿದ್ದೇವೆ. ಪಶ್ಚಿಮ ಘಟ್ಟ ಪರಿಸರದಲ್ಲಿ ಅನೇಕ ರೀತಿಯ ಪ್ರಕೃತಿಗೆ ವಿರುದ್ಧವಾದ ಯೋಜನೆಗಳು ಸಿದ್ದವಾಗಿವೆ. ಇದರಿಂದ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಕ್ಕೆ ತೊಂದರೆ ಕಾದಿದೆ. ಅವೈಜ್ಞಾನಿಕ ಯೋಜನೆಗಳು ಕೇವಲ ಹಣ ವ್ಯಯ ಮಾಡುವ ಯೋಜನೆಗಳಾಗುತ್ತವೆಯೇ ಹೊರತು ಜನರಿಗೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಬದಲಿಗೆ ಅಪಾಯವೇ ಹೆಚ್ಚು ಎಂದರು.
ಈ ಸಂದರ್ಭ ಅವರು ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆ ಕುರಿತು ಅನೇಕ ಕುತೂಹಲಕಾರಿ ವಿವರಗಳನ್ನು ನೀಡಿದರು ಮತ್ತು ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಅವರನ್ನು ಸಂಘಟಕ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು ಹಾಗೂ ಇತ್ತೀಚಿಗೆ ರಾಜ್ಯಪಾಲರಿಂದ ಪುಸ್ತಕ ಬಿಡುಗಡೆಯ ವಿಶೇಷ ಮನ್ನಣೆಗೆ ಪಾತ್ರರಾದ ಸಮಾಜ ಸೇವಕ ಉಡುಪಿ ವಿಶ್ವನಾಥ್ ಶೆಣೈ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಉಡುಪಿ ತಾಲೂಕ ಅಧ್ಯಕ್ಷ ರವಿರಾಜ್ ಎಚ್.ಪಿ., ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಭಂಡಾರಿ, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಉರಗ ತಜ್ಞ ಗುರುರಾಜ ಸನಿಲ್, ಗೋಶಾಲೆಯ ಟ್ರಸ್ಟಿ ಪದ್ಮನಾಭ ಆಚಾರ್ಯ, ಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್‌ನ ಡಾ. ಭಾರ್ಗವಿ ಐತಾಳ ಮತ್ತು ಡಾ. ರಾಮಚಂದ್ರ ಐತಾಳ, ಉದ್ಯಮಿ ಯೋಗೀಶ್ ಭಟ್, ರಾಮಕೃಷ್ಣ ಆಚಾರ್ಯ, ಜನಾರ್ದನ್ ಕೊಡವೂರು, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ನಿರೂಪಿಸಿದರು.