ನರಸಿಂಹರಾಜಪುರ: ಹಾಡಹಗಲೇ ರಬ್ಬರ್ ಯಲ್ಲಿದ್ದ ಲಕ್ಷಾಂತರ ರು. ಕಳವುಮಾಡಿದ್ದ ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ ನರಸಿಂಹರಾಜಪುರ ಪೊಲೀಸರು ₹1.20 ಲಕ್ಷ ನಗದು ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ನವಂಬರ್ 19 ರಂದು ಹಳೇ ಪೇಟೆ ಎನ್.ಆರ್.ಪುರ -ಶಿವಮೊಗ್ಗ ರಸ್ತೆಯ ರಬ್ಬರ್ ಅಂಗಡಿ ವ್ಯಾಪಾರಿ ಟಿನು ಥಾಮಸ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ವ್ಯಾಪಾರಮಾಡಿದ್ದ ಹಣವನ್ನು ಟೇಬಲ್ ಡ್ರಾಕ್ಕೆ ಹಾಕಿ ಲಾಕ್ ಮಾಡಿ, ಕೆಲಸ ದವರು ಇಲ್ಲದ ಕಾರಣ ಅಂಗಡಿ ಷಟರ್ ಎಳೆದು ಸಿಂಸೆಯ ತನ್ನ ಮನೆಗೆ ಊಟಕ್ಕೆ ಹೋಗಿದ್ದರು. ಮತ್ತೆ 1.30 ರ ಬಳಿಕ ಅಂಗಡಿಗೆ ಬಂದಾಗ ಅಂಗಡಿ ಕ್ಯಾಶ್ ಟೇಬಲ್ ನ ಡ್ರಾ ಲಾಕ್ ಒಡೆದು ಹಾಕಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಡ್ರಾ ದಲ್ಲಿದ್ದ ₹2.50 ಲಕ್ಷ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ದೂರು ನೀಡಿದ್ದು ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣ ತನಿಖೆಗೆ ನೇಮಿಸಿದ್ದ ತಂಡ ಸಿಸಿಟಿವಿ ಹಾಗೂ ವೈಜ್ಞಾನಿಕವಾಗಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಕಳ್ಳರ ಬೆನ್ನಟ್ಟಿದ್ದಾರೆ. ಇಬ್ಬರು ಆರೋಪಿಗಳನ್ನು ಬೇಲೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ ಕರೆ ತಂದು ವಿಚಾರಣೆ ನಡೆಸಿದಾಗ ಮೊಹಮ್ಮದ್ ಶಹಬಾದ್, ಜೆಮ್ ಶಿದ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಇಬ್ಬರು ಈ ಹಿಂದೆ ರಾಜ್ಯದ ಹಲವು ಕಳ್ಳತನದಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.ಇವರಿಂದ ಪೊಲೀಸರು ₹1.20 ಲಕ್ಷ ಹಾಗೂ ಅಪರಾಧಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಕಳ್ಳರನ್ನು ಬಂಧಿಸಿದ ಪೊಲೀಸ್ ತಂಡವನ್ನು ಚಿಕ್ಕಮಗಳುರು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.