ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸಾವು

KannadaprabhaNewsNetwork |  
Published : Mar 23, 2026, 02:45 AM IST
1)- 22ಎಚ್‌ ಆರ್‌ ಪಿ 5 - ಮೃತ ಮನು2)- 22ಎಚ್‌ ಆರ್‌ ಪಿ 6 - ಮೃತ ಪ್ರಜ್ವಲ್‌  | Kannada Prabha

ಸಾರಾಂಶ

ಮಂಜಪ್ಪ ಎಂಬವರು ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಈಜಾಡಲು ತೆರಳಿದ್ದರು.

ಹರಪನಹಳ್ಳಿ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಸಹೋದರರಿಬ್ಬರು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ತಾಲೂಕಿನ ಹಲುವಾಗಲು ಗ್ರಾಮದ ಬಳಿ ಭಾನುವಾರ ಸಂಜೆ ನಡೆದಿದೆ.

ಹಲುವಾಗಲು ನಿವಾಸಿಗಳಾದ ಎಂ.ಜಿ. ಮನು (19), ಎಂ.ಜಿ. ಪ್ರಜ್ವಲ್‌ (18) ಮೃತರು.

ಮಂಜಪ್ಪ ಎಂಬವರು ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಹಿರಿಯ ಪುತ್ರ ಮನು, ಎರಡನೇ ಪುತ್ರ ಪ್ರಜ್ವಲ್‌, ಮೂರನೇ ಪುತ್ರ ಚಿರಂಜೀವಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಕಿರಿಯ ಪುತ್ರ ಚಿರಂಜೀವಿಯನ್ನು ಮಾತ್ರ ರಕ್ಷಿಸಲು ತಂದೆಗೆ ಸಾಧ್ಯವಾಗಿದೆ. ಮೃತ ಮನು ಒಂದನೇ ವರ್ಷದ ಬಿಇ ವಿದ್ಯಾರ್ಥಿಯಾಗಿದ್ದ, ಪ್ರಜ್ವಲ್‌ ಪಿಯು ವಿದ್ಯಾರ್ಥಿಯಾಗಿದ್ದ.

ನದಿಯಲ್ಲಿ ಕೊಚ್ಚಿ ಹೋಗಿದ್ದ ಮೃತದೇಹಗಳನ್ನು ಗೃಹರಕ್ಷಕ ದಳದ ಡಿ. ಚಂದ್ರಪ್ಪ ನೇತೃತ್ವದ ವೆಂಕಟೇಶ, ನಾಗರಾಜ, ಪೈಲ್ವಾನ್‌ ರಾಮಚಂದ್ರಪ್ಪ ತಂಡ ಹುಡುಕಿ ದಂಡೆಗೆ ತಂದಿದ್ದಾರೆ. ಈ ತಂಡಕ್ಕೆ ಐದು ಸಾವಿರ ನಗದು ಬಹುಮಾನವನ್ನು ಪೊಲೀಸರು ನೀಡಿದ್ದಾರೆ.

ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‌ಐ ಕಿರಣಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿ
ಕೆರೆ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ: ಬಸವರಾಜ ಬೊಮ್ಮಾಯಿ