ಅಪ್ರಾಪ್ತ ಸೇರಿ ಇಬ್ಬರ ವಶ: ₹6.36 ಲಕ್ಷದ ಸ್ವತ್ತು ಜಪ್ತಿ

KannadaprabhaNewsNetwork |  
Published : Mar 24, 2025, 12:35 AM IST
23ಕೆಡಿವಿಜಿ4-ದಾವಣಗೆರೆ ಗ್ರಾಮಾಂತರ ಪೊಲೀಸರು ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು, ಒಟ್ಟು 6,36,600 ರು. ಮೌಲ್ಯದ ಸ್ವತ್ತು ಜಪ್ತು ಮಾಡಿದ್ದಾರೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಚಿತ್ರದಲ್ಲಿದ್ದಾರೆ. ..............23ಕೆಡಿವಿಜಿ5-ದಾವಣಗೆರೆ ಗ್ರಾಮಾಂತರ ಪೊಲೀಸರು ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು, ಒಟ್ಟು 6,36,600 ರು. ಮೌಲ್ಯದ ಸ್ವತ್ತು ಜಪ್ತು ಮಾಡಿದ್ದಾರೆ. | Kannada Prabha

ಸಾರಾಂಶ

ಮನೆ ಬಾಗಿಲುಗಳ ಬೀಗ ಒಡೆದು ಸರಣಿ ಮನೆಗಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಇಬ್ಬರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು, ಚಿನ್ನಾಭರಣ, 2 ಬೈಕ್‌, ಮೊಬೈಲ್‌, ನಗದು ಸೇರಿದಂತೆ ₹6.36 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ದಾವಣಗೆರೆಮನೆ ಬಾಗಿಲುಗಳ ಬೀಗ ಒಡೆದು ಸರಣಿ ಮನೆಗಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಇಬ್ಬರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು, ಚಿನ್ನಾಭರಣ, 2 ಬೈಕ್‌, ಮೊಬೈಲ್‌, ನಗದು ಸೇರಿದಂತೆ ₹6.36 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಬೇತೂರು ರಸ್ತೆಯ ಮುದ್ದಾ ಭೋವಿ ಕಾಲನಿಯ ನಿವಾಸಿ ಎಸ್.ಸಾದಿಕ್ (21) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾಗ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ತಾಲೂಕಿನ ಎಲೆಬೇತೂರು ಗ್ರಾಮದ ಪೂರ್ಣಿಮಾ ರಂಗನಾಥ ಎಂಬುವರ ಮನೆಯ ಬಾಗಿಲನ್ನು ಫೆ.22ರ ರಾತ್ರಿ ಯಾರೋ ಕಳ್ಳರು ಮುರಿದು, ಹಣ, ಒಡವೆ ಕಳವು ಮಾಡಿದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೇ ದಿನ ಬಿಳಿಚೋಡು ಪೊಲೀಸ್ ಠಾಣೆಯ ಮುಗ್ಗಿದರಾಗಿಹಳ್ಳಿ ಗ್ರಾಮದಲ್ಲಿ ಐದು ಮನೆಗಳಲ್ಲಿ ಸರಣಿ ಮನೆಗಳ್ಳತನವಾಗಿತ್ತು. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವ ರಾಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ಇ.ವೈ.ಕಿರಣಕುಮಾರ ನೇತೃತ್ವದಲ್ಲಿ ಪಿಎಸ್ಐಗಳಾದ ಹಾರೂನ್ ಅಕ್ತರ್, ಜೋವಿತ್ ರಾಜ್‌, ಅಬ್ದುಲ್ ಖಾದಲ್ ಜಿಲಾನಿ, ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡವು ಆರೋಪಿ ಎಸ್.ಸಾದಿಕ್‌, ಕಾನೂನುಸಂಘರ್ಷಕ್ಕೆ ಒಳಗಾದ ಬಾಲಕ ಇಬ್ಬರನ್ನೂ ವಶಕ್ಕೆ ಪಡೆದು, ಗ್ರಾಮಾಂತರ ಪೊಲೀಸ್ ಠಾಣೆಯ ಎಲೆಬೇತೂರು ಗ್ರಾಮದ ಕಳವು ಪ್ರಕರಣ, ಬಿಳಿಚೋಡು ಠಾಣೆಯ ಮನೆಗಳ್ಳತನದ ಸರಣಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಒಟ್ಟು 3.03 ಲಕ್ಷ ಮೌಲ್ಯದ 49.93 ಗ್ರಾಂ ತೂಕದ ಚಿನ್ನಾಭರಣ, 88 ಸಾವಿರ ರು. ಮೌಲ್ಯದ 760.29 ಗ್ರಾಂ ಬೆಳ್ಳಿ ವಸ್ತುಗಳು, 18,600 ರು. ಮೌಲ್ಯದ 2 ಮೊಬೈಲ್ ಫೋನ್, 15 ಸಾವಿರ ಮೌಲ್ಯದ ತಾಮ್ರದ ಹಂಡೆ, 12 ಸಾವಿರ ಮೌಲ್ಯದ 6 ಖಾಲಿ ಸಿಲಿಂಡರ್, 80 ಸಾವಿರ ರು. ಹಾಗೂ ಕೃತ್ಯಕ್ಕೆ ಬಳಸಿದ್ದ 1.20 ಲಕ್ಷ ಮೌಲ್ಯದ 2 ದ್ವಿಚಕ್ರ ವಾಹನಗಳು, 1 ಕಬ್ಬಿಣದ ರಾಡು ಸೇರಿದಂತೆ ಒಟ್ಟು 6,36,600 ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿತರಿಂದ ಒಟ್ಟು 9 ಪ್ರಕರಣ ಪತ್ತೆ ಮಾಡಲಾಗಿದೆ.ಎಸ್ಪಿ ಕಚೇರಿ ನಿರೀಕ್ಷಕ ಇಸ್ಮಾಯಿಲ್, ಸಿಬ್ಬಂದಿಗಳಾದ ನಾಗಭೂಷಣ, ವೀರೇಶ, ಮಹಮ್ಮದ್‌ ಯುಸೂಫ್ ಅತ್ತಾರ, ಪಿ.ಎಂ.ವೀರೇಶ,ಜಿ.ಎನ್‌.ರಾಜನಾಗ, ನಾಗರಾಜ ಕುಂಬಾರ, ಹನುಮಂತಪ್ಪ, ಬಿಳಿಚೋಡು ಠಾಣೆ ಸಿಬ್ಬಂದಿಯಾದ ಪ್ರವೀಣ, ಹನುಮಂತ ಸೇರಿದಂತೆ ಅಧಿಕಾರಿಗಳನ್ನು ಒಳಗೊಂಡ ತಂಡದ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಕ್ಯಾಪ್ಷನ್23ಕೆಡಿವಿಜಿ4ದಾವಣಗೆರೆ ಗ್ರಾಮಾಂತರ ಪೊಲೀಸರು ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು, ಒಟ್ಟು 6,36,600 ರು. ಮೌಲ್ಯದ ಸ್ವತ್ತು ಜಪ್ತಿ ಮಾಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸ್ಸಾಂ ಚುನಾವಣೆ ವೀಕ್ಷಕರಾಗಿ ಡಿಕೇಶಿ ನೇಮಕ
ಇನ್ನೆಷ್ಟು ದಿನ ಅಧಿಕಾರದಲ್ಲಿ ಇರ್ತೀನೋ ಗೊತ್ತಿಲ್ಲ: ಸಿಎಂ