(ಬ್ರೀಫ್‌) ದ್ವಿಚಕ್ರ ವಾಹನ ಧ್ವಂಸ: ಪ್ರಕರಣ ದಾಖಲು

KannadaprabhaNewsNetwork | Published : Oct 7, 2023 2:17 AM

ಸಾರಾಂಶ

ಕನಕಪುರ: ದ್ವಿಚಕ್ರ ವಾಹನ ಧ್ವಂಸ ಮಾಡಿರುವ ಆರೋಪದಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ.
ಕನಕಪುರ: ದ್ವಿಚಕ್ರ ವಾಹನ ಧ್ವಂಸ ಮಾಡಿರುವ ಆರೋಪದಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ. ತಾಲೂಕಿನ ಸಾತನೂರು ಹೋಬಳಿಯ ಕೋಟಳ್ಳಿ ಗ್ರಾಮದ ಸಚಿನ್ ಮತ್ತು ಪುರುಷೋತ್ತಮ್ ಇಬ್ಬರು ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪುರುಷೋತ್ತಮನ ದ್ವಿಚಕ್ರ ವಾಹನವನ್ನು ಸಚಿನ್‌ ಧ್ವಂಸಗೊಳಿಸಿದ್ದಾನೆಂದು ಪು ಪುರುಷೋತ್ತಮ್ ದೂರು ದಾಖಲಿಸಿದ್ದಾನೆ. ಘಟನೆ ನಡೆದ ಎರಡು ದಿನಗಳ ನಂತರ ತೋಟಹಳ್ಳಿಯ ಸಚಿನ್ ತಾಯಿ, ನನ್ನ ಮಗ ಸಚಿನ್ ಮೇಲೆ ನಾಗರಸನಕೋಟೆ ಗ್ರಾಪಂ ಸದಸ್ಯ ಸಂತೋಷ್ ಕುಮಾರ್, ದುಂತೂರಿನ ಮುತ್ತುರಾಜು ಮತ್ತು ಪುರುಷೋತ್ತಮ್ ಮೂವರು ಸೇರಿ ಹಲ್ಲೆ ಮಾಡಿದ್ದು, ಬಿಡಿಸಲು ಹೋದ ಮೇಲೂ ಈ ಮೂವರು ಹಲ್ಲೆ ಮಾಡಿದ್ದಲ್ಲದೆ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಪ್ರತಿ ದೂರು ಸಲ್ಲಿಸಿದ್ದಾರೆ. ಸಾತನೂರು ಪೊಲೀಸರು ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಓಂಪ್ರಕಾಶ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

Share this article