ಹುಣಸಗಿ: ಬೆಂಚಿಗಡ್ಡಿ ಹತ್ತಿರದ ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು, ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಆಲಮ್ ನಾಗಲ್ಯಾಂಡ್ (23), ಮಾರುತಿ ಮುತ್ತಗಿ (24) ಮೃತ ದುರ್ದೈವಿಗಳು. ಸೋಮವಾರ ಕೃಷ್ಣಾನದಿಯಲ್ಲಿ ಸ್ನಾನಕ್ಕಾಗಿ ತೆರಳಿದಾಗ ನಾಗಲ್ಯಾಂಡ್ ಮೂಲದ ಆಲಮ್ ಎನ್ನುವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಪಕ್ಕದಲ್ಲಿಯೇ ಇದ್ದ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮದ ಮಾರುತಿ ಎಂಬಾತನು ರಕ್ಷಣೆಗೆ ನೀರಿಗೆ ಇಳಿದಾಗ ಇಬ್ಬರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಮಂಗಳವಾರ ಅಗ್ನಿಶ್ಯಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇಬ್ಬರು ಹೈಡ್ರೋ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಸೆಕ್ಯೂರಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು. ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
22ವೈಡಿಆರ್6: ಆಲಮ್ ನಾಗಲ್ಯಾಂಡ್.
--22ವೈಡಿಆರ್7: ಮಾರುತಿ ಮುತ್ತಗಿ.