ಉಚ್ಚಿಲ ದಸರಾ-2025: ಪೂರ್ವಭಾವಿ ಸಭೆ

KannadaprabhaNewsNetwork |  
Published : Jul 06, 2025, 11:48 PM IST
06ದಸರಾ | Kannada Prabha

ಸಾರಾಂಶ

ಉಡುಪಿ ಉಚ್ಚಿಲ ದಸರಾ-2025ರ ಪೂರ್ವಭಾವಿ ಸಭೆಯಲ್ಲಿ ಪ್ರತೀದಿನ ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ, ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನ ರೀತಿಯ ವಸ್ತು ಪ್ರದರ್ಶನದೊಂದಿಗೆ ವೈಭವೋಪೇತ ವಿಸರ್ಜನಾ ಮೆರವಣಿಗೆ ಆಚರಿಸಲು ನಿರ್ಧರಿಸಲಾಯಿತು.

11 ದಿನಗಳ ಶಿಸ್ತುಬದ್ಧ, ಸಾಂಪ್ರಾದಾಯಿಕ ಉಡುಪಿ ಉಚ್ಚಿಲ ದಸರಾ ಉತ್ಸವಕ್ಕೆ ಸಂಕಲ್ಪ: ಡಾ.ಜಿ. ಶಂಕರ್

ಕನ್ನಡಪ್ರಭ ವಾರ್ತೆ ಉಚ್ಚಿಲಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ಬಾರಿ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ-2025 ಉತ್ಸವವು ಕ್ಷೇತ್ರದ ಸದ್ಭಕ್ತರ ಹಾಗೂ ದಾನಿಗಳ ಸಹಕಾರ- ಸಹಯೋಗದಿಂದ ಶಿಸ್ತುಬದ್ಧ ಹಾಗೂ ಸಾಂಪ್ರಾದಾಯಿಕವಾಗಿ ಜನಾಕರ್ಷಣೆಯೊಂದಿಗೆ ಆಯೋಜನೆ ಮಾಡಲು ಸಂಕಲ್ಪ ಮಾಡಲಾಗಿದ್ದು, ಎಲ್ಲರೂ ಸಹಕರಿಸುವಂತೆ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ ಮನವಿ ಮಾಡಿಕೊಂಡರು.ಅವರು ಭಾನುವಾರ ಉಡುಪಿ ಉಚ್ಚಿಲ ದಸರಾ-2025ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪ್ರತೀದಿನ ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ, ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನ ರೀತಿಯ ವಸ್ತು ಪ್ರದರ್ಶನದೊಂದಿಗೆ ವೈಭವೋಪೇತ ವಿಸರ್ಜನಾ ಮೆರವಣಿಗೆ ಆಚರಿಸಲು ನಿರ್ಧರಿಸಲಾಯಿತು.ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ಶಾಸಕರ ಯಶ್ಪಾಲ್ ಎ. ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಮೋಹನೆ ಬೆಂಗ್ರೆ, ಮಹಾಲಕ್ಷ್ಮೀ ದೇವಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಪ್ರಮುಖರಾದ ಅನಿಲ್ ಕುಮಾರ್ ಬೊಕ್ಕಪಟ್ಣ, ರತ್ನಾಕರ್ ಸಾಲ್ಯಾನ್, ಸುಜಿತ್ ಸಾಲ್ಯಾನ್, ಹರಿಯಪ್ಪ ಆರ್. ಕೋಟ್ಯಾನ್, ಶ್ರೀಪತಿ ಭಟ್ ಉಚ್ಚಿಲ, ಮನೋಜ್ ಕಾಂಚನ್, ಉಷಾರಾಣಿ ಬೋಳೂರು, ಸುಗುಣ ಎಸ್‌. ಕರ್ಕೇರ ಹಾಗೂ ಆಡಳಿತ ಸಮಿತಿಯ ಸದಸ್ಯರು, ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್ ಮಲ್ಪೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!