ಕೇಂದ್ರದಲ್ಲಿ ಬಿಜೆಪಿ ಸರ್ಕಾರ 11 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ‘ವಿಕಸಿತ ಭಾರತದ ಅಮೃತ ಕಾಲ ಆಚರಣೆ’ ನಡೆಸಲಾಗುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಮುಖರಾದ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ 11 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ‘ವಿಕಸಿತ ಭಾರತದ ಅಮೃತ ಕಾಲ ಆಚರಣೆ’ ನಡೆಸಲಾಗುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಮುಖರಾದ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ಈ 2 ತಿಂಗಳಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬುದ್ಧರ ವಿಚಾರಗೋಷ್ಠಿಗಳು, ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನಾಚರಣೆ ಇತ್ಯಾದಿ ವೈವಿಧಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.ಉತ್ತಮ ಆಡಳಿತಗಾರ ಇದ್ದರೆ ದೇಶ ಹೇಗೆ ಸರ್ವತೋಮುಖವಾಗಿ ಅಭಿವೃದ್‌ಧಿಯಾಗುತ್ತದೆ ಎಂಬುದನ್ನು ಇಂದಗಗಿನ ಭಾರತವೇ ಅತ್ಯುತಮ ಉದಾಹರಣೆಯಾಗಿದೆ. ಮೋದಿ ಅವರು ಮಾಡಿರುವ ಕೆಲಸಗಳು ಭಾರತದ ಇತಿಹಾಸದ ಪ್ರಮುಖ ಹೆಜ್ಜೆಗುರುತುಗಳಾಗಿವೆ ಎಂದವರು ಹೇಳಿದರು.ರಾಮಮಂದಿರ ನಿರ್ಮಾಣ, ಕಾಶ್ಮೀರದ 370ನೇ ವಿಧಿ ರದ್ದತಿ, ತ್ರುವಳಿ ತಲಾಕ್ ನಿಷೇಧ ಇತ್ಯಾದಿಗಳು ದೇಶದ ಬಹುಕೋಟಿ ಜನಸಾಮಾನ್ಯರ ಕನಸುಗಳನ್ನು ಮೋದಿ ಸರ್ಕಾರ ಈಡೇರಿಸಿದೆ, ಬಿಜೆಪಿ ಈಗ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ವಿಶ್ವದ ದೊಡ್ಡ ಪಕ್ಷವಾಗಿದೆ, ದೇಶದಲ್ಲಿ ಅತೀ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿರುವ, ಅತೀ ಹೆಚ್ಚು ಯುವ ಕಾರ್ಯಕರ್ತರಿರುವ, ಅತೀ ಹೆಚ್ಚು ಯುವ ಜನಪ್ರತಿನಿಧಿಗಳಿರುವ, ಅತೀ ಹೆಚ್ಚು ಎಸ್ಸಿಎಸ್ಟಿ ಜನಪ್ರತಿನಿಧಿಗಳಿರುವ ಏಕೈಕ ಪಕ್ಷ ಬಿಜೆಪಿ. ಈ ಬಿಜೆಪಿ ಸರ್ಕಾರ ಈದ ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದೆ. ಈ 11 ವರ್ಷಗಳ ಸಾಧನೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ರಾಜೇಶ ಕಾವೇರಿ, ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಸಂಧ್ಯಾ ರಮೇಶ್, ಗೀತಾಂಜಲಿ ಸುವರ್ಣ, ಶಿವಕುಮಾರ್ ಅಂಬಲಪಾಡಿ, ವಿಜಯಕುಮಾರ್ ಉದ್ಯಾವರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.