ಕನ್ನಡಪ್ರಭ ವಾರ್ತೆ ಉಡುಪಿರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘದ ಅಮೃತಮಹೋತ್ಸವದ ಅಂಗವಾಗಿ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೩೫ ವಿಶ್ವಕರ್ಮ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶವು ನಗರದ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು. ನಿವೃತ್ತ ತಹಶೀಲ್ದಾರ ಕೆ. ಮುರಳೀಧರ್ ಇವರು ಸಮಾವೇಶದ ಸರ್ವಾಧ್ಯಕ್ಷರಾಗಿದ್ದರು. ಅವರು ಸಂಘ ಸಂಸ್ಥೆಗಳು ತಮ್ಮ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಸಂಘ-ಸಂಸ್ಥೆಗಳ ನಡುವೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲು ಈ ಸಮಾವೇಶವು ಸಹಕಾರಿ ಎಂದು ಹೇಳಿದರು.
ರತ್ನಾಕರ ಆಚಾರ್ಯ ಸ್ವಾಗತಿಸಿದರು. ಸಹಚಿಂತನ ಮಾಸಪತ್ರಿಕೆಯ ಪ್ರಕಾಶಕ ಬಿ.ಎ. ಆಚಾರ್ಯ ಮಣಿಪಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ್ಪೂರು ಹರೀಶ್ ಆಚಾರ್ಯ ನಿರ್ವಹಿಸಿದರು. ಕೆ. ನಾಗರಾಜ ಆಚಾರ್ಯ ವಂದಿಸಿದರು. ರಥಶಿಲ್ಪ ರಾಜಗೋಪಾಲ ಆಚಾರ್ಯ ಕೋಟೇಶ್ವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಚಿಂತಕ ಜಿ.ಟಿ. ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜ ಸೇವಾ ಸಂಘ-ಸಂಸ್ಥೆಗಳು ಹೇಗೆ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿದರು.ಉಪನ್ಯಾಸಕ ದಿನೇಶ್ ಆಚಾರ್ಯ ಚೇಂಪಿ ಇವರು, ನಮ್ಮ ಕುಲಕಸುಬುಗಳನ್ನು ಹೇಗೆ ಪುನರುತ್ಥಾನಗೊಳಿಸಬಹುದು ಎಂದು ವಿವರಿಸಿದರು.
ದಾಮೋದರ ಶರ್ಮ ಬಾರಕೂರು ಇವರು ಸಾಮಾಜಿಕ-ಧಾರ್ಮಿಕ ಚಿಂತನ ಕಾರ್ಯಕ್ರಮ ನಡೆಸಿಕೊಟ್ಟರು. ಜಯಕರ ಆಚಾರ್ಯ ಕರಂಬಳ್ಳಿ ಸ್ವಾಗತಿಸಿ, ಪರಿಚಯಿಸಿ, ವಂದಿಸಿದರು.