ರಾಜ್ಯಕ್ಕೆ ಮುಖ್ಯ) ಉಡುಪಿ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ

KannadaprabhaNewsNetwork |  
Published : Mar 14, 2026, 02:45 AM IST
13ಆಸ್ತಿ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಅಬಕಾರಿ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಟಿ.ಎಂ. ಅವರ ಮನೆ, ಕಚೇರಿಗಳಲ್ಲಿ ದಾಳಿ ನಡೆಸಿದ ಕರ್ನಾಟಕ ಲೋಕಾಯುಕ್ತ ಪೊಲೀಸರು ಅದಾಯಕ್ಕೆ ಮೀರಿದ ಸುಮಾರು 8,69,23,435 ರು. ಆಸ್ತಿಪಾಸ್ತಿಗಳನ್ನು ಪತ್ತೆ ಮಾಡಿದ್ದಾರೆ.

ಉಡುಪಿ: ಉಡುಪಿ ಜಿಲ್ಲಾ ಅಬಕಾರಿ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಟಿ.ಎಂ. ಅವರ ಮನೆ, ಕಚೇರಿಗಳಲ್ಲಿ ದಾಳಿ ನಡೆಸಿದ ಕರ್ನಾಟಕ ಲೋಕಾಯುಕ್ತ ಪೊಲೀಸರು ಅದಾಯಕ್ಕೆ ಮೀರಿದ ಸುಮಾರು 8,69,23,435 ರು. ಆಸ್ತಿಪಾಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರು ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿರುವ ಶ್ರೀನಿವಾಸ್ ಅವರಿಗೆ ಸೇರಿದ ಆಸ್ತಿಪಾಸ್ತಿಗಳಿರುವ 15 ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭ ಒಟ್ಟು 11 ನಿವೇಶನಗಳು, 6 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು, ಎಲ್ಲ ಸೇರಿ ಒಟ್ಟು 6.90,64,716 ರು. ಮೌಲ್ಯದ ಸ್ಥಿರಾಸ್ತಿ, 3,95,941 ರು. ನಗದು, 1,47,50,506 ರು. ಮೌಲ್ಯದ ಚಿನ್ನಾಭರಣ, 17,00,000 ರು. ಮೌಲ್ಯದ ವಾಹನಗಳು, 25,75,000 ರು. ಬ್ಯಾಂಕ್ ಠೇವಣಿ, 72,68,554 ರು. ಬೆಲೆಬಾಳುವ ವಿದೇಶಿ ಮದ್ಯ ಮತ್ತಿತರ ವಸ್ತುಗಳು ಸೇರಿ ಒಟ್ಟು ಮೌಲ್ಯ 2,66.90,001 ರು. ಮೌಲ್ಯದ ಚರಾಸ್ತಿಗಳನ್ನು ಪತ್ತೆ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ: ಸಚಿವ ತಿಮ್ಮಾಪುರ
ಕನ್ಯಾಲು ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ