ಉಡುಪಿ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ : 9.15 ಲಕ್ಷ ರು. ವಿದ್ಯಾರ್ಥಿವೇತನ ವಿತರಣೆ

KannadaprabhaNewsNetwork | Published : Mar 10, 2025 12:18 AM

ಸಾರಾಂಶ

ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರುಗಿತು.

ಟ್ರಸ್ಟ್‌ನ ಅಧ್ಯಕ್ಷ ಬಿ.ಎ. ಆಚಾರ್ಯ ಮಣಿಪಾಲ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ 205 ವಿದ್ಯಾರ್ಥಿಗಳಿಗೆ 9.15 ಲಕ್ಷ ರು. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ ಆಚಾರ್ಯ ಅವರು ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್‌ನ ಪೋಷಕರಾದ ರಾಘವೇಂದ್ರ ಆಚಾರ್ಯ ಕೋಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.2024- 25 ನೇ ಸಾಲಿನ ಪ್ರತಿಭಾ ಪುರಸ್ಕಾರವನ್ನು ಪುಷ್ಪಾ ಗೌಡ, ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಇವಳಿಗೆ ನೀಡಿ ಗೌರವಿಸಲಾಯಿತು. ಎಂ.ಕಾಂ. ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಪ್ರೀತಿ ಎಂ. ಅಂಬಲಪಾಡಿ ಅವರನ್ನು ಗೌರವಿಸಲಾಯಿತು. ಡಾಕ್ಟರೇಟ್ ಪಡೆದಿರುವ ಡಾ. ಸದಾನಂದ ಆಚಾರ್ಯ ಬೈಕಾಡಿ, ಡಾ. ರಾಘವೇಂದ್ರ ಆಚಾರ್ಯ ಹಾಗೂ ಡಾ. ರಂಜಿತಾ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಧಾವರಾಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವೀರಣ್ಣ ಪತ್ತಾರ್, ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ಸಮಾಜದ ಘನತೆ ಗೌರವಗಳನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಟಿ.ಜಿ. ಆಚಾರ್ಯ ಹೆಬ್ರಿ ಸ್ವಾಗತಿಸಿದರು. ವಸಂತ ಆಚಾರ್ಯ ಕಾರ್ಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಉಷಾ ಬಿ. ಆಚಾರ್ಯರು ಟ್ರಸ್ಟ್‌ನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಡಾ. ಪ್ರತಿಮಾ ಜೆ. ಆಚಾರ್ಯ, ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿ, ಪ್ರೊ. ಭಾಸ್ಕರ ಆಚಾರ್ಯರು ವಂದಿಸಿದರು.

ಖ್ಯಾತ ಕಲಾವಿದ ಮಹೇಶ ಆಚಾರ್ಯ ಮರ್ಣೆ ಇವರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರದರ್ಶನವನ್ನು ಪ್ರೊ. ಎನ್.ಎಸ್. ಪತ್ತಾರ ಮಂಗಳೂರು ಉದ್ಘಾಟಿಸಿದರು. ಕಲಾವಿದ ಮಹೇಶ್ ಆಚಾರ್ಯರನ್ನು ಸನ್ಮಾನಿಸಲಾಯಿತು.

Share this article