ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಡಾ. ಗೀತಾ ದಿನೇಶ್ ಪುತ್ರನ್ ಅವರನ್ನು ಗೌರವಿಸಲಾಯಿತು.
ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಡಾ. ಗೀತಾ ದಿನೇಶ್ ಪುತ್ರನ್ ಅವರನ್ನು ಗೌರವಿಸಲಾಯಿತು.
ಸ್ತ್ರೀ ರೋಗ ತಜ್ಞರಾಗಿ, ಅನೇಕ ಬಡವರಿಗೆ ಧರ್ಮಾರ್ಥ ಹೆರಿಗೆ ಮಾಡಿಸಿ ಬಡ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಗೀತಾ ದಿನೇಶ್ ಪುತ್ರನ್ ಅವರನ್ನು ಮಹಿಳಾ ದಿನಾಚರಣೆಯಂಗವಾಗಿ ಸ್ವಗೃಹದಲ್ಲಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕೃಷ್ಣ ಹೆಬ್ಬಾರ್, ಸ್ವಸ್ಥ ಸಮಾಜಕ್ಕೆ ಸೇವಾ ಮನೋಭಾವದ ವೈದ್ಯರ ಅವಶ್ಯಕತೆ ಇದೆ, ಅಂತಹ ಮನೋಭಾವದ ಡಾ. ಗೀತಾ ದಿನೇಶ್ ಅವರ ಮಾನವೀಯ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಡಾ. ಗೀತಾ ಅವರು ಅವರ ವೃತ್ತಿ ಬದುಕಿನ ಅನೇಕ ಘಟನೆಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಗೀತಾ ವಾಗ್ಲೆ, ಹಿರಿಯ ನಾಯಕರಾದ ದಿನೇಶ್ ಪುತ್ರನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಮೀನಾಕ್ಷಿ ಮಾಧವ ಬನ್ನಂಜೆ, ರಮಾದೇವಿ, ಪುಷ್ಪ ಅಂಚನ್, ಸಂಧ್ಯಾ ತಿಲಕ್ ರಾಜ್, ಶಾಂತಾ ರೈ, ರೋಶನಿ ಶೆಟ್ಟಿ, ಜಯಶ್ರೀ ಶೇಟ್, ಶೋಭಾ ನಾಯ್ಕ ಮತ್ತಿತರರು ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.