ಉದ್ಯಾವರ: ಸಕಾಲದಲ್ಲಿ ಉತ್ತಮ ಮಳೆ ಬೆಳೆಯಾಗಿ ನಾಡು ಸುಬಿಕ್ಷೆಯಾಗುವಂತೆ ಇಲ್ಲಿನ ಕೇದಾರದ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಹಿಂಪ- ಬಜರಂಗ ದಳ, ದೇವಾಲಯಗಳ ಸಂವರ್ಧನ ಸಮಿತಿ ಮತ್ತು ಸ್ಥಳೀಯ ಕರ ಸೇವಕರ ತಂಡದ ವತಿಯಿಂದ ಪ್ರಸನ್ನ ಪೂಜೆ, ಕಲ್ಪೋಕ್ತ ಪೂಜೆ, ದೀಪಾರಾಧನೆ ಸೇವೆ, ಸಿಯಾಳ ಅಭಿಷೇಕ ನಡೆಸಲಾಯಿತು.
ಈ ಸಂದರ್ಭ ಕಾರ್ಯಕ್ರಮದ ಸಂಘಟಕ ಸಂತೋಷ್ ಸುವರ್ಣ, ವಿಹಿಂಪ- ಬಜರಂಗ ದಳದ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಜಯಕರ ಗಾಣಿಗ, ಘಟಕ ಸಂಯೋಜಕ ಜಯಂದ್ರ ಸುವರ್ಣ, ಶ್ರೀ ಬ್ರಹ್ಮಬೈದರ್ಕಳ ಗರಡಿಯ ಗುರಿಕಾರ ವೇಣುಗೋಪಾಲ ಉದ್ಯಾವರ, ಮಾಜಿ ಅಧ್ಯಕ್ಷ ದಿನೇಶ್ ಎಂ. ಸಾಲ್ಯಾನ್, ಶಿವರಾಮ ಗಾಣಿಗ ಕೇದಾರ್, ಶ್ರೀ ಭಗವತಿ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಭಾಸ್ಕರ್, ಅರ್ಚಕರಾದ ಸುಬ್ರಹ್ಮಣ್ಯ ಪಾಡಿತಾಯ, ಗುರುಪ್ರಸಾದ್ ಭಟ್ ಮಾಂಗೋಡು, ಮಾತೃಶಕ್ತಿಯ ಇಂದಿರಾ ಶಿವಾನಂದ, ದೇವಾಲಯದ ಮಾಜಿ ವ್ಯವಸ್ಥಾಪನಾ ಸದಸ್ಯ ದಿನೇಶ ಉಮನಪಾಡಿ, ಮೊಗವೀರ ಯುವ ಸಂಘಟನೆಯ ಸಂತೋಷ್ ಕುಮಾರ್,. ಉದ್ಯಾವರ ಗ್ರಾಪಂ ಮಾಜಿ ಸದಸ್ಯೆ ಸರೋಜಾ ಸುಧಾಕರ್ ಮುಂತಾದವರು ಉಪಸ್ಥಿತರಿದ್ದರು.